ವೈದ್ಯರ ಯಡವಟ್ಟು: ನಾಲಿಗೆ ಸರ್ಜರಿಗೆ ಬಂದ ಬಾಲಕನಿಗೆ ಸುನ್ನತ್: ಕೊನೆಗೆ ಆಗಿದ್ದೇ ದೊಡ್ಡ ಕಥೆ..! - Mahanayaka
4:49 PM Thursday 16 - October 2025

ವೈದ್ಯರ ಯಡವಟ್ಟು: ನಾಲಿಗೆ ಸರ್ಜರಿಗೆ ಬಂದ ಬಾಲಕನಿಗೆ ಸುನ್ನತ್: ಕೊನೆಗೆ ಆಗಿದ್ದೇ ದೊಡ್ಡ ಕಥೆ..!

27/06/2023

ನಾಲಿಗೆಯ ಶಸ್ತ್ರಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಾಗಿದ್ದ ಎರಡೂವರೆ ವರ್ಷದ ಬಾಲಕನಿಗೆ ಸುನ್ನತ್ ಮಾಡಿದ ಆರೋಪ ‌ಉತ್ತರ ಪ್ರದೇಶದ ಬರೇಲಿಯಲ್ಲಿ ಕೇಳಿಬಂದಿದೆ. ಹೀಗಾಗಿ ಇಲ್ಲಿನ ಖಾಸಗಿ ಆಸ್ಪತ್ರೆಯ ಲೈಸೆನ್ಸ್ ಅನ್ನು ಅಮಾನತುಗೊಳಿಸಲಾಗಿದೆ.


Provided by

ಬರೇಲಿಯ ಖಾಸಗಿ ಆಸ್ಪತ್ರೆಯ ವಿರುದ್ಧ ಕೇಳಿಬಂದ ಆರೋಪ ಕುರಿತು ತನಿಖೆ ನಡೆಸಿದ ಆರೋಗ್ಯ ಇಲಾಖೆ ಅಧಿಕಾರಿಗಳು, ಮೇಲ್ನೋಟಕ್ಕೆ ತಪ್ಪು ಎಸಗಿರುವುದು ಗೋಚರಿಸಿದ ಹಿನ್ನೆಲೆಯಲ್ಲಿ ಲೈಸೆನ್ಸನ್ನು ಅಮಾನತುಗೊಳಿಸಿದ್ದಾರೆ. ಇದರಿಂದಾಗಿ ಆಸ್ಪತ್ರೆ ಹೊಸ ರೋಗಿಗಳನ್ನು ದಾಖಲು ಮಾಡಿಕೊಂಡು, ಚಿಕಿತ್ಸೆ ನೀಡುವಂತಿಲ್ಲ. ತನಿಖೆಯಲ್ಲಿ ಆರೋಪ ಸಾಬೀತಾದರೆ ತೆಗೆದುಕೊಳ್ಳಲಾಗುತ್ತದೆ ಎಂದು ಮುಖ್ಯ ಆರೋಗ್ಯಾಧಿಕಾರಿ ಬಲಬೀರ್ ಸಿಂಗ್ ತಿಳಿಸಿದ್ದಾರೆ.

ಬಾಲಕ ತೊದಲಿಸುತ್ತಿದ್ದ ಹಿನ್ನೆಲೆಯಲ್ಲಿ ಶಸ್ತ್ರಚಿಕಿತ್ಸೆಗೆ ಸೂಚಿಸಲಾಗಿತ್ತು. ಅದರಂತೆ ಆಸ್ಪತ್ರೆಗೆ ಕರೆದೊಯ್ದಾಗ ಸರ್ಜರಿ ನಡೆದಿತ್ತು. ಆವಾಗ ವೈದ್ಯರು ನಾಲಿಗೆಯ ಬದಲು ಜನನಾಂಗದ ಮುಂಭಾಗವನ್ನು ಕತ್ತರಿಸಿದ್ದರು ಎಂದು ಆರೋಪಿಸಲಾಗಿದೆ.

ಅಪರೇಷನ್ ಮುಂಚೆ ಪಡೆಯುವ ದಾಖಲೆಗಳು ಇಂಗ್ಲಿಷ್‌ನಲ್ಲಿ ಇದ್ದುದ್ದರಿಂದ ತಮಗೆ ಏನೂ ಗೊತ್ತಾಗಲಿಲ್ಲ ಎಂದು ಪೋಷಕರು ದೂರಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಹಿಂದು ಸಂಘಟನೆಗಳು ಜಮಾವಣೆಗೊಂಡು ಆಸ್ಪತ್ರೆ ವಿರುದ್ಧ ಪ್ರತಿಭಟನೆ ನಡೆಸಿದವು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ