ಕಾಂಗ್ರೆಸ್ ಕಣ್ಣಿಗೆ ಸೂಲಿಬೆಲೆ ಲಾಡೆನ್ ತರ ಕಾಣ್ತಿದ್ದಾರಾ?: ಸಿ.ಟಿ.ರವಿ ಪ್ರಶ್ನೆ

ಚಿಕ್ಕಮಗಳೂರು: ಸೂಲಿಬೆಲೆ ದೇಶಭಕ್ತಿಗೆ ಕಾಂಗ್ರೆಸ್ ಸರ್ಟಿಫಿಕೇಟ್ ಬೇಕಾಗಿಲ್ಲ, ಕಾಂಗ್ರೆಸ್ ಕಣ್ಣಿಗೆ ಸೂಲಿಬೆಲೆ ಲಾಡೆನ್ ತರ ಕಾಣ್ತಿದ್ದಾರಾ? ಎಂದು ಮಾಜಿ ಶಾಸಕ ಸಿ.ಟಿ.ರವಿ ಕಿಡಿಕಾರಿದರು.
ಚಿಕ್ಕಮಗಳೂರಿನಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಲಾಡೆನ್ ಬಂದ್ರೆ ಬಿಟ್ಕೊಳ್ತಾರೆ, ಚಕ್ರವರ್ತಿ ವಿಚಾರ ಗೋಷ್ಠಿ ರದ್ದು ಮಾಡ್ತಾರೆ, ಇವರು ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುತ್ತಾರೆ. ಇದನ್ನು ಅಗೋಷಿತ ತುರ್ತು ಪರಿಸ್ಥಿತಿ ಅಂತ ಕರೆಯೋದಿಲ್ಲ, ಅಧಿಕಾರದ ಅತಿಯಾದ ಮದ ಅಂತ ಹೇಳ್ಬೋದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಧಿಕಾರದ ಅತಿಯಾದ ಮದ ಹೆಚ್ಚು ದಿನ ಇರಲು ಸಾಧ್ಯವಿಲ್ಲ, ಹಿಂದೆ ಕಾಂಗ್ರೆಸ್, ಸಂವಿಧಾನವನ್ನೇ ಬುಡಮೇಲು ಮಾಡಿ, ಪ್ರಜಾಪ್ರಭುತ್ವವನ್ನೇ ಹತ್ತಿಕ್ಕಿತ್ತು. ಜನ ಹಿಂದೆ ಕಾಂಗ್ರೆಸ್ಸಿಗೆ ಬುದ್ಧಿ ಕಲಿಸಿದ್ದನ್ನ ನೆನಪಿಟ್ಟುಕೊಳ್ಳಬೇಕು. ಮದ ಇಳಿಯೋದಕ್ಕೆ–ಇಳ್ಸೋದಕ್ಕೆ ಬಹಳ ಕಾಲಬೇಕಾಗಲ್ಲ ಎಂದು ಕಾಂಗ್ರೆಸ್ ವಿರುದ್ಧ ಸಿ.ಟಿ.ರವಿ ವಾಗ್ದಾಳಿ ನಡೆಸಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JdaVhZJabeA0V7XQ5ZJp92
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw