ನೀಲಿ ಬಣ್ಣಕ್ಕೆ ತಿರುಗಿದ ತಂಬಾಕು ವ್ಯಸನಿ ತಾಯಿಗೆ ಜನಿಸಿದ ಮಗು: ಮಗುವಿನ ದೇಹದಲ್ಲಿ 60 ಎಂಎಲ್ ನಿಕೋಟಿನ್ ಪತ್ತೆ

ತಂಬಾಕು ವ್ಯಸನಿ ತಾಯಿಗೆ ಜನಿಸಿದ ಮಗುವಿನ ದೇಹದಲ್ಲಿ 60 ಎಂಎಲ್ ನಷ್ಟು ನಿಕೋಟಿನ್ ಪತ್ತೆಯಾದ ಘಟನೆ ಗುಜರಾತ್ ನಲ್ಲಿ ನಡೆದಿದ್ದು, ವೈದ್ಯರು ಆಘಾತಗೊಂಡಿದ್ದಾರೆ.
ಜೂನ್ 20 ರಂದು ಮೆಹ್ಸಾನಾದ ಆಸ್ಪತ್ರೆಯಲ್ಲಿ ಯುವ ತಾಯಿಯೊಬ್ಬರು ಸಿಸೇರಿಯನ್ ಮೂಲಕ 2.4 ಕೆಜಿ ಮಗುವಿಗೆ ಜನ್ಮ ನೀಡಿದ್ದಾರೆ. ಆದರೆ, ಆರೋಗ್ಯವಂತ ನವಜಾತ ಶಿಶು ಅಳಲು ವಿಫಲವಾದ ಕಾರಣ ಮತ್ತು ನೀಲಿ ಬಣ್ಣಕ್ಕೆ ತಿರುಗಿತ್ತು.
ಮಗು ನೀಲಿ ಬಣ್ಣಹೊಂದಿರುವ ಹಿನ್ನೆಲೆಯಲ್ಲಿ ತಕ್ಷಣವೇ ಮಗುವನ್ನು ವೆಂಟಿಲೇಟರ್ನಲ್ಲಿ ಇರಿಸಲಾಯಿತು. ಬಳಿಕ ಮಗುವಿನ ಹೃದಯವು ಕ್ಷೀಣಿಸಲು ಪ್ರಾರಂಭಿಸಿದಾಗ ಮತ್ತು ಅವನ ರಕ್ತದೊತ್ತಡವು ಕುಸಿಯಿತು. ಈ ವೇಳೆ, ಮಗುವಿನ ದೇಹದಲ್ಲಿರುವ ನಿಕೋಟಿನ್ ಅಂಶವಿರುವ ಆಘಾತಕಾರಿ ಅಂಶ ಬಯಲಾಗಿದೆ.
ತಾಯಿ ತಂಬಾಕು ವ್ಯವಸನಿಯಾಗಿರುವ ಹಿನ್ನೆಲೆಯಲ್ಲಿ ಮಗುವಿನ ರಕ್ತದಲ್ಲಿನ ಹೆಚ್ಚಿನ ನಿಕೋಟಿನ್ ಅಂಶಕ್ಕೆ ಕಾರಣವಾಗಿದೆ ಎಂದು ವೈದ್ಯರು ಹೇಳಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw