ದ್ವಿಚಕ್ರ ವಾಹನ, ಮನೆಗಳಲ್ಲಿ ಕಳ್ಳತನ ಪ್ರಕರಣ: ಕುಖ್ಯಾತ ಆರೋಪಿಯ ಬಂಧನ - Mahanayaka
2:41 AM Tuesday 18 - November 2025

ದ್ವಿಚಕ್ರ ವಾಹನ, ಮನೆಗಳಲ್ಲಿ ಕಳ್ಳತನ ಪ್ರಕರಣ: ಕುಖ್ಯಾತ ಆರೋಪಿಯ ಬಂಧನ

bangalore
16/06/2023

ಬೆಂಗಳೂರು ನಗರ: ದಕ್ಷಿಣ ವಿಭಾಗದ‌ ಪೊಲೀಸರು ದ್ವಿಚಕ್ರ ವಾಹನ ಮತ್ತು ಮನೆ ಕಳ್ಳತನ ಮಾಡುತ್ತಿದ್ದ ಕುಖ್ಯಾತ ಆರೋಪಿಯನ್ನು ಬಂಧಿಸಿ ಸುಮಾರು 10.60ಲಕ್ಷ ರೂ. ಬೆಲೆ ಬಾಳುವ ಚಿನ್ನದ ಒಡವೆ ಮತ್ತು ದ್ವಿಚಕ್ರ ವಾಹನಗಳ ಪತ್ತೆ ಮಾಡಿದ್ದಾರೆ.

ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಕಳವು ಪ್ರಕರಣದಲ್ಲಿ ಆರೋಪಿ ದಂಡಪಾಣಿ ಅಲಿಯಾಸ್  ಮಣಿಕಂಠ ಈತನನ್ನು ದಸ್ತಗಿರಿಮಾಡಿ ಆರೋಪಿಯು ನೀಡಿದ ಮಾಹಿತಿ  ಮೇರೆಗೆ ಸುಮಾರು  ಅಂದಾಜು ಬೆಲೆ 9.50 ಲಕ್ಷ  ರೂ.‌‌ ಮೌಲ್ಯದ ಚಿನ್ನಾಭರಣಗಳನ್ನು ಹಾಗೂ 2 ದ್ವಿಚಕ್ರ ವಾಹನಗಳು, ಅಂದಾಜು ಬೆಲೆ  1.10 ಸಾವಿರ ರೂ.ಗಳು ಸೇರಿದಂತೆ ಒಟ್ಟು ಅಂದಾಜು ಬೆಲೆ 10.50 ಲಕ್ಷ‌ ರೂ. ಗಳ ಮಾಲುಗಳನ್ನು ಆರೋಪಿಯಿಂದ ವಶಪಡಿಸಿಕೊಳ್ಳಲಾಗಿದೆ.

ಈ ಪತ್ತೆ ಕಾರ್ಯದಲ್ಲಿ ಬೆಂಗಳೂರು ನಗರ, ದಕ್ಷಿಣ ವಿಭಾಗದ  ಉಪ ಪೊಲೀಸ್  ಆಯುಕ್ತ  ಪಿ. ಕೃಷ್ಣಕಾಂತ್  ಇವರ ಮಾರ್ಗದರ್ಶನದಲ್ಲಿ  ವಿ.ವಿ.ಪುರಂ ಉಪ ವಿಭಾಗದ  ಸಹಾಯಕ ಪೊಲೀಸ್ ಆಯುಕ್ತ ನಾಗರಾಜ ರವರ ನೇತೃತ್ವದಲ್ಲಿ ಸಿ.ಕೆ. ಅಚ್ಚುಕಟ್ಟು ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೆಕ್ಟರ್  ಜಿ.ಉದಯ ರವಿ, ಪೊಲೀಸ್ ಇನ್ಸ್‌ ಪೆಕ್ಟರ್ ಗಳಾದ  ಮಧು, ಅರವಿಂದ್‌ಕುಮಾರ್  ಮಹೇಶ್  ಹಾಗೂ ಅಪರಾಧ ವಿಭಾಗದ ಸಿಬ್ಬಂದಿಗಳು ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿರುತ್ತಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ