ದೈವಸ್ಥಾನದ ಕಾಣಿಕೆ ಡಬ್ಬ ಕಳವು ಮಾಡಿದವನಿಗೆ ಶಿಕ್ಷೆ - Mahanayaka
5:47 AM Friday 19 - September 2025

ದೈವಸ್ಥಾನದ ಕಾಣಿಕೆ ಡಬ್ಬ ಕಳವು ಮಾಡಿದವನಿಗೆ ಶಿಕ್ಷೆ

judgement
07/06/2023

ಉಡುಪಿ: ದೈವಸ್ಥಾನದ ಕಾಣಿಕೆ ಡಬ್ಬಗಳನ್ನು ಕಳವು ಮಾಡಿದ ಆರೋಪಿಗೆ ನಗರದ ಪ್ರಧಾನ ಸಿ.ಜೆ ಮತ್ತು ಸಿ.ಜೆ.ಎಮ್. ನ್ಯಾಯಾಲಯವು ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿದೆ.

2022 ಅಕ್ಟೋಬರ್ 30 ರಂದು ಬೆಳಗ್ಗೆ ಪ್ರಕಾಶ್ ಎಂಬಾತನು ಬಡಗುಬೆಟ್ಟುಗ್ರಾಮದ ಬೈಲೂರು ಶ್ರೀ ನೀಲಕಂಠ ಬಬ್ಬುಸ್ವಾಮಿ ದೈವಸ್ಥಾನದ ಕಾಣಿಕೆ ಡಬ್ಬಗಳನ್ನು ಕಳವು ಮಾಡಿರುವ ಹಿನ್ನೆಲೆ, ಉಡುಪಿ ನಗರ ಠಾಣೆಯ ಪೊಲೀಸ್ ನಿರೀಕ್ಷಕರು ಪ್ರಕರಣ ದಾಖಲಿಸಿಕೊಂಡು, ಆರೋಪಿಯ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣೆ ಪತ್ರ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆದು ಆರೋಪ ಸಾಬೀತಾದ ಹಿನ್ನೆಲೆ, ನಗರದ ಪ್ರಧಾನ ಸಿ.ಜೆ ಮತ್ತು ಸಿ.ಜೆ.ಎಮ್. ನ್ಯಾಯಾಲಯದ ನ್ಯಾಯಾಧೀಶ ವಿಘ್ನೇಶಾ ಕುಮಾರ್ ಅವರು ಆರೋಪಿ ಪ್ರಕಾಶ್ ಗೆ ಭಾ.ದಂ.ಸಂ.ಕಲಂ: 380 ಮತ್ತು 457ರ ಅಡಿ 1 ವರ್ಷ 6 ತಿಂಗಳು ಕಠಿಣ ಸಜೆ ಮತ್ತು ರೂ.2000 ದಂಡವಿಧಿಸಿದ್ದು, ದಂಡ ಪಾವತಿಸಲು ತಪ್ಪಿದಲ್ಲಿ1 ತಿಂಗಳ ಸಾಧಾರಣಾ ಶಿಕ್ಷೆವಿಧಿಸಿ, ತೀರ್ಪು ನೀಡಿರುತ್ತಾರೆ. ಸರ್ಕಾರದ ಪರವಾಗಿ ಹಿರಿಯ ಹಾಯಕ ಸರ್ಕಾರಿ ಅಭಿಯೋಜಕಿ ಜಯಂತಿಕೆ ವಾದ ಮಂಡಿಸಿರುತ್ತಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ