ಬಿಟ್ ಕಾಯಿನ್ ಪ್ರಕರಣದಲ್ಲಿ ಕರ್ನಾಟಕಕ್ಕೆ ಇಸ್ರೇಲ್ ಸಹಾಯ
ಬೆಂಗಳೂರು: ಬಿಟ್ ಕಾಯಿನ್ ಪ್ರಕರಣದ ಮರು ತನಿಖೆ ವಿಚಾರವಾಗಿ ಬಿಟ್ ಕಾಯಿನ್ ವಶಕ್ಕೆ ಪಡೆಯಲು ಕರ್ನಾಟಕ ಸರ್ಕಾರವು ಇಸ್ರೇಲ್ ಸಹಾಯ ಕೇಳುವ ಸಾಧ್ಯತೆಯಿದೆ.
ಇಸ್ರೇಲ್ ರಕ್ಷಣಾ ಇಲಾಖೆಯು ಉಗ್ರರಿಗೆ ಸಂದಾಯವಾಗುವ ಬಾಬತ್ತಿನಲ್ಲಿ ಹಮಾಸ್ ಉಗ್ರ ಸಂಘಟನೆಗೆ ಸೇರಿದ ಹಲವು ಕ್ರಿಪ್ಟೋ ವಾಲೆಟ್ ಗಳನ್ನ ವಶಕ್ಕೆ ಪಡೆದಿತ್ತು. ಇಸ್ರೇಲ್ ರಕ್ಷಣಾ ಇಲಾಖೆಯು ದೆಹಲಿ ಪೊಲೀಸರಿಗೂ ಈ ಬಗ್ಗೆ ಕಳೆದ ವರ್ಷ ಮಾಹಿತಿ ನೀಡಿತ್ತು. ಹೀಗಾಗಿ ಬಿಟ್ ಕಾಯಿನ್ ಹಗರಣದಲ್ಲಿ ಇಸ್ರೇಲ್ ನ ನ್ಯಾಷನಲ್ ಬ್ಯುರೋ ಫಾರ್ ಕೌಂಟರ್ ಟೆರರ್ ಫೈನಾನ್ಸ್ ಸಂಸ್ಥೆಯ ಸಹಾಯ ಕೇಳುವ ಸಾಧ್ಯತೆಯಿದೆ.
ಇಸ್ರೇಲ್ ಕ್ರಿಪ್ಟೋ ವಾಲೆಟ್ ಗಳನ್ನ ವಶಪಡಿಸಿಕೊಳ್ಳುವಲ್ಲಿ ಸಾಕಷ್ಟು ನೈಪುಣ್ಯತೆ ಹೊಂದಿದೆ. ಆದರೆ ಭಾರತದಲ್ಲಿ ಕ್ರಿಪ್ಟೋ ಕರೆನ್ಸಿಯನ್ನ ವಶಪಡಿಸಿಕೊಳ್ಳಲು ಬೇಕಾದ ಟೆಕ್ನಾಲಜಿ ಕೊರತೆ ಇದೆ. ಇದಲ್ಲದೆ ಕರ್ನಾಟಕ ಬಿಟ್ಟರೆ ಬೇರೆಲ್ಲೂ ಕ್ರಿಪ್ಟೋ ಕರೆನ್ಸಿ ಹಗರಣಗಳು ನಡೆದಿಲ್ಲ. ಹೀಗಾಗಿ ಇಸ್ರೇಲ್ ಸಹಾಯ ಕೇಳುವ ಸಾಧ್ಯತೆಯಿದೆ. ಈ ಹಿಂದೆ ಬೇರೆ ತನಿಖಾ ಏಜೆನ್ಸಿಗಳ ಸಹಾಯ ಪಡೆಯುವುದಾಗಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದರು ಎಂಬುದು ಗಮನಾರ್ಹ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw




























