ಶೂ ಒಳಗೆ ಬೆಚ್ಚಗೆ ಕುಳಿತಿದ್ದ ನಾಗಪ್ಪ: ಸ್ವಲ್ಪ ಯಾಮಾರಿದ್ರೂ ಕಾದಿತ್ತು ಅಪಾಯ
ಧಾರವಾಡ: ಮಳೆಗಾಲ ಆರಂಭವಾಗಿದೆ. ವಿಷ ಜಂತುಗಳು ಈ ಸಂದರ್ಭದಲ್ಲಿ ಬೆಚ್ಚಗಿನ ಜಾಗವನ್ನು ಅರಸಿ ಬರುತ್ತಿವೆ. ಹುಳು ಹುಪ್ಪಟೆಗಳು, ವಿಷಕಾರಿ ಹಾವುಗಳು ಬೆಚ್ಚಗಿನ ಜಾಗದಲ್ಲಿ ಸೇರಿಕೊಳ್ಳುವುದು ಸಾಮಾನ್ಯವಾಗಿದೆ. ಇಲ್ಲೊಂದು ಘಟನೆ ನಡೆದಿದ್ದು, ಮನೆ ಮಂದಿ ಕ್ಷಣ ಕಾಲ ದಂಗಾಗಿದ್ದಾರೆ.
ಹೌದು…! ಧಾರವಾಡ ಹೊಸಯಲ್ಲಾಪೂರ ಮೇದಾರ ಓಣಿಯಲ್ಲಿ ನಾಗರ ಹಾವೊಂದು ಮನೆಯ ಹೊರಗೆ ಇಟ್ಟಿದ್ದ ಶೂ ಒಳಗೆ ಸೇರಿಕೊಂಡ ಘಟನೆ ನಡೆದಿದ್ದು, ಹಾವನ್ನು ಕಂಡು ಮನೆಯವರು ಬೆಚ್ಚಿಬಿದ್ದಿದ್ದಾರೆ.
ನಂದಿತಾ ಶಿವನಗೌಡ ಎಂಬವರ ಮನೆಯಲ್ಲಿ ಈ ಘಟನೆ ನಡೆದಿದೆ. ನಂದಿತಾ ಅವರು ಕಸ ಗೂಡಿಸುತ್ತಿದ್ದ ವೇಳೆ ಹಾವು ಬುಸುಗುಡುವ ಶಬ್ಧ ಕೇಳಿದೆ. ಎಲ್ಲಿಂದ ಹಾವು ಬುಸುಗುಡುತ್ತಿದೆ ಎಂದು ಪರೀಕ್ಷಿಸಿದಾಗ ಶೂ ಒಳಗೆ ಹಾವು ಬೆಚ್ಚಗೆ ಕುಳಿತಿತ್ತು.
ತಕ್ಷಣವೇ ಅವರು ಉರಗ ತಜ್ಞರಿಗೆ ಮಾಹಿತಿ ನೀಡಿದ್ದು, ಉರಗ ತಜ್ಞ ಯಲ್ಲಪ್ಪ ಜೋಡಳ್ಳಿ ಅವರು ಸಾಹಸಮಯವಾಗಿ ಹಾವನ್ನು ಹಿಡಿದು ಅರಣ್ಯಕ್ಕೆ ಬಿಟ್ಟಿದ್ದಾರೆ.ಮಳೆಗಾಲದಲ್ಲಿ ಸಾರ್ವಜನಿಕರು ತಮ್ಮ ಬಟ್ಟೆ ಬರೆ, ಶೂಗಳನ್ನು ಧರಿಸುವುದಕ್ಕೂ ಮೊದಲು ಸರಿಯಾಗಿ ಪರಿಶೀಲಿಸಿ ಧರಿಸಬೇಕು. ಬೆಚ್ಚಗಿನ ಸ್ಥಳವನ್ನು ಹುಡುಕಿಕೊಂಡು ಬರುವ ವಿಷ ಜಂತುಗಳು ನಮಗರಿವಿಲ್ಲದೇ ನಮ್ಮ ವಸ್ತುಗಳೊಳಗೆ ಅವಿತಿರುತ್ತವೆ. ಇದರಿಂದ ನಮ್ಮ ಜೀವಕ್ಕೆ ಅಪಾಯ ಸೃಷ್ಟಿಯಾಗಬಹುದು ಹಾಗಾಗಿ ಎಚ್ಚರವಾಗಿರಿ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/D73015iu7jn2glm2MECosd
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw




























