ಮನೆಯಲ್ಲಿದ್ದ ಪಾದರಕ್ಷೆ ಕಾಣೆ: ನಾಯಿ ವಿರುದ್ಧ ದೂರು ನೀಡಿದ ಮಾಜಿ ಮೇಯರ್.!

ತನ್ನ ಮನೆಯ ಪ್ರವೇಶದ್ವಾರದ ಬಳಿ ಇಟ್ಟಿದ್ದ ತನ್ನ ಪಾದರಕ್ಷೆಗಳನ್ನು ನಾಯಿಯೊಂದು ತೆಗೆದುಕೊಂಡು ಹೋಗಿದೆ ಎಂದು ಔರಂಗಾಬಾದ್ ನಗರದ ಮಾಜಿ ಮೇಯರ್ ದೂರು ನೀಡಿದ ನಂತರ ಮಹಾರಾಷ್ಟ್ರದ ಔರಂಗಾಬಾದ್ ನಾಗರಿಕ ಸಂಸ್ಥೆಯು ನಾಲ್ಕು ಬೀದಿ ನಾಯಿಗಳ ಸಂತಾನಶಕ್ತಿ ಹರಣ ಮಾಡುವ ಮೊದಲು ಅವುಗಳನ್ನು ಸೆರೆ ಹಿಡಿದಿದೆ.
ನಗರದ ನಕ್ಷತ್ರವಾಡಿ ಪ್ರದೇಶದಲ್ಲಿ ವಾಸಿಸುವ ಮಾಜಿ ಮೇಯರ್ ನಂದಕುಮಾರ್ ಘೋಡೆಲೆ ಎಂಬುವವರ ಮನೆಯಲ್ಲಿ ಸೋಮವಾರ ರಾತ್ರಿ ಪಾದರಕ್ಷೆಗಳು ಕಾಣೆಯಾದ ಘಟನೆ ನಡೆದಿತ್ತು.
ಸೋಮವಾರ ಘೋಡೆಲೆ ಅವರ ಮನೆಯ ಕಾಂಪೌಂಡ್ ಗೇಟ್ ತೆರೆದಿತ್ತು. ಅದೇ ದಿನ ರಾತ್ರಿ, ಮನೆಯ ಮುಖ್ಯ ದ್ವಾರದ ಬಳಿಯಿಂದ ಅವರ ಪಾದರಕ್ಷೆಗಳು ಕಾಣೆಯಾಗಿದ್ದವು.
ಬೀದಿ ನಾಯಿ ಕಾಂಪೌಂಡ್ ಒಳಗಡೆ ಪ್ರವೇಶಿಸಿ ಪಾದರಕ್ಷೆಗಳನ್ನು ತೆಗೆದುಕೊಂಡು ಹೋಗಿರುವುದು ಬೆಳಕಿಗೆ ಬಂದಿತ್ತು. ಮರುದಿನ ಔರಂಗಾಬಾದ್ ಮುನ್ಸಿಪಲ್ ಕಾರ್ಪೊರೇಷನ್ (ಎಎಂಸಿ) ನ ನಾಯಿ ಹಿಡಿಯುವ ತಂಡವನ್ನು ಕರೆಸಿ ಬೀದಿ ನಾಯಿಗಳನ್ನು ಹಿಡಿಯುವ ಕಾರ್ಯಾಚರಣೆಯನ್ನು ನಡೆಸಲಾಯಿತು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw