ಸಿಗರೇಟ್ ಸೇದಿದ್ದಕ್ಕೆ 15 ವರ್ಷದ ಬಾಲಕನನ್ನು ವಿವಸ್ತ್ರಗೊಳಿಸಿ ಬೆಲ್ಟ್ ನಿಂದ ಥಳಿಸಿ ಹತ್ಯೆ!
ಪಾಟ್ನಾ: 15 ವರ್ಷದ ಬಾಲಕ ಸಿಗರೇಟ್ ಸೇದಿದ್ದಾನೆಂದು ಆರೋಪಿಸಿ ಶಾಲಾ ಶಿಕ್ಷಕನೋರ್ವ ಇತರ ಶಾಲಾ ಶಿಕ್ಷಕರ ಜೊತೆ ಸೇರಿಕೊಂಡು ಬಾಲಕನನ್ನು ವಿವಸ್ತ್ರಗೊಳಿಸಿ ಬೆಲ್ಟ್ ನಿಂದ ಥಳಿಸಿದ್ದು, ಪರಿಣಾಮವಾಗಿ ಗಂಭೀರವಾಗಿ ಗಾಯಗೊಂಡ ಬಾಲಕ ಸಾವನ್ನಪ್ಪಿದ್ದಾನೆ.
ಮಧುಬನ್ ರೈಸಿಂಗ್ ಸ್ಟಾರ್ ಪ್ರಿಪರೇಟರಿ ಸ್ಕೂಲ್ ನ ವಿದ್ಯಾರ್ಥಿಯಾಗಿರುವ ಬಿಹಾರದ ಪೂರ್ವ ಚಂಪಾರಣ್ ಜಿಲ್ಲೆಯ ಬಜರಂಗಿ ಕುಮಾರ್ ಎಂಬ ಬಾಲಕ ಮಧುಬನ್ ಪ್ರದೇಶದಲ್ಲಿ ತನ್ನ ತಾಯಿಯ ಮೊಬೈಲ್ ರಿಪೇರಿ ಮಾಡಿಸಿ ಶನಿವಾರ ಬೆಳಗ್ಗೆ 11:30ಕ್ಕೆ ಬರುತ್ತಿದ್ದ ವೇಳೆ ಹಾರ್ದಿಯಾ ಸೇತುವೆ ಕೆಳಗೆ ಸ್ನೇಹಿತರೊಂದಿಗೆ ಸಿಗರೇಟ್ ಸೇದಿದ್ದಾನೆ. ಈ ವೇಳೆ ಶಾಲೆಯ ಅಧ್ಯಕ್ಷ ವಿಜಯ್ ಕುಮಾರ್ ಯಾದವ್ ಬಾಲಕನನ್ನು ನೋಡಿದ್ದರು.
ನಂತರ ಬಾಲಕನ ತಂದೆಗೆ ಕರೆ ಮಾಡಿರುವ ಅವರು, ಇತರ ಶಿಕ್ಷಕರೊಂದಿಗೆ ಸೇರಿ ಬಾಲಕನನ್ನು ವಿವಸ್ತ್ರಗೊಳಿಸಿ ಬೆಲ್ಟ್ ನಿಂದ ನಿರ್ದಯವಾಗಿ ಥಳಿಸಿದ್ದಾರೆ. ಇದರಿಂದ ಪ್ರಜ್ಞೆ ಕಳೆದುಕೊಂಡಿದ್ದ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಬಾಲಕ ಮೃತಪಟ್ಟಿದ್ದಾನೆ.
ಬಾಲಕನ ಕುತ್ತಿಗೆ ತೋಳು ಹಾಗೂ ಖಾಸಗಿ ಭಾಗಗಳಿಗೆ ಗಂಭೀರವಾದ ಗಾಯಗಳಾಗಿವೆ ಎಂದು ಬಾಲಕನ ಪೋಷಕರು ಆರೋಪಿಸಿದ್ದಾರೆ. ಆದರೆ, ಶಾಲಾ ಆಡಳಿತವು, ಈ ಆರೋಪವನ್ನು ತಳ್ಳಿ ಹಾಕಿದ್ದು, ಸಿಗರೇಟ್ ಸೇದುತ್ತಿದ್ದ ವೇಳೆ ಶಿಕ್ಷಕರು ನೋಡಿದ್ದರಿಂದ ಹೆದರಿ ವಿಷ ಸೇವಿಸಿ ಬಾಲಕ ಸಾವನ್ನಪ್ಪಿದ್ದಾನೆ ಎಂದು ಹೇಳಿದ್ದಾರೆ. ಸದ್ಯ ಬಾಲಕನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ತನಿಖೆಯಿಂದ ಸತ್ಯಾಂಶ ಬಯಲಾಗಬೇಕಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/D73015iu7jn2glm2MECosd
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw




























