ರಾಷ್ಟ್ರ ರಾಜಧಾನಿಯ ರಸ್ತೆಯೊಂದರಲ್ಲಿ ಬಾವಿಯಂತಹ ಹೊಂಡ..! ಎಎಪಿ ವಿರುದ್ಧ ಬಿಜೆಪಿ ವಾಗ್ದಾಳಿ - Mahanayaka
10:29 AM Wednesday 22 - October 2025

ರಾಷ್ಟ್ರ ರಾಜಧಾನಿಯ ರಸ್ತೆಯೊಂದರಲ್ಲಿ ಬಾವಿಯಂತಹ ಹೊಂಡ..! ಎಎಪಿ ವಿರುದ್ಧ ಬಿಜೆಪಿ ವಾಗ್ದಾಳಿ

05/07/2023

ಪಶ್ಚಿಮ ದೆಹಲಿಯ ಜನಕ್ ಪುರಿಯಲ್ಲಿ ರಸ್ತೆಯ ಹೆಚ್ಚಿನ ಭಾಗ ಕುಸಿದ ಘಟನೆ ‌ನಡೆಯಿತು. ಈ ರಸ್ತೆಯಲ್ಲಿ ಬೃಹತ್ ಗುಹೆಯ ರೂಪದ ಹೊಂಡ ನಿರ್ಮಾಣ ಆಗಿರುವ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದವು.

ರಾಷ್ಟ್ರ ರಾಜಧಾನಿಯಲ್ಲಿ 24 ಗಂಟೆಗಳ ಅವಧಿಯಲ್ಲಿ 0.2 ಮಿ.ಮೀ ಮಳೆ ಸುರಿಯಿತು. ದಿಲ್ಲಿ ಪೊಲೀಸರ ಪ್ರಕಾರ, ಈ ರಸ್ತೆಯ ನಿರ್ವಹಣೆಯ ಜವಾಬ್ದಾರಿಯನ್ನು ಹೊಂದಿರುವ ಇಲಾಖೆ ವಿರುದ್ಧ ಕ್ರಮ ಕೈಗೊಳ್ತೀವಿ ಎಂದಿದೆ.

ಇನ್ನು ಈ ಘಟನೆಯ ಬಗ್ಗೆ ಮಾಹಿತಿ ನೀಡಲು ಸಂಚಾರ ಪೊಲೀಸರು ಟ್ವಿಟ್ಟರ್ ನಲ್ಲಿ ಈ ವಿಷಯದ ಬಗ್ಗೆ ಪೋಸ್ಟ್ ಮಾಡಿದ್ದಾರೆ.  ಪೊಸ್ಸಾಂಗಿಪುರ ಉದ್ಯಾನವನದ ಬಳಿ ರಸ್ತೆ ಕುಸಿದಿದ್ದು, ಜೋಗಿಂದರ್ ಸಿಂಗ್ ಮಾರ್ಗದಿಂದ ಪೊಸ್ಸಾಂಗಿಪುರ ಗ್ರಾಮದ ಕಡೆಗೆ ಎರಡೂ ಕ್ಯಾರೇಜ್ ವೇಗಳಲ್ಲಿ ಸಂಚಾರವನ್ನು ನಿರ್ಬಂಧಿಸಲಾಗಿದೆ. ಎಂದು ಅದು ಪೊಲೀಸ್ ಇಲಾಖೆ ಟ್ವೀಟ್ ಮಾಡಿತ್ತು.

ಜನಕ್ ಪುರಿಯ ಪಂಖಾ ರಸ್ತೆಯಿಂದ ಮತ್ತು ಮಂಗೋಲ್ಪುರಿಯಿಂದ ಜನಕ್ಪುರಿ ಕಡೆಗೆ ಬರುವ ರಸ್ತೆಯಲ್ಲಿ ಜನ ದಟ್ಟಣೆಯ ಬಗ್ಗೆ ಮಾಹಿತಿ ಬಂದಿದೆ ಎಂದು ಸಂಚಾರ ಪೊಲೀಸ್ ಇಲಾಖೆ ತಿಳಿಸಿದೆ.

ಇನ್ನು ಈ ಕುರಿತು ದೆಹಲಿ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚ್ದೇವ್ ಅವರು ಅರವಿಂದ್ ಕೇಜ್ರಿವಾಲ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅಲ್ಲದೇ ಕಳೆದ ವಾರ ಪಿಡಬ್ಲ್ಯೂಡಿಯು ಬ್ಯಾರಿಕೇಡ್ ಹಾಕದ ಕಾರಣ ಈ ಸ್ಥಳದಲ್ಲಿ ಆಟೋರಿಕ್ಷಾ ಚಾಲಕ ಸಾವನ್ನಪ್ಪಿದ್ದನ್ನು ಸಚ್ದೇವ್ ಉಲ್ಲೇಖಿಸಿ ಹೇಳಿಕೆ ನೀಡಿದ್ದು ಕೂಡಲೇ ಆಮ್ ಆದ್ಮಿ ಪಕ್ಷದ ಪಿಡಬ್ಲ್ಯೂಡಿ ಸಚಿವ ಅತಿಶಿ ಅವರು ಈ ಕುರಿತು ಪ್ರತಿಕ್ರಿಯೆ ನೀಡಬೇಕೆಂದು ಆಗ್ರಹಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ