ಹಾಡಹಗಲೇ ಸತ್ತ ಮಹಿಳೆಯ ಅರ್ಧ ಸುಟ್ಟ ಶವವನ್ನು ತಿಂದ ವಿಕೃತರು: ನಶೆಯಲ್ಲಿ ತೇಲಾಡಿದವರು ಜೈಲಿಗೆ..! - Mahanayaka

ಹಾಡಹಗಲೇ ಸತ್ತ ಮಹಿಳೆಯ ಅರ್ಧ ಸುಟ್ಟ ಶವವನ್ನು ತಿಂದ ವಿಕೃತರು: ನಶೆಯಲ್ಲಿ ತೇಲಾಡಿದವರು ಜೈಲಿಗೆ..!

13/07/2023


Provided by

ಮಹಿಳೆಯೊಬ್ಬರ ಅರ್ಧ ಸುಟ್ಟ ಶವವನ್ನು ತಿಂದ ಆರೋಪದ ಮೇಲೆ ಒಡಿಶಾದಲ್ಲಿ ಇಬ್ಬರು ವ್ಯಕ್ತಿಗಳನ್ನು ಬಂಧಿಸಲಾಗಿದೆ.

ಮಧುಸ್ಮಿತಾ ಸಿಂಗ್ ಎಂಬ ಮಹಿಳೆ ಕಾಯಿಲೆಯಿಂದ ದೀರ್ಘಕಾಲ ಬಳಲಿ ಇತ್ತೀಚೆಗೆ ಮೃತಪಟ್ಟಿದ್ದರು. ಮಹಿಳೆಯ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಿದ್ದ ಇಬ್ಬರು ದೂರದ ಸಂಬಂಧಿಗಳು ಅರ್ಧ ಸುಟ್ಟ ಮೃತದೇಹದ ಭಾಗವನ್ನು ಹೆಕ್ಕಿ ತಿಂದಿದ್ದರು.

ಇದನ್ನು ಗಮನಿಸಿದ ಇತರೆ ಸಂಬಂಧಿಕರು ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಸುಂದರ್ ಮೋಹನ್ ಸಿಂಗ್ (45) ಮತ್ತು ನರೇಂದ್ರ ಸಿಂಗ್ (25) ಎಂಬ ಆರೋಪಿಗಳನ್ನು ಬಂಧಿಸಿದ್ದಾರೆ.

ಹ್ಯಾಂಡಿಯಾ ಸೇವಿಸಿ ಅಮಲೇರಿದ್ದ ಆರೋಪಿಗಳು ಸುಟ್ಟ ಮಾಂಸ ತಿನ್ನುತ್ತಿರುವುದನ್ನು ನೋಡಿದ ಇತರ ಸಂಬಂಧಿಕರು ಅವರನ್ನು ತಡೆದಿದ್ದಾರೆ. ಆದರೆ ಅಮಲೇರಿಸಿಕೊಂಡಿದ್ದ ಆರೋಪಿಗಳು ಸಂಬಂಧಿಕರ ಎದುರು ವಿಚಿತ್ರವಾಗಿ ಕುಣಿದಿದ್ದಾರೆ.

‘ಇಬ್ಬರೂ ದೇಹದ ಸುಟ್ಟ ಅವಶೇಷಗಳನ್ನು ತಿನ್ನುತ್ತಿದ್ದಾರೆ ಎಂದು ಖಚಿತವಾಗಿದೆ. ಪ್ರಾಥಮಿಕ ಸಾಕ್ಷ್ಯದ ಆಧಾರದ ಮೇಲೆ ಅವರನ್ನು ಬಂಧಿಸಲಾಗಿದೆ. ಅವರು ಈ ಹಿಂದೆ ಇಂತಹ ಕೃತ್ಯದಲ್ಲಿ ತೊಡಗಿದ್ದಾರೆಯೇ ಎಂದು ಪರಿಶೀಲಿಸಲಾಗುತ್ತಿದೆ’ ಎಂದು ಮಯೂರ್‌ಭಂಜ್ ಎಸ್ಪಿ ಬಿ ಗಂಗಾಧರ್ ಹೇಳಿಕೆ ನೀಡಿದ್ದಾರೆ.

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ