ಮಾದಕ ಬೆಡಗಿಗೆ ಶುರುವಾಯ್ತು ಹೊಸ ತಲೆನೋವು: ಕಂಗನಾ ನನಗೆ ಮೋಸ ಮಾಡಿದ್ದಾಳೆ ಎಂದ ಬಿಜೆಪಿ ನಾಯಕ..! - Mahanayaka
12:09 PM Wednesday 22 - October 2025

ಮಾದಕ ಬೆಡಗಿಗೆ ಶುರುವಾಯ್ತು ಹೊಸ ತಲೆನೋವು: ಕಂಗನಾ ನನಗೆ ಮೋಸ ಮಾಡಿದ್ದಾಳೆ ಎಂದ ಬಿಜೆಪಿ ನಾಯಕ..!

kangana
12/07/2023

ತನ್ನ ಮುಂಬರುವ ಹೊಸ ಚಿತ್ರ ‘ತೇಜಸ್’ ಬಿಡುಗಡೆಯ ಹೊಸ್ತಿಲಲ್ಲಿರುವ ನಟಿ ಕಂಗನಾಗೆ ಹೊಸ ತಲೆನೋವು ಶುರುವಾಗಿದೆ.

ತನ್ನಿಂದ ಸಹಾಯ ಪಡೆದುಕೊಂಡು ನಟಿ ಕಂಗನಾ ರಣಾವತ್‌ ಮೋಸ ಮಾಡಿದ್ದಾರೆ ಎಂದು ಬಿಜೆಪಿ ನಾಯಕ ಮಯಾಂಕ್ ಮಧುರ್ ಆರೋಪಿಸಿದ್ದಾರೆ. ಅಲ್ಲದೇ ಇವರು ನಟಿ ಕಂಗನಾ ವಿರುದ್ಧ ಕಾನೂನು ಹೋರಾಟಕ್ಕೂ ಮುಂದಾಗಿದ್ದಾರೆ.

‘ತೇಜಸ್’ ಚಿತ್ರದಲ್ಲಿ ಕಂಗನಾ ಮೊದಲ ಬಾರಿಗೆ ಭಾರತೀಯ ವಾಯುಪಡೆಯ ಪೈಲಟ್ ಅಧಿಕಾರಿಯಾಗಿ ಕಾಣಿಸುತ್ತಿದ್ದಾರೆ. ತೇಜಸ್‌ ಚಿತ್ರವನ್ನು ಅಕ್ಟೋಬರ್ 20, 2023 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.

‘ತೇಜಸ್’ನಲ್ಲಿ ಪಾತ್ರವನ್ನು ನೀಡುವುದಾಗಿ ಕಂಗನಾ ಭರವಸೆ ನೀಡಿದ್ದರು. ಆದರೆ ಆಕೆ ತನ್ನ ಭರವಸೆಯನ್ನು ಈಡೇರಿಸದೆ ವಂಚಿಸಿದ್ದಾರೆ ಎಂದು ಮಧುರ್ ಹೇಳಿಕೊಂಡಿದ್ದಾರೆ.

ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಹಲವಾರು ರಾಜಕಾರಣಿಗಳೊಂದಿಗೆ ಸಂಪರ್ಕಕ್ಕೆ ಬರಲು ಕಂಗನಾಗೆ ನಾನು ಸಹಾಯ ಮಾಡಿದ್ದೇನೆ. ಅದಕ್ಕೆ ಬದಲಿಯಾಗಿ ತೇಜಸ್‌ ಚಿತ್ರದಲ್ಲಿ ನಟಿಸಲು ಅವಕಾಶ ಕೊಡುವುದಾಗಿ ಕಂಗನಾ ಭರವಸೆ ನೀಡಿದ್ದರು ಎಂದು ಮಧುರ್ ತಿಳಿಸಿದ್ದಾರೆ.

ಏರ್ ಫೋರ್ಸ್ ಬೇಸ್‌ಗಳಲ್ಲಿ ‘ತೇಜಸ್’ ಚಿತ್ರೀಕರಣಕ್ಕೆ ಅನುಮತಿ ಪಡೆಯಲು ಕಂಗನಾಗೆ ತಾನು ಸಹಾಯ ಮಾಡಿದ್ದೇನೆ ಎಂದು ಮಧುರ್ ಹೇಳಿದ್ದಾರೆ.

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ