ಮೊಬೈಲ್ ನಲ್ಲಿ ಲೊಕೇಶನ್ ಚೆಕ್ ಮಾಡಿ ಊರು ಬಿಟ್ಟ ಬಾಲಕ - Mahanayaka
10:55 PM Tuesday 18 - November 2025

ಮೊಬೈಲ್ ನಲ್ಲಿ ಲೊಕೇಶನ್ ಚೆಕ್ ಮಾಡಿ ಊರು ಬಿಟ್ಟ ಬಾಲಕ

adithya
06/06/2023

ಬೆಂಗಳೂರಿನಲ್ಲಿ ಬಾಲಕನೊಬ್ಬ ತನ್ನ ತಾಯಿಯ ಫೋನ್ ನಲ್ಲಿ ಲೊಕೇಶನ್ ಚೆಕ್ ಮಾಡಿ ಊರು ಬಿಟ್ಟಿದ್ದಾನೆ. ಆದಿತ್ಯಾ ಮನೆ ಬಿಟ್ಟ ಬಾಲಕನಾಗಿದ್ದು, 9 ನೇ ತರಗತಿ ಓದುತ್ತಿದ್ದಾನೆ. ಈತ ಮೇ 29 ರಂದು ಕಟ್ಟಿಂಗ್ ಶಾಪ್ ಗೆಂದು ಮನೆಯಿಂದ ಹೋಗಿದ್ದ ಎನ್ನಲಾಗಿದೆ.

ಮನೆಯಿಂದ ಹೊರಡೋ ಮುನ್ನ ಬಾಲಕ  ತಾಯಿ ಫೋನ್ ನಲ್ಲಿ ಮಲ್ಪೆ , ಮೈಸೂರಿನ ಕೆಲ ಭಾಗಗಳ ಬಗ್ಗೆ ಸರ್ಚ್ ಮಾಡಿದ್ದ. ಬಳಿಕ ಮನೆಯಲ್ಲಿದ್ದ ಬಟ್ಟೆಗಳನ್ನ ತೆಗೆದುಕೊಂಡು ಹೋಗಿದ್ದಾನೆ. ಆದಿತ್ಯಾ ಮನೆ ಬಿಟ್ಟು ಹೋಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಪೋಷಕರು ಜ್ಯೋತಿಷ್ಯದ ಮೊರೆ ಹೋಗಿದ್ದಾರೆ. ಈ ವೇಳೆ ಜ್ಯೋತೀಷಿ ದಕ್ಷಿಣ ಕನ್ನಡ ಭಾಗದಲ್ಲಿದ್ದಾನೆಂದು ಹೇಳಿದ್ದಾರೆ. ಅಂತೆಯೇ ಜ್ಯೋತೀಷಿ ಮಾತು ಕೇಳಿ ಪೋಷಕರು ಕರಾವಳಿ ಭಾಗಕ್ಕೆ ಮಗನನ್ನ ಹುಡುಕಲು ಹೊರಟಿದ್ದಾರೆ. ದಕ್ಷಿಣ ಕನ್ನಡ, ಉಡುಪಿ ಭಾಗದಲ್ಲಿ ಪೋಷಕರು ಆದಿತ್ಯನಿಗಾಗಿ ಹುಡುಕಾಟ ನಡೆಸಿದ್ದಾರೆ
ಆರ್ ಟಿ ನಗರ ಸೇರಿದಂತೆ ಮಲ್ಪೆ ಭಾಗದ ಎಲ್ಲಾ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.

ಸದ್ಯ ಬಾಲಕ ಮೈಸೂರು ಭಾಗದಲ್ಲಿ ಇದ್ದಾನೆಂದು ಮಾಹಿತಿ ಸಿಕ್ಕದೆ. ಆದರೆ ಇನ್ನೂ ಕೂಡ ನಿಖರತೆ ಇಲ್ಲ. ಹಗಲು-ರಾತ್ರಿ ಮೈಸೂರು, ಕರಾವಳಿ ಭಾಗದಲ್ಲಿ ಪೊಲೀಸರ ಜೊತೆ ಪೋಷಕರು ಹುಡುಕಾಟ ನಡೆಸುತ್ತಿದ್ದಾರೆ. ಈ ಸಂಬಂಧ ಆರ್ ಟಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JdaVhZJabeA0V7XQ5ZJp92

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ