ಈಜಿಪ್ಟ್ ನಲ್ಲಿ ಮೋದಿಗೆ ‘ಆರ್ಡರ್ ಆಫ್ ನೈಲ್’ ಪ್ರಶಸ್ತಿ: ಯಾವ್ಯಾವ ದೇಶಗಳು ಪ್ರಧಾನಿಗೆ ಅತ್ಯುನ್ನತ ಗೌರವ ನೀಡಿದೆ ಗೊತ್ತಾ..? - Mahanayaka

ಈಜಿಪ್ಟ್ ನಲ್ಲಿ ಮೋದಿಗೆ ‘ಆರ್ಡರ್ ಆಫ್ ನೈಲ್’ ಪ್ರಶಸ್ತಿ: ಯಾವ್ಯಾವ ದೇಶಗಳು ಪ್ರಧಾನಿಗೆ ಅತ್ಯುನ್ನತ ಗೌರವ ನೀಡಿದೆ ಗೊತ್ತಾ..?

pm modi
25/06/2023


Provided by

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಈಜಿಪ್ಟ್ ದೇಶಕ್ಕೆ ಭೇಟಿ ಕೊಟ್ಟರು. ಇದೇ ವೇಳೆ ಅಲ್ಲಿನ ಅಧ್ಯಕ್ಷ ಅಬ್ದಲ್ ಫತ್ತಾಹ್ ಎಲ್–ಸಿಸಿ ಅವರು ಮೋದಿಗೆ ‘ಆರ್ಡರ್ ಆಫ್ ನೈಲ್’ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಈ ಮೂಲಕ ನರೇಂದ್ರ ಮೋದಿ ಅವರಿಗೆ ಸಿಕ್ಕಿದ ವಿವಿಧ ದೇಶಗಳ ಉನ್ನತ ಗೌರವ ಮತ್ತು ಪುರಸ್ಕಾರಗಳು 13ಕ್ಕೇರಿತ್ತು.

ನೈಲ್ ಎಂಬುದು ಈಜಿಪ್ಟ್​ನ ಪ್ರಮುಖ ನದಿ. ವಿಶ್ವದ ಅತಿದೊಡ್ಡ ನದಿಯೂ ಅದಾಗಿದೆ. ಹೀಗಾಗಿ ಈಜಿಪ್ಟ್​ನ ಅತ್ಯುಚ್ಚ ನಾಗರಿಕ ಪ್ರಶಸ್ತಿಗೆ ನೈಲ್ ನದಿ ಹೆಸರು ಇಡಲಾಗಿದೆ. ಕಳೆದ 9 ವರ್ಷಗಳಿಂದ ಮೋದಿ ಈ 13 ಪ್ರಶಸ್ತಿಗಳನ್ನು ಪಡೆದಿರುವುದಲ್ಲದೇ ಅಂತಾರಾಷ್ಟ್ರೀಯ ಸಂಘಟನೆಗಳಿಂದಲೂ ಪುರಸ್ಕಾರ ಗಿಟ್ಟಿಸಿದ್ದಾರೆ. ಅವುಗಳು ಯಾವುದು ಎಂಬುದನ್ನು ನೋಡುವ ಬನ್ನಿ…

ಆರ್ಡರ್ ಆಫ್ ಸೇಂಟ್ ಆಂಡ್ರ್ಯೂ ಅವಾರ್ಡ್ ಎಂಬ ರಷ್ಯಾದ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು 2019ರಲ್ಲಿ ಮೋದಿಯವರಿಗೆ ನೀಡಿತ್ತು.

ಯುಎಇ ಕೂಡಾ ಆರ್ಡರ್ ಆಫ್ ಝಾಯೆದ್ ಅವಾರ್ಡ್ ಪ್ರಶಸ್ತಿಯನ್ನು ಸಂಯುಕ್ತ ಅರಬ್ ಸಂಸ್ಥಾನದ ಅತ್ಯುನ್ನತ ನಾಗರಿಕ ಪ್ರಶಸ್ತಿ 2019ರಲ್ಲಿ ನರೇಂದ್ರ ಮೋದಿ ಅವರಿಗೆ ಪ್ರದಾನ ಮಾಡಿತ್ತು.

ಗ್ರ್ಯಾಂಡ್ ಕಾಲರ್ ಆಫ್ ದಿ ಸ್ಟೇಟ್ ಆಫ್ ಪ್ಯಾಲಸ್ಟೀನ್ ಅವಾರ್ಡ್ ಎಂಬ ವಿದೇಶೀ ಗಣ್ಯರಿಗೆ ಪ್ಯಾಲೆಸ್ತೀನ್ ದೇಶ ನೀಡುವ ಅತ್ಯುಚ್ಚ ಪ್ರಶಸ್ತಿಯನ್ನು 2018ರಲ್ಲಿ ಪ್ರದಾನ ಮಾಡಿತು.

ಸ್ಟೇಟ್ ಆರ್ಡರ್ ಆಫ್ ಘಾಜಿ ಆಮಿರ್ ಅಮಾನುಲ್ಲಾ ಖಾನ್ ಎಂಬ ಅಫ್ಘಾನಿಸ್ತಾನದ ಈ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು 2016ರಲ್ಲಿ ಪ್ರಧಾನಿ ಮೋದಿಗೆ ನೀಡಿತ್ತು.

ಆರ್ಡರ್ ಆಫ್ ಅಬ್ದುಲಜೀಜ್ ಅಲ್ ಸೌದ್ ಎಂಬ ಸೌದಿ ಅರೇಬಿಯಾದ ಮುಸ್ಲಿಮೇತರರಿಗೆ ಕೊಡಲಾಗುವ ಅತ್ಯುನ್ನತ ಗೌರವವನ್ನು 2016ರಲ್ಲಿ ನರೇಂದ್ರ ಮೋದಿಯವರಿಗೆ ನೀಡಿತ್ತು.

ಪಪುವಾ ನ್ಯೂಗಿನಿಯಾದಲ್ಲಿ ಕಂಪೇನಿಯನ್ ಆಫ್ ದಿ ಆರ್ಡರ್ ಆಫ್ ಲೋಗೋಹು ಪ್ರಶಸ್ತಿಯನ್ನು ಪೆಸಿಫಿಕ್ ಐಲ್ಯಾಂಡ್ ದೇಶಗಳ ಒಗ್ಗಟ್ಟಿಗೆ ಕಾರಣರಾಗಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ 2023 ಮೇ ತಿಂಗಳಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿತ್ತು.

ಫಿಜಿಯಲ್ಲಿ ಕಂಪ್ಯಾನಿಯನ್ ಆಫ್ ದಿ ಆರ್ಡರ್ ಆಫ್ ಫಿಜಿ ಪ್ರಶಸ್ತಿಯನ್ನು ಮೋದಿ ಅವರ ಜಾಗತಿಕ ನಾಯಕತ್ವಕ್ಕೆ ಗೌರವವಾಗಿ ಫಿಜಿ ಅತ್ಯುನ್ನತ ಗೌರವ ಪ್ರಶಸ್ತಿಯನ್ನು 2023 ಮೇ ತಿಂಗಳಲ್ಲಿ ಪ್ರದಾನ ಮಾಡಿತು.

ರಿಪಬ್ಲಿಕ್ ಆಫ್ ಪಲೋದಲ್ಲಿ ಕೂಡಾ 2023 ಮೇ ತಿಂಗಳಲ್ಲಿ ಪಪುವಾ ನ್ಯೂಗಿನಿಯಾ ದೇಶಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ರಿಪಬ್ಲಿಕ್ ಆಫ್ ಪಲೋನ ಅಧ್ಯಕ್ಷ ಸುರೇಂಜಲ್ ಎಸ್ ವಿಪ್ಸ್ ಜೂನಿಯರ್ ಅವರು ಮೋದಿಗೆ ಎಬಕಲ್ ಅವಾರ್ಡ್ ಪ್ರಶಸ್ತಿಯನ್ನು ನೀಡಿದರು.

ಭೂತಾನ್ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ಆರ್ಡರ್ ಆಫ್ ಡ್ರುಕ್ ಗ್ಯಾಲ್​ಪೋಅನ್ನು 2021 ಡಿಸೆಂಬರ್​ನಲ್ಲಿ ಮೋದಿಗೆ ಕೊಡಲಾಯಿತು.
ಅಮೆರಿಕ– ಲೆಜಿಯನ್ ಆಫ್ ಮೆರಿಟ್‌ನ್ನು ಅಸಾಧಾರಣ ಸಾಧನೆ ಮತ್ತು ಸೇವೆಗಳನ್ನು ಗುರುತಿಸಿ ಅಮೆರಿಕದ ಸಶಸ್ತ್ರ ಪಡೆಯು 2020ರಲ್ಲಿ ಮೋದಿಗೆ ಈ ಅಪೂರ್ವ ಪ್ರಶಸ್ತಿಯನ್ನು ನೀಡಿತ್ತು.

ಬಹರೈನ್‌ನಲ್ಲಿ ಕಿಂಗ್ ಹಮದ್ ಆರ್ಡರ್ ಆಫ್ ದಿ ರಿನೈಸಾನ್ಸ್ ಪ್ರಶಸ್ತಿಯನ್ನು 2019ರಲ್ಲಿ ನೀಡಿತು.

ಮಾಲ್ಡೀವ್ಸ್ ಕೂಡಾ ಆರ್ಡರ್ ಆಫ್ ದಿ ಡಿಸ್ಟಿಂಗ್ಯುಶ್ಡ್ ರೂಲ್ ಅಫ್ ನಿಶಾನ್ ಇಜ್ಜುದ್ದೀನ್ ಗೌರವವನ್ನು ವಿದೇಶೀ ಗಣ್ಯರಿಗೆ ಕೊಡಮಾಡುವ ಈ ಅತ್ಯುನ್ನತ ಗೌರವವನ್ನು ಮೋದಿಗೆ 2019ರಲ್ಲಿ ನೀಡಿತ್ತು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ