ಜುಲೈ 15: ದಮ್ಮಪ್ರಿಯ ಅವರ “ಬಡವರ ಬಿನ್ನಪವ ಕೇಳುವರಾರು ?” ಪುಸ್ತಕ ಬಿಡುಗಡೆ - Mahanayaka

ಜುಲೈ 15: ದಮ್ಮಪ್ರಿಯ ಅವರ “ಬಡವರ ಬಿನ್ನಪವ ಕೇಳುವರಾರು ?” ಪುಸ್ತಕ ಬಿಡುಗಡೆ

dammapriya
13/07/2023


Provided by

ನಾನು ಬರೆದಿರುವ  ಸುಮಾರು 30 ಕ್ಕೂ ಹೆಚ್ಚು ಲೇಖನಗಳನ್ನು ಮಹಾನಾಯಕ ಹಾಗೂ ವಾರ್ತಾಭಾರತಿ ಪತ್ರಿಕೆಗಳಲ್ಲಿ ಪ್ರಕಟಪಡಿಸಲಾಗಿತ್ತು.   ಆ ಎಲ್ಲಾ ಲೇಖನಗಳನ್ನು ಒಗ್ಗೂಡಿಸಿ ಬಡವರ ಬಿನ್ನಪವ ಕೇಳುವರಾರು ? ಎನ್ನುವ ಪುಸ್ತಕವನ್ನು ಹೊರತರಲಾಗಿದೆ ಎಂದು  ಲೇಖಕರಾದ ದಮ್ಮಪ್ರಿಯ ಅವರು ತಿಳಿಸಿದ್ದಾರೆ.

ದಿನಾಂಕ 15-07-2023 ರ ಶನಿವಾರ ಸಂಜೆ 3:30ಕ್ಕೆ ವಾಸುದೇವ ಸಭಾಂಗಣ  ಕನ್ಯಾಕುಮಾರಿ ವಿದ್ಯಾಸಂಸ್ಥೆ  ಬಾಲಗಂಗಾಧರ ನಗರ  ಕೆಂಗುಂಟೆ, ನಾಗರಭಾವಿ,  ಬೆಂಗಳೂರು  560056  ಈ  ವಿಳಾಸದಲ್ಲಿ  ಪುಸ್ತಕ ಬಿಡುಗಡೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದ್ದು,   ನನಗೆ ಪ್ರತ್ಯಕ್ಷವಾಗಿ ಪರೋಕ್ಷವಾಗಿ  ಲೇಖನ ಬರೆಯಲು  ಸಹಕರಿಸಿದ ಹಾಗು  ನಾನು ಬರೆದ ಲೇಖನಗಳನ್ನು  ತಮ್ಮ ಪತ್ರಿಕೆಯಲ್ಲಿ  ಪ್ರಕಟಿಸಿದ  ಗೌರವಾನ್ವಿತ ಸಂಪಾದಕರಿಗೆ ಹಾಗೂ ಪತ್ರಿಕಾ ಬಳಗಕ್ಕೆ  ನಾವು ಆಭಾರಿಯಾಗಿರುತ್ತೇನೆ ಎಂದು ಅವರು ತಿಳಿಸಿದ್ದು,  ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಮನವಿ ಮಾಡಿಕೊಂಡಿದ್ದಾರೆ.

ಖ್ಯಾತ ಬರಹಗಾರರು ಹಾಗೂ ಚಿಂತಕರಾದ ಎಲ್.ಎನ್.ಮುಕುಂದರಾಜ್ ಅವರು ಪುಸ್ತಕ ಬಿಡುಗಡೆ ಮಾಡಲಿದ್ದಾರೆ.   ಕಾರ್ಯಕ್ರಮದಲ್ಲಿ ಬೆಂಗಳೂರು ವಿವಿ  ಸಂಸ್ಕೃತ ನಿರ್ದೇಶಕರಾದ ಡಾ.ಸಿ.ಶಿವರಾಜು ಅವರಿಗೆ ಗೌರವಾರ್ಪಣೆ ಮಾಡಲಾಗುವುದು.

ಮುಖ್ಯ ಅತಿಥಿಗಳಾಗಿ  ಬೆಂಗಳೂರು ಉತ್ತರ ವಿವಿ ಮೌಲ್ಯಮಾಪನ ಕುಲಸಚಿವರಾದ ಡಾ.ಡೊಮಿನಿಕ್ ಡಿ ಭಾಗವಹಿಸಲಿದ್ದಾರೆ.  ಪ್ರಾಧ್ಯಾಪಕರಾದ ಡಾ.ಎಂ.ರಾಮಕೃಷ್ಣಯ್ಯ ಆಶಯ ನುಡಿಗಳನ್ನಾಡಲಿದ್ದಾರೆ.  ಪ್ರಾಧ್ಯಾಪಕರಾದ ಡಾ.ಪ್ರದೀಪ್ ರಮಾವತ್ ಪುಸ್ತಕದ ಕುರಿತು ಮಾತನಾಡಲಿದ್ದಾರೆ.

ಕನ್ಯಾಕುಮಾರಿ ವಿದ್ಯಾಸಂಸ್ಥೆಯ ಕಾರ್ಯದರ್ಶಿಗಳಾದ ಡಾ.ಹೆಚ್.ತುಕಾರಾಂ ಅಧ್ಯಕ್ಷತೆ ವಹಿಸಲಿದ್ದಾರೆ. ಕಸಾಪ ರಾಜರಾಜೇಶ್ವರಿನಗರ ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷರಾದ ಉದಂತ ಶಿವಕುಮಾರ್  ಹಾಗೂ ಎಲ್ಲ ಪದಾಧಿಕಾರಿಗಳು ಉಪಸ್ಥಿತರಿರಲಿದ್ದಾರೆ.

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/D73015iu7jn2glm2MECosd

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ