ನಾಯಿಯನ್ನು ನುಂಗಿ ಕಂಗಾಲಾದ ಹೆಬ್ಬಾವು: ಉರಗತಜ್ಞ ಹರೀಂದ್ರ ಅವರಿಂದ ರಕ್ಷಣೆ - Mahanayaka

ನಾಯಿಯನ್ನು ನುಂಗಿ ಕಂಗಾಲಾದ ಹೆಬ್ಬಾವು: ಉರಗತಜ್ಞ ಹರೀಂದ್ರ ಅವರಿಂದ ರಕ್ಷಣೆ

python
09/07/2023


Provided by

ಚಿಕ್ಕಮಗಳೂರು: ನಾಯಿಯನ್ನು ನುಂಗಿದ ಬೃಹತ್ ಹೆಬ್ಬಾವೊಂದು ಮುಂದೆ ಸಾಗಲಾಗದೇ ನರಳುತ್ತಿದ್ದ ದೃಶ್ಯ ಕಂಡು ಬಂದಿದ್ದು, ಉರಗತಜ್ಞ ಹರೀಂದ್ರ ಅವರು ರಕ್ಷಣೆ ಮಾಡಿ ಅರಣ್ಯಕ್ಕೆ ಬಿಟ್ಟಿದ್ದಾರೆ.

ಎನ್.ಆರ್.ಪುರ ತಾಲೂಕಿನ ಹಂತುವಾನಿ ಗ್ರಾಮದ ಶ್ರೀಮತಿ ಎಂಬುವರ ಮನೆ ಪಕ್ಕದಲ್ಲಿ  ಸುಮಾರು 15 ಅಡಿ ಉದ್ದ, 60 ಕೆಜಿ ತೂಕದ ಬೃಹತ್ ಹೆಬ್ಬಾವು ನಾಯಿಯನ್ನು ನುಂಗಿದ್ದು, ಮುಂದೆ ತೆವಲಲು ಸಾಧ್ಯವಾಗದೇ ಕಂಗಾಲಾಗಿತ್ತು.

ಈ ಘಟನೆಯ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಉರಗತಜ್ಞ ಹರೀಂದ್ರ ಅವರು ಅರಣ್ಯ ಅಧಿಕಾರಿ ರಾಘವೇಂದ್ರ ಅವರ ಸಮ್ಮುಖದಲ್ಲಿ ಕಾರ್ಯಾಚರಣೆ ನಡೆಸಿ ಹೆಬ್ಬಾವನ್ನು ಹಿಡಿ ಅರಣ್ಯಕ್ಕೆ ಬಿಟ್ಟಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ