ಒಡಿಶಾ ರೈಲು ದುರಂತ: ಪತ್ರ ಬರೆದು ಮೋದಿ ವಿರುದ್ಧ ಖರ್ಗೆ ವಾಗ್ದಾಳಿ; ಪತ್ರದಲ್ಲಿ ಏನಿದೆ ಗೊತ್ತಾ..? - Mahanayaka

ಒಡಿಶಾ ರೈಲು ದುರಂತ: ಪತ್ರ ಬರೆದು ಮೋದಿ ವಿರುದ್ಧ ಖರ್ಗೆ ವಾಗ್ದಾಳಿ; ಪತ್ರದಲ್ಲಿ ಏನಿದೆ ಗೊತ್ತಾ..?

05/06/2023


Provided by

ಒಡಿಶಾದ ರಾಜ್ಯದ ಬಾಲಸೋರ್‌ನಲ್ಲಿ ನಡೆದ ಸರಣಿ ರೈಲು ಅಪಘಾತದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಎಐಸಿಸಿ ಅಧ್ಯಕ್ಷ, ಮಾಜಿ ರೈಲ್ವೇ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು ಪತ್ರ ಬರೆದು ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಸುಮಾರು ನಾಲ್ಕು ಪುಟಗಳ ಪತ್ರ ಬರೆದಿರುವ ಮಲ್ಲಿಕಾರ್ಜುನ ಖರ್ಗೆ ಅವರು ನೇಮಕಾತಿ, ತಾಂತ್ರಿಕ ಸಮಸ್ಯೆ ಮತ್ತು ಹಿಂದಿನ ತನಿಖೆಗಳನ್ನು ಉಲ್ಲೇಖಿಸಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಲೊಕೊ ಪೈಲಟ್‌ ಗಳು ಓವರ್ ಟೈಮ್ ಡ್ಯೂಟಿ ಮಾಡುತ್ತಿದ್ದಾರೆ ಎಂದು ಮಂಡಳಿ ಹೇಳಿದೆ. ಲೊಕೊ ಪೈಲಟ್‌ಗಳ ನೇಮಕಾತಿ ಯಾಕೆ ನಡೆದಿಲ್ಲ..? ಅವರ ಮೇಲೆ ಹೊರೆ ಹಾಕುವುದು ಜನರ ಸುರಕ್ಷತೆ ಸವಾಲು ಸ್ವೀಕರಿಸಿದಂತೆ. ಮೈಸೂರಿನಲ್ಲಿ ಎರಡು ರೈಲುಗಳ ಡಿಕ್ಕಿ ಸಾಧ್ಯತೆ ಉಲ್ಲೇಖಿಸಿ ಸಿಗ್ನಲ್ ಸಮಸ್ಯೆ ಕ್ರಮಕ್ಕೆ ಒತ್ತಾಯಿಸಿತ್ತು. ಈವರೆಗೂ ಯಾಕೆ ಕ್ರಮ ತೆಗೆದುಕೊಂಡಿಲ್ಲ..? ಎಂದು ಪ್ರಶ್ನಿಸಿದ್ದಾರೆ.

ಸಾರಿಗೆ, ಪ್ರವಾಸೋದ್ಯಮ ಮತ್ತು ಸಂಸ್ಕೃತಿಯ ಸಂಸದೀಯ ಸ್ಥಾಯಿ ಸಮಿತಿಯು ರೈಲ್ವೇ ಮಂಡಳಿಯ ಸಂಪೂರ್ಣ ನಿರಾಸಕ್ತಿ ಮತ್ತು ನಿರ್ಲಕ್ಷ್ಯವನ್ನು ಟೀಕಿಸಿದೆ. ಇದರ ವಿರುದ್ಧ ಯಾವ ಕ್ರಮ ತೆಗೆದುಕೊಳ್ಳಲಾಗಿದೆ..? ರೈಲ್ವೆ ಸುರಕ್ಷತೆ ನಿರ್ಲಕ್ಷ್ಯದ ಬಗ್ಗೆ ಸಿಎಜಿ ಕೂಡ ವರದಿ ನೀಡಿದೆ. 68% ಪ್ರಕರಣಗಳಲ್ಲಿ ತಡವಾಗಿ ತನಿಖಾ ವರದಿ ಸಲ್ಲಿಸಿದ್ದು, ಸೂಕ್ತ ಕ್ರಮವೂ ತೆಗೆದುಕೊಂಡಿಲ್ಲ. ಈ ಬಗ್ಗೆ ತೀವ್ರ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಹರಿಹಾಯ್ದಿದ್ದಾರೆ.

2011ರ ಹಿಂದಿನ ಸರ್ಕಾರದ ಅವಧಿಯಲ್ಲಿ ರಿಸರ್ಚ್ ಡಿಸೈನ್ಸ್ ಅಂಡ್ ಸ್ಟ್ಯಾಂಡರ್ಡ್ಸ್ ಆರ್ಗನೈಸೇಶನ್ (RDSO) ಯಶಸ್ವಿಯಾಗಿ ರಕ್ಷಾ ಕವಚ್ ಪರೀಕ್ಷಿಸಿತು. ಇದು ರೈಲುಗಳ ಘರ್ಷಣೆಯನ್ನು ತಡೆಯಲು ಉದ್ದೇಶಿಸಲಾಗಿತ್ತು. ನಿಮ್ಮ ಸರ್ಕಾರ ಕವಚ್ ಮರು ನಾಮಕರಣ ಮಾಡಿತು. ಇದಾದ ಮೇಲೂ ಈವರೆಗೂ ಕೇವಲ 4% ಅನುಷ್ಠಾನವಾಗಿದೆ. 100% ತಂತ್ರಜ್ಞಾನ ಅಳವಡಿಕೆಗೆ ವಿಫಲವಾಗಿದ್ದು ಯಾಕೆ ಎಂದು ಪ್ರಶ್ನಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ