ಜನವರಿ 26ರಂದು ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸಲು ಸಾಮಾಜಿಕ ಜಾಲತಾಣ ಸಜ್ಜು - Mahanayaka
2:19 PM Wednesday 20 - August 2025

ಜನವರಿ 26ರಂದು ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸಲು ಸಾಮಾಜಿಕ ಜಾಲತಾಣ ಸಜ್ಜು

25/01/2021


Provided by

ಬೆಂಗಳೂರು: ಜನವರಿ 26 ಬರುತ್ತಿದೆ. ಈ ದೇಶದಲ್ಲಿ ಆಧುನಿಕ ಭಾರತದ ಪಿತಾಮಹಾ ಡಾ.ಬಿ.ಆರ್.ಅಂಬೇಡ್ಕರ್ ಅವರು ಬರೆದ ಸಂವಿಧಾನ ಜಾರಿಗೆ ಬಂದ ಈ ದಿನದ ಮಹತ್ವ ಬಹಳಷ್ಟು ಜನರಿಗೆ ಗೊತ್ತಿಲ್ಲ. ಬಹುತೇಕರು ಈ ದಿನದಂದು ಸಂವಿಧಾನದಲ್ಲಿ ಯಾವುದೇ ಪಾತ್ರವಹಿಸದ  ನಾಯಕರ ಫೋಟೋಗಳನ್ನು ಇಟ್ಟು ಪೂಜೆ ಮಾಡಿ “ಗಣರಾಜ್ಯೋತ್ಸವ” ಎಂದು ಆಚರಿಸಿ ಮನೆಗೆ ತೆರಳುತ್ತಾರೆ.

ಜನವರಿ 26, 1950ರಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರು ಬರೆದ ಸಂವಿಧಾನವನ್ನು ಭಾರತದಲ್ಲಿ ಜಾರಿಗೊಳಿಸಲಾಯಿತು. ಹಾಗಾಗಿ ಈ ದಿನವನ್ನು ‘ಸಂವಿಧಾನ ದಿನಾಚರಣೆ’ ಎಂದು ಆಚರಿಸಬೇಕು ಎನ್ನುವ ಕೂಗು ಈಗಾಗಲೇ ಕೇಳಿ ಬಂದಿದೆ.

ವಾಸ್ತವವಾಗಿ ಜನವರಿ 26 ದಿನಾಂಕದ ಮಹತ್ವವನ್ನು ವಿದ್ಯಾರ್ಥಿಗಳಿಗೆ ಸರ್ಕಾರ ತಿಳಿಸಬೇಕು. ಆದರೆ, ಈಗಾಗಲೇ ಬಹುತೇಕ ಶಾಲೆ, ಕಾಲೇಜುಗಳಿಗೆ ಜ.26ರಂದು ರಜೆ ಘೋಷಿಸಲಾಗಿದೆ.  ಇದೇ ಸಂದರ್ಭದಲ್ಲಿ  ಗಣರಾಜ್ಯೋತ್ಸವದಂತೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸಲು ಯುವ ಜನತೆ ಸಿದ್ಧರಾಗಿದ್ದಾರೆ. ಇದಕ್ಕಾಗಿ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನವೊಂದನ್ನು ಆರಂಭಿಸಿದ್ದಾರೆ.

ಜನವರಿ 26ರಂದು ಅಂಬೇಡ್ಕರ್ ಅವರ ಚಿತ್ರವನ್ನು ತಮ್ಮ ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್, ವಾಟ್ಸಾಪ್ ಹಾಗೂ ಇತರ ಮಾಧ್ಯಮಗಳಲ್ಲಿ ಡಿಪಿ ಹಾಕಿಕೊಳ್ಳುವ ಮೂಲಕ ಈ ದಿನದಂದು ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸಲು ಮುಂದಾಗಿದ್ದಾರೆ. ಜೊತೆಗೆ ಈ ದಿನದಂತೆ ಭಾರತದ ಸಂವಿಧಾನದ ಮಹತ್ವವನ್ನು ತಿಳಿಸಲು ಸಾಮಾಜಿಕ ಜಾಲತಾಣಗಳನ್ನು ಬಳಕೆ ಮಾಡಿಕೊಳ್ಳಲು ಮುಂದಾಗಿದ್ದಾರೆ. ಈ ವಿನೂತನ ಕಾರ್ಯಕ್ರಮಕ್ಕೆ ಎಲ್ಲರೂ ಕೈಜೋಡಿಸುವಂತೆ ಕೂಡ ಮನವಿ ಮಾಡಲಾಗಿದೆ.

francis& navya

ಇತ್ತೀಚಿನ ಸುದ್ದಿ