ವಿದ್ಯಾರ್ಥಿಗಳೊಟ್ಟಿಗೆ ಯೋಗ ಮಾಡಿದ ಚಾಮರಾಜನಗರ ಡಿಸಿ: ಎಂಎಲ್ ಎ ಸೇರಿ ಎಲ್ಲಾ ಜನಪ್ರತಿನಿಧಿಗಳು ಗೈರು - Mahanayaka

ವಿದ್ಯಾರ್ಥಿಗಳೊಟ್ಟಿಗೆ ಯೋಗ ಮಾಡಿದ ಚಾಮರಾಜನಗರ ಡಿಸಿ: ಎಂಎಲ್ ಎ ಸೇರಿ ಎಲ್ಲಾ ಜನಪ್ರತಿನಿಧಿಗಳು ಗೈರು

yogaday
21/06/2023

ಚಾಮರಾಜನಗರ: 9 ನೇ ಅಂತರಾಷ್ಟ್ರೀಯ ಯೋಗ ದಿನ ಕಾರ್ಯಕ್ರಮವನ್ನು ಚಾಮರಾಜನಗರ ಜಿಲ್ಲಾಡಳಿತವು ನಗರದ ಖಾಸಗಿ ಕಲ್ಯಾಣ ಮಂಟಪದಲ್ಲಿ ಆಯೋಜನೆ ಮಾಡಿತ್ತು‌.

ಜಿಲ್ಲಾಧಿಕಾರಿ ಡಿ.ಎಸ್.ರಮೇಶ್,  ಎಡಿಸಿ ಕಾತ್ಯಾಯಿನಿದೇವಿ, ನಗರಸಭೆ ಆಯುಕ್ತರ ಸೇರಿದಂತೆ  ಕಾರ್ಯಕ್ರಮದಲ್ಲಿ 500 ಕ್ಕೂ ಹೆಚ್ಚು ಮಂದಿ ಭಾಗಿಯಾಗಿದ್ದರು.

ಜೊತೆಗೆ, 50ಕ್ಕೂ ಹೆಚ್ಚು ನುರಿತ ಯೋಗಪಟುಗಳು ಕೂಡ ಭಾಗಿಯಾಗಿದ್ದರು. ಕಾರ್ಯಕ್ರಮದಲ್ಲಿ ವಿವಿಧ ಶ್ವಾಸಕ್ರಿಯೆ, ಅರ್ಧ ಉಷ್ಟಾಸನ, ತ್ರಿಕೋನಾಸನ, ವಜ್ರಾಸನ, ವೀರಾಸನ, ತ್ರಿಕೋನಾಸನ, ಮಂಡೂಕಾಸನ, ಸೂರ್ಯ ನಮಸ್ಕಾರ ಸೇರಿದಂತೆ 2 ತಾಸು ಯೋಗ ಪ್ರದರ್ಶನ ನಡೆಯಿತು.

ಕಾರ್ಯಕ್ರಮದಲ್ಲಿ ಡಿಸಿ ರಮೇಶ್ ಮಾತನಾಡಿ, ಪ್ರಕೃತಿ ಜೊತೆ ನಿರಂತರ ಸಂಪರ್ಕ ಸಾಧಿಸಬೇಕಾದರೇ ಯೋಗ ಅತ್ಯಗತ್ಯ , ಔಷಧಿಗಳು ಸರಿಪಡಿಸಲಾಗದ ಕಾಯಿಲೆಗಳನ್ನು ಯೋಗ ಗುಣಪಡಿಸಿದೆ, ಯೋಗ, ಧ್ಯಾನದ ಮೂಲಕ ಮಾನಸಿಕ ಶಾಂತಿ ಮಾತ್ರವಲ್ಲ- ಸಮಾಜದ ಶಾಂತಿಯನ್ನೂ ಕಾಪಾಡಬಹುದು ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮಕ್ಕೆ ಶಾಸಕ ಪುಟ್ಟರಂಗಶೆಟ್ಟಿ, ನಗರಸಭೆ ಜನಪ್ರತಿನಿಧಿಗಳು ಗೈರಾಗಿದ್ದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ