ಪಾಠ ಕೇಳೋದು ಬಿಟ್ಟು ಊಟಕ್ಕೆ ನೀರು ತರಲು ಹೋದ ಸರ್ಕಾರಿ ಶಾಲೆ ಮಕ್ಕಳು - Mahanayaka

ಪಾಠ ಕೇಳೋದು ಬಿಟ್ಟು ಊಟಕ್ಕೆ ನೀರು ತರಲು ಹೋದ ಸರ್ಕಾರಿ ಶಾಲೆ ಮಕ್ಕಳು

mudigere
13/07/2023


Provided by

ಮೂಡಿಗೆರೆ: ಪ್ರೌಢ ಶಾಲೆಯ ಮಕ್ಕಳು ಶಾಲೆಯಲ್ಲಿ ಪಾಠ ಕೇಳುವುದು ಬಿಟ್ಟು ಬಿಸಿಯೂಟಕ್ಕೆ ನೀರು ಹೊರುತ್ತಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಗೌಡಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದಿದೆ.

ಹಾಗಾದರೆ, ಶಾಲೆಯಲ್ಲಿ ಶಾಲಾ ಆಡಳಿತ ಮಂಡಳಿ ಇಲ್ವಾ ಎಂದು ಪ್ರಶ್ನಿಸಬೇಡಿ. ಇದೆ. ಆದರೆ, ದೊಡ್ಡವರ ಹಗ್ಗಜಗ್ಗಾಟದಲ್ಲಿ ಮಕ್ಕಳು ಪಾಠ ಕೇಳೋದು ಬಿಟ್ಟು ನೀರು ತರುವಂತಾಗಿದೆ.

ಶಾಲೆಯ ಮುಖ್ಯೋಪಾಧ್ಯರು ಕಳೆದೊಂದು ವಾರದಿಂದ ರಜೆ ಇದ್ದಾರೆ. ಶಾಲೆಗೆ ನೀರಿನ ಸಂಪರ್ಕ ಕಲ್ಪಿಸುವ ಪೈಪ್ ಲೈನ್ ಕೂಡ ಹಾಳಾಗಿದೆ. ಆದರೆ, ಪೈಪ್ ಲೈನ್ ಹಾಳಾಗಿದೆ ಎಂದು ಶಾಲೆಯವರು ಗ್ರಾಮ ಪಂಚಾಯಿತಿಗೆ ಹೇಳಿದ್ದಾರೋ… ಇಲ್ಲವೋ… ಗೊತ್ತಿಲ್ಲ. ಆದರೆ, ಈಗ ಒಬ್ಬರ ಮೇಲೋಬ್ಬರು ಗೂಬೆ ಕೂರಿಸಿತ್ತಾ ಮಕ್ಕಳ ಕೈನಲ್ಲಿ ಬಿಸಿಯೂಟಕ್ಕೆ ನೀರು ಹೋರಿಸುತ್ತಿದ್ದಾರೆ.

ಈಗ ಪಂಚಾಯಿತಿಯವರು ಶಾಲೆಯವರು ನಮಗೆ ಈ ವಿಷಯವನ್ನೇ ಹೇಳಿಲ್ಲ ಅಂತಿದ್ದಾರೆ. ಆದರೆ, ಶಾಲೆಯವರು ನಾವು ಪಂಚಾಯಿತಿಯವರಿಗೆ ಹೇಳಿದ್ದೇವೆ ಅವರು ರಿಪೇರಿ ಮಾಡಿಲ್ಲ ಎಂದು ಪಂಚಾಯಿತಿಯವರ ಮೇಲೆ ಹೇಳುತ್ತಿದ್ದಾರೆ. ಯಾರು ಯಾರಿಗೆ ಹೇಳಿದ್ದಾರೋ.. ಇಲ್ವೋ… ಆದರೆ, ಈಗ ಮಕ್ಕಳು ಪಾಠ ಕೇಳೋದ ಬಿಟ್ಟು ಶಾಲೆಯ ಬಿಸಿಯೂಟಕ್ಕೆ ನೀರು ಹೊರುತ್ತಿದ್ದಾರೆ.

ನೀರು ಹೊತ್ತು ಸುಸ್ತಾದ ಮಕ್ಕಲೇ ಪೈಪ್ ಲೈನ್ ದುರಸ್ಥಿ ಮಾಡಲು ಮುಂದಾಗಿದ್ದಾರೆ. ಆದರೆ, ಸಾಧ್ಯವಾಗಿಲ್ಲ. ಹಾಗಾಗಿ, ಕೊನೆಗೆ ಅನಿವಾರ್ಯವಾಗಿ ಮಕ್ಕಳು ನೀರು ಹೊತ್ತಿದ್ದಾರೆ. ಇದಕ್ಕೆ ಸಂಬಂಧಪಟ್ಟವರೆ ಉತ್ತರಿಸಬೇಕಿದೆ.

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ