ಚಿಕ್ಕಮಗಳೂರು: 3000 ಮೌಲ್ಯದ 40 ಕೆ.ಜಿ. ಟೊಮೆಟೋ ಕಳ್ಳತನ - Mahanayaka

ಚಿಕ್ಕಮಗಳೂರು: 3000 ಮೌಲ್ಯದ 40 ಕೆ.ಜಿ. ಟೊಮೆಟೋ ಕಳ್ಳತನ

tomato theft
12/07/2023

ಚಿಕ್ಕಮಗಳೂರು: ತರಕಾರಿ ಅಂಗಡಿಯಲ್ಲಿದ್ದ 3000 ಸಾವಿರ ಮೌಲ್ಯದ 40 ಕೆ.ಜಿ. ಟೊಮೆಟೋ ಇದ್ದ ಎರಡ ಟ್ರೇ ಕಳ್ಳತನವಾಗಿದ್ದು, ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿರುವ ಘಟನೆ ಜಿಲ್ಲೆಯ ಆಲ್ದೂರಿನಲ್ಲಿ ನಡೆದಿದೆ.

ಆಲ್ದೂರು ಪಟ್ಟಣದ ನದೀಂ ಎಂಬುವರ ಅಂಗಡಿಯಲ್ಲಿ ಎರಡು ಟ್ರೇ ಟೊಮೆಟೋ ಕಳ್ಳತನವಾಗಿದೆ. ಸೋಮವಾರ ರಾತ್ರಿ ಎಂದಿನಂತೆ ತರಕಾರಿಯನ್ನ ಅಂಗಡಿಯಲ್ಲಿ ಇಟ್ಟು ಟಾರ್ಪಲ್ ಎಳೆದು ಹೋಗಿದ್ದರು. ಆದರೆ, ಮಂಗಳವಾರ ಬೆಳಗ್ಗೆ ಅಂಗಡಿಗೆ ಬಂದಾಗ ಟೊಮೆಟೋ ಇರಲಿಲ್ಲ. ಆಗ ಅಂಗಡಿಯ ಟಾರ್ಪಲ್ ಸರಿಸಿರುವುದು ಬೆಳಕಿಗೆ ಬಂದಿದೆ.

ಆಲ್ದೂರು ಠಾಣೆಯ ಕಾಂಪೌಂಡ್‍ ಗೆ ಹೊಂದಿಕೊಂಡಂತಿರುವ ತರಕಾರಿ ಅಂಗಡಿಯಲ್ಲಿ ಟೊಮೆಟೋ ಕಳ್ಳತನವಾಗಿದ್ದು, ಸಾಲ ಮಾಡಿ ತರಕಾರಿ ವ್ಯಾಪಾರ ಮಾಡಿಕೊಂಡು ಬದುಕು ದೂಡುತ್ತಿದ್ದ ನದೀಂ ಅವರು ಅತಂತ್ರಕ್ಕೀಡಾಗಿದ್ದಾರೆ.

ಆದರೆ, ನದೀಂ ಅವರ ತರಕಾರಿ ಅಂಗಡಿಗೆ ಬಾಗಿಲು ಇರಲಿಲ್ಲ. ಟಾರ್ಪಲ್ ಕಟ್ಟಿ ಹೋಗುತ್ತಿದ್ದರು. ಹೀಗೆ ಟಾರ್ಪಲ್ ಕಟ್ಟಿ ಹೋದಾಗ ಬರುವಷ್ಟರಲ್ಲಿ ರಾತ್ರೋರಾತ್ರಿ ಕಳ್ಳತನವಾಗಿದ್ದು ನದೀಂ ಟಮೋಟೋ ಕಳ್ಳತನವಾಗಿರುವ ಬಗ್ಗೆ ಆಲ್ದೂರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ