ನಿಮಿಷಾರ್ಧದಲ್ಲೇ ಧರಶಾಹಿಯಾದ 1750 ಕೋಟಿ ವೆಚ್ಚದ ನಿತೀಶ್ ಕುಮಾರ್ ರ ಕನಸಿನ ಚತುಷ್ಪಥ ಸೇತುವೆ..! - Mahanayaka
12:49 PM Thursday 21 - August 2025

ನಿಮಿಷಾರ್ಧದಲ್ಲೇ ಧರಶಾಹಿಯಾದ 1750 ಕೋಟಿ ವೆಚ್ಚದ ನಿತೀಶ್ ಕುಮಾರ್ ರ ಕನಸಿನ ಚತುಷ್ಪಥ ಸೇತುವೆ..!

04/06/2023


Provided by

ಬಿಹಾರದ ಭಾಗಲ್ಪುರದಲ್ಲಿ ದೊಡ್ಡ ದುರಂತವೊಂದು ನಡೆದಿದೆ. ಗಂಗಾನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದ ಸುಲ್ತಾನ್ ಗಂಜ್-ಅಗುವಾನಿ ಚತುಷ್ಪಥ ಸೇತುವೆ ಮತ್ತೆ ಗಂಗಾ ನದಿಯಲ್ಲಿ ಕುಸಿದು ಬಿದ್ದಿದೆ.

30ಕ್ಕೂ ಹೆಚ್ಚು ಸ್ಲ್ಯಾಬ್‌ ಗಳು ಅಂದರೆ ಸುಮಾರು 100 ಅಡಿಯಷ್ಟು ಭಾಗ ಕುಸಿದಿದೆ. ಈ ಸೇತುವೆಯನ್ನು ಖಗಾರಿಯಾ ಮತ್ತು ಭಾಗಲ್ಪುರ್ ಜಿಲ್ಲೆಗಳನ್ನು ಸಂಪರ್ಕಿಸಲು ನಿರ್ಮಿಸಲಾಗಿದೆ.

ಈ ಸೇತುವೆಯ ವೆಚ್ಚ ಸುಮಾರು 1750 ಕೋಟಿ ರೂಪಾಯಿ ಎನ್ನಲಾಗಿದೆ. ಇದು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಕನಸಿನ ಯೋಜನೆಯಾಗಿದೆ. ಈ ಸೇತುವೆಯ ಭಾಗವು ಕಳೆದ ವರ್ಷ ಏಪ್ರಿಲ್‌ನಲ್ಲಿಯೂ ಕುಸಿದಿತ್ತು. ಸೇತುವೆಯ ಒಂದು ಭಾಗವು ಗಂಗಾ ನದಿಯಲ್ಲಿ ಮುಳುಗಿರುವುದು ವೀಡಿಯೊದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ.

ಸೇತುವೆ ಕುಸಿತದ ಕುರಿತು ಹೇಳಿಕೆ ನೀಡಿರುವ ಬಿಹಾರ ರಾಜ್ಯ ಸೇತುವೆ ನಿರ್ಮಾಣ ನಿಗಮದ ಕಾರ್ಯವಾಹಕ ಅಭಿಯಂತ ಯೋಗೇಂದ್ರ ಕುಮಾರ್ ಖಗಾರಿಯಾ, ಕೆಲವು ಸ್ಪ್ಯಾನ್‌ ಗಳು ಮಾತ್ರ ಕುಸಿತು ಬಿದ್ದಿವೆ ಎಂದು ಹೇಳಿದ್ದಾರೆ.

ಇದು ಸಿಎಂ ನಿತೀಶ್ ಕುಮಾರ್ ಅವರ ಕನಸಿನ ಯೋಜನೆಯಾಗಿದೆ. ಆದರೆ ಸೇತುವೆ ನಿರ್ಮಾಣ ಮಾಡಿದ ಎಸ್ ಪಿ ಸಿಂಗ್ಲಾ ಕಂಪನಿ ಗುಣಮಟ್ಟದ ಕಾಮಗಾರಿ ಮಾಡಿಲ್ಲ. ಈ ಬಗ್ಗೆ ಉನ್ನತ ಮಟ್ಟದ ತನಿಖೆ ಆಗಬೇಕು ಮತ್ತು ತಪ್ಪಿತಸ್ಥರ ವಿರುದ್ಧ ಎಫ್‌ಐಆರ್ ದಾಖಲಿಸಬೇಕು ಎಂದು ಸಂಜೀವ್ ಕುಮಾರ್ ಒತ್ತಾಯಿಸಿದ್ದಾರೆ. ಈ ಯೋಜನೆಯ ನಿರ್ದೇಶಕ ಅಲೋಕ್ ಝಾ ಅವರ ಮೇಲೂ ಅವರು ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ