ಮಹೇಶ್ ಶೆಟ್ಟಿ ತಿಮರೋಡಿ ಅವನ ಅಪ್ಪನಿಗೆ ಹುಟ್ಟಿದ್ರೆ ಆಣೆ ಪ್ರಮಾಣಕ್ಕೆ ಬರಲಿ: ಧೀರಜ್ ಜೈನ್ ಸವಾಲು - Mahanayaka
10:04 PM Thursday 21 - August 2025

ಮಹೇಶ್ ಶೆಟ್ಟಿ ತಿಮರೋಡಿ ಅವನ ಅಪ್ಪನಿಗೆ ಹುಟ್ಟಿದ್ರೆ ಆಣೆ ಪ್ರಮಾಣಕ್ಕೆ ಬರಲಿ: ಧೀರಜ್ ಜೈನ್ ಸವಾಲು

dheeraj jain
30/06/2023


Provided by

ದಕ್ಷಿಣ ಕನ್ನಡ:  ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪ ಹೊತ್ತಿದ್ದ ಧರ್ಮಸ್ಥಳದ ಧೀರಜ್ ಜೈನ್, ಉದಯ್ ಜೈನ್ ಮತ್ತು ಮಲ್ಲಿಕ್ ಜೈನ್ ಸುದ್ದಿಗೋಷ್ಠಿಯಲ್ಲಿ ಹೇಳಿಕೆ ನೀಡಿದ್ದಾರೆ. ಈ ಮೂವರ ಜೊತೆಗೆ ಸುದ್ದಿಗೋಷ್ಟಿಯಲ್ಲಿ ಕಾಂಗ್ರೆಸ್ ನ ಮಾಜಿ  ಸಚಿವ ಅಭಯ ಚಂದ್ರ ಜೈನ್ ಕೂಡಾ ಉಪಸ್ಥಿತರಿದ್ದರು.

ಮಂಗಳೂರಿನಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ಆರೋಪ ಹೊತ್ತಿದ್ದ ಧೀರಜ್ ಜೈನ್ ಮಾತನಾಡಿ,  ಮಹೇಶ್ ಶೆಟ್ಟಿ ತಿಮರೋಡಿ ಮತ್ತು ಇತರರು ನಮ್ಮ ವಿರುದ್ದ ಆರೋಪ ಮಾಡಿದ್ದರು. ಹಣ ಮಾಡುವ ಏಕೈಕ ಉದ್ದೇಶದಿಂದ ತಿಮರೋಡಿ ಆರೋಪ ಮಾಡಿದ್ದಾರೆ. ನಾವು ತನಿಖೆಗೆ ಹಾಜರಾದರೂ ಸುಖಾಸುಮ್ಮನೆ ಆರೋಪ ಮಾಡಲಾಗಿತ್ತು. ಹೀಗಾಗಿ ನಾವು ಕಾನತ್ತೂರು ದೈವದ ಮೊರೆ ಹೋಗಿ ಆಣೆಗೆ ಕರೆದಿದ್ದೆವು, ಆದರೆ ಅದನ್ನು ತಪ್ಪಿಸಿದ್ದರು ಎಂದರು.

2014ರಲ್ಲಿ ಜುಲೈ ಹಾಗೂ ಅಗಸ್ಟ್ ನಲ್ಲಿ ಸಿಬಿಐ ನಮ್ಮನ್ನು ಎರಡೆರೆಡು ಬಾರಿ ಬೆಳ್ತಂಗಡಿ ಐಬಿಯಲ್ಲಿ ತನಿಖೆ ಮಾಡಿತ್ತು. ಚೆನ್ನೈ, ಬೆಂಗಳೂರಿಗೂ ಕರೆಸಿ ನಮ್ಮ ತನಿಖೆ ಮಾಡಿದ್ದಾರೆ. ನಮ್ಮ ರಕ್ತ ಪರೀಕ್ಷೆ, ಡಿಎನ್ ಎ ಪರೀಕ್ಷೆ, ಮಂಪರು ಪರೀಕ್ಷೆ (ಬ್ರೈನ್ ಮ್ಯಾಪಿಂಗ್) ಕೂಡ ಸಿಬಿಐ ಮಾಡಿದೆ.

ಮೊಬೈಲ್ ಲೊಕೇಶನ್ ಟ್ರೇಸ್, ಸುಳ್ಳು ಪತ್ತೆಯ ಪಾಲಿಗ್ರಾಫ್ ಟೆಸ್ಟ್ ಜೊತೆ ಅನೇಕ ವೈಜ್ಞಾನಿಕ ಪರೀಕ್ಷೆ ಮಾಡಲಾಗಿದೆ. 2015ರ ಫೆ.23ರಂದು ನಮ್ಮ ಮನವಿ ಮೇರೆಗೆ ಸಿಬಿಐ ಬೆಂಗಳೂರಿನ ಕೋರ್ಟ್ ಗೆ ಬ್ರೈನ್ ಮ್ಯಾಪಿಂಗ್ ಗೆ ಅರ್ಜಿ ಹಾಕಿತ್ತು. ಕೋರ್ಟ್ ಅನೇಕ ಬಾರಿ ಇದರ ಅಡ್ಡ ಪರಿಣಾಮಗಳ ಬಗ್ಗೆ ಹೇಳಿತ್ತು. ಆದರೆ ನಮ್ಮ‌ ಮನವಿ ಮೇರೆಗೆ ಕೋರ್ಟ್ ಮಂಪರು ಪರೀಕ್ಷೆ ಮತ್ತು ಬ್ರೈನ್ ಮ್ಯಾಪಿಂಗ್ ಗೆ ಅನುಮತಿ ನೀಡಿತ್ತು. ಕೊನೆಗೆ ಎಲ್ಲಾ ತನಿಖೆ ಬಳಿಕ ಸಿಬಿಐ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿತ್ತು. ಆದರೆ ಆ ಆರೋಪ ಪಟ್ಟಿಯಲ್ಲಿ ಎಲ್ಲೂ ನಮ್ಮನ್ನ ಅಪರಾಧಿ ಮಾಡಿಲ್ಲ ಎಂದು ಅವರು ಹೇಳಿದರು.

ಆದರೆ ಮತ್ತೆ ಸೌಜನ್ಯ ತಂದೆ ನಮ್ಮನ್ನು ಸಹ ಆರೋಪಿ ಮಾಡಲು ಅರ್ಜಿ ಹಾಕಿದ್ರು. ಆದರೆ ನಮ್ಮ ಅನುಪಸ್ಥಿತಿಯಲ್ಲಿ ಕೋರ್ಟ್ ನಮಗೆ ಸಮನ್ಸ್ ನೀಡಿತ್ತು. ನಾವು ಇದನ್ನು ಹೈಕೋರ್ಟ್ ನಲ್ಲಿ ಪ್ರಶ್ನೆ ಮಾಡಿದಾಗ ನ್ಯಾಯಾಲಯ ಸಿಬಿಐ ಆರೋಪ ಪಟ್ಟಿ ಉಲ್ಲೇಖಿಸಿತ್ತು. ನಮ್ಮ ವಿರುದ್ದ ಯಾವುದೇ ಸಾಕ್ಷ್ಯ, ಆರೋಪ ಇಲ್ಲದ ಕಾರಣ ಸಹ ಆರೋಪಿ ಮಾಡಲು ಸಾಧ್ಯವಿಲ್ಲ ಎಂದು ಕೋರ್ಟ್ ತಂದೆಯ ಮನವಿ ರದ್ದು ಮಾಡಿತ್ತು. ಇದೀಗ ಇಡೀ ಕೇಸ್ ನಲ್ಲಿ ಸಿಬಿಐ ಕೋರ್ಟ್ ತೀರ್ಪು ಕೊಟ್ಟಿದೆ. ಹೀಗಿದ್ದರೂ ಮಹೇಶ್ ಶೆಟ್ಟಿ ಮಾಧ್ಯಮಗಳ ಎದುರು ಬಂದು ನಮ್ಮ ವಿರುದ್ಧ ಆರೋಪ ಮಾಡ್ತಿದ್ದಾನೆ. ಹೀಗಾಗಿ ನಾವು ಮತ್ತೆ ಅವರನ್ನು ಆಣೆ ಪ್ರಮಾಣಕ್ಕೆ ಕರೀತಾ ಇದ್ದೇವೆ. ತಿಮರೋಡಿ ಅವನ ಅಪ್ಪನಿಗೆ ಹುಟ್ಟಿದ್ರೆ ಆಣೆ ಪ್ರಮಾಣಕ್ಕೆ ಬರಲಿ ಎಂದು ಅವರು ಸವಾಲು ಹಾಕಿದರು.

ಕಾನತ್ತೂರು ನಾಲ್ವರ್ ದೈವಗಳ ಎದುರು ಬಂದು ಆಣೆ ಮಾಡಲಿ. ಆರೋಪಿ ಸಂತೋಷ್ ನನ್ನ ನಾವು ಕಳ್ಳತನದ ಸಂಶಯದ ಮೇಲೆ ಪೊಲೀಸರಿಗೆ ಹಿಡಿದು ಕೊಟ್ಟೆವು. ಅವನು ಓಡಿದಾಗ ಕಳ್ಳ ಅಂತ ನಾವು ಹಿಡಿದು ಕೊಟ್ಟೆವು, ಆದರೆ ಸೌಜನ್ಯ ಕೇಸಲ್ಲಿ ಪೊಲೀಸರು ಅವನನ್ನ ಅರೆಸ್ಟ್ ಮಾಡಿದ್ದಾರೆ. ನಾವು ಅವನೇ ಸೌಜನ್ಯ ಆರೋಪಿ ಅಂತ ಹೇಳಿಲ್ಲ, ಅದು ನಮಗೆ ಸಂಬಂಧಿಸಿದ್ದಲ್ಲ ಎಂದು ಧೀರಜ್ ಜೈನ್ ಹೇಳಿದ್ರು.

ಸುದ್ದಿಗೋಷ್ಟಿಯಲ್ಲಿ ತಿಮರೋಡಿ ವಿರುದ್ದ ಗುಡುಗಿದ ಮಾಜಿ ಸಚಿವ ಅಭಯ ಚಂದ್ರ ಜೈನ್, ತಿಮರೋಡಿ ಇದೀಗ ಮತ್ತೆ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ವಿರುದ್ದ ಮಾತನಾಡ್ತಿದಾನೆ. ಅವನು ಹಣ ಮಾಡುವ ಉದ್ದೇಶದಿಂದ ಇದನ್ನು ಮಾಡ್ತಿದಾನೆ. ಅವನು ಒಬ್ಬ ರೌಡಿಶೀಟರ್, ಬೆಳ್ತಂಗಡಿ ತಾಲೂಕಿನ ಕೆಟ್ಟ ವ್ಯಕ್ತಿ, ಅವನ ಈ ಹೇಳಿಕೆಗಳ ವಿರುದ್ಧ ನಾವು ಪ್ರತಿಭಟಿಸ್ತೇವೆ. ಅವನಿಗೆ ತಲೆ ಸರಿ ಇಲ್ಲ, ನಮ್ಮ ಹೆಗ್ಗಡೆಯವರ ಬಗ್ಗೆ ಮಾತನಾಡ್ತಾನೆ. ಅವನ ವಿರುದ್ದ ಕಾನೂನಾತ್ಮಕ ಹೋರಾಟ ನಾವು ಮಾಡ್ತೇವೆ. ಸಮಾಜದ ವ್ಯಕ್ತಿ ವಿರುದ್ದ ಅವನು ಅಪನಂಬಿಕೆ ಮೂಡಿಸ್ತಿದ್ದಾನೆ. ತಿಮರೋಡಿ ಎಷ್ಟೇ ದೊಡ್ಡ ರೌಡಿಯಾದ್ರೂ ನಾವು ನೋಡಿಕೊಳ್ತೇವೆ. ತಿಮರೋಡಿ ನೈಜ ಆರೋಪಿಗಳ ಪತ್ತೆಗೆ ಐಜಿ ಕಚೇರಿ ಎದುರು ಹೋರಾಟ ಮಾಡಲಿ. ಯಾರೋ ದೊಡ್ಡ ವ್ಯಕ್ತಿ ವಿರುದ್ದ ಮಾತನಾಡುವುದಲ್ಲ ಎಂದರು.

ಇನ್ನೂ ಸೌಜನ್ಯ ಮಾವ ವಿಠಲ ಮತ್ತು‌ ಮಹೇಶ್ ಶೆಟ್ಟಿಯನ್ನು ತನಿಖೆ‌ ನಡೆಸಬೇಕು ಧೀರಜ್ ಜೈನ್, ಉದಯ್ ಜೈನ್ ಆಗ್ರಹಿಸಿದರು.

ಪತ್ರಿಕಾಗೋಷ್ಠಿಯ ವಿಡಿಯೋ  ನೋಡಿ: https://youtu.be/dbWYYwht_S4

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ