ಎಣ್ಣೆ ಜೊತೆ ವಿಷ ಸೇವಿಸಿದ ದೋಸ್ತಿಗಳು: ಓರ್ವ ಸಾವು

ಚಾಮರಾಜನಗರ: ಇಬ್ಬರು ಆತ್ನೀಯ ಸ್ನೇಹಿತರು ಮದ್ಯದ ಜೊತೆ ವಿಷದ ಮಾತ್ರೆ ಬೆರೆಸಿ ಕುಡಿದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಕೊಳ್ಳೇಗಾಲ ತಾಲೂಕಿನ ಮಧುವನಹಳ್ಳಿ ಬಳಿ ಗುರುವಾರ ನಡೆದಿದೆ.
ಕೊಳ್ಳೇಗಾಲ ತಾಲೂಕಿನ ಮಧುವನಹಳ್ಳಿ ಗ್ರಾಮದ ಮನು(19) ಹಾಗೂ ಇತ್ತಲದೊಡ್ಡಿ ಗ್ರಾಮದ ಆನಂದ್@ ನಾಗೇಂದ್ರ (19) ಆತ್ಮಹತ್ಯೆಗೆ ಯತ್ನಿಸಿದ್ದು ಇವರಲ್ಲಿ ನಾಗೇಂದ್ರ ಎಂಬಾತ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದು ಮನು ಎಂಬಾತನ ಸ್ಥಿತಿ ಚಿಂತಾಜನಕವಾಗಿದೆ.
ಮೃತ ನಾಗೇಂದ್ರ ಹಾಗೂ ಮನು ಇವರಿಬ್ಬರೂ ಸಹ ಪ್ರಾಣ ಸ್ನೇಹಿತರು ಜೊತೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. ನಾಗೇಂದ್ರ ಕೈಯಲ್ಲಿ ಮನು ಎಂಬ ಹೆಸರು ಹಾಗೂ ಮನು ಕೈಯಲ್ಲಿ ನಾಗೇಂದ್ರ ಎಂಬ ಹೆಸರನ್ನು ಇಬ್ಬರು ಸಹ ಅಚ್ಚೆ ಹಾಕಿಸಿಕೊಂಡಿದ್ದರು. ಇವರಿಬ್ಬರ ಸ್ನೇಹವನ್ನು ನೋಡಿ ಗ್ರಾಮದವರೇ ಆಪ್ತಮಿತ್ರರು ಎಂದು ಕರೆಯುತ್ತಿದ್ದರು.
ನಾಗೇಂದ್ರ ಅವರ ತಂದೆ ತಾಯಿ ಕೆಲ ದಿನಗಳ ಹಿಂದೆ ಇಬ್ಬರು ಸಹ ಸಾವನ್ನಪ್ಪಿದ್ದರು. ಇದರಿಂದ ಬೇಸತ್ತ ನಾಗೇಂದ್ರ ನನಗೆ ಅಪ್ಪ ಅಮ್ಮ ಯಾರು ಇಲ್ಲ ನಾನು ಜೀವನದಲ್ಲಿ ಬದುಕಿದ್ದರೂ ಸಹ ಪ್ರಯೋಜನವಿಲ್ಲ ಹಾಗಾಗಿ ನಾನು ಬದುಕುವುದು ವ್ಯರ್ಥ ಎಂದು ಆಗಾಗ ಹೇಳುತ್ತಿದ್ದನಂತೆ.
ಇದರಿಂದ ಬೇಸತ್ತು ಇವರಿಬ್ಬರೂ ಸಹ ಕೊಳ್ಳೇಗಾಲ ತಾಲೂಕಿನ ಲಕ್ಕರಸನ ಪಾಳ್ಯ ಗ್ರಾಮದ ರಸ್ತೆಯಲ್ಲಿ ಮದ್ಯದ ಜೊತೆಗೆ ವಿಷ ಸೇವಿಸಿ ರಸ್ತೆಯಲ್ಲಿ ಒದ್ದಾಡುತ್ತಿದ್ದರು. ಇದನ್ನು ನೋಡಿದ ಸ್ಥಳೀಯರು ನಗರದ ಸರ್ಕಾರಿ ಉಪ ವಿಭಾಗ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ರವಾನಿಸಿದ್ದಾರೆ ಆದರೆ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ನಾಗೇಂದ್ರ ಸಾವನ್ನಪ್ಪಿದ್ದಾನೆ ಮನು ಚಿಂತಾ ಜನಕ ಸ್ಥಿತಿಯಲ್ಲಿದ್ದಾನೆ. ಈ ಸಂಬಂಧ ಕೊಳ್ಳೇಗಾಲ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/D73015iu7jn2glm2MECosd
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw