ಅಯ್ಯೋ ಯಡವಟ್ಟು: ಬಿಜೆಪಿ ಬಿಡುಗಡೆ ಮಾಡಿದ ಅನಿಮೇಟೆಡ್ ವೀಡಿಯೊದಲ್ಲಿ ಭಾರತದ ನಕ್ಷೆ ತಪ್ಪಾಗಿದೆ ಎಂದ ಕಾಂಗ್ರೆಸ್..! - Mahanayaka

ಅಯ್ಯೋ ಯಡವಟ್ಟು: ಬಿಜೆಪಿ ಬಿಡುಗಡೆ ಮಾಡಿದ ಅನಿಮೇಟೆಡ್ ವೀಡಿಯೊದಲ್ಲಿ ಭಾರತದ ನಕ್ಷೆ ತಪ್ಪಾಗಿದೆ ಎಂದ ಕಾಂಗ್ರೆಸ್..!

congress
15/07/2023


Provided by

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಶ್ಲಾಘಿಸುವ ಭರದಲ್ಲಿ ಬಿಜೆಪಿ ಭಾರೀ ಯಡವಟ್ಟನ್ನು ಮಾಡಿಕೊಂಡು ಇದೀಗ ವಿವಾದ ಸೃಷ್ಟಿಸಿದೆ. ಬಿಜೆಪಿ ಬಿಡುಗಡೆ ಮಾಡಿರುವ ಅನಿಮೇಟೆಡ್ ವೀಡಿಯೊದಲ್ಲಿ ಭಾರತದ ನಕ್ಷೆಯನ್ನು ತಪ್ಪಾಗಿ ತೋರಿಸಿದ್ದು, ಇದರ ವಿರುದ್ಧ ಕಾಂಗ್ರೆಸ್‌ ಆಕ್ರೋಶ ವ್ಯಕ್ತಪಡಿಸಿದೆ.

ಭಾರತದ ಕೆಲವು ಪ್ರದೇಶಗಳು ಪಾಕಿಸ್ತಾನ ಮತ್ತು ಚೀನಾದಲ್ಲಿರುವ ನಕ್ಷೆಯನ್ನು ವಿಡಿಯೋ ಪ್ರಮೋಷನ್‌ಗಾಗಿ ಬಿಜೆಪಿ ಬಳಸಿದೆ. ವಿವಿಧ ರಾಜ್ಯಗಳ ಬಿಜೆಪಿ ಅಧಿಕೃತ ಟ್ವಿಟರ್‌ ಖಾತೆಗಳು ಹಾಗೂ ಸಿಟಿ ರವಿ, ಅಮಿತ್‌ ಮಾಳವೀಯ ಸೇರಿದಂತೆ ಹಲವು ಬಿಜೆಪಿ ನಾಯಕರು ಇದೇ ವಿಡಿಯೋವನ್ನು ಬಳಸಿದ್ದು, ನೆಟ್ಟಿಗರ ಆಕ್ರೋಶದ ಬಳಿಕ ಹಲವರು ವಿಡಿಯೋವನ್ನು ಡಿಲಿಟ್‌ ಮಾಡಿದ್ದಾರೆ.

ಇದು ಭಾರತದ ಪ್ರಾದೇಶಿಕ ಸಮಗ್ರತೆಯ ಮೇಲಿನ ʼದಾಳಿʼ ಎಂದು ಕರೆದಿರುವ ಕಾಂಗ್ರೆಸ್‌, ಭಾರತೀಯ ಜನತಾ ಪಕ್ಷಕ್ಕಿಂತ ಮಿಗಿಲಾದ ದೇಶದ್ರೋಹಿ ಮತ್ತೊಂದಿಲ್ಲ ಟ್ವೀಟ್‌ ಮಾಡಿದೆ.
‘ಬಿಜೆಪಿಗಿಂತ ಮಿಗಿಲಾದ ದೇಶದ್ರೋಹಿ ಯಾರೂ ಇಲ್ಲ. ಮೋದಿಯನ್ನು ಹೊಗಳಲು ಮಾಡಿದ ಅನಿಮೇಷನ್ ವಿಡಿಯೋದಲ್ಲಿ ಭಾರತದ ಪ್ರಾದೇಶಿಕ ಸಮಗ್ರತೆಗೆ ಧಕ್ಕೆಯಾಗಿದೆ. ವಿಡಿಯೋದಲ್ಲಿ ಭಾರತದ ಭೂಮಿ ಪಾಕಿಸ್ತಾನ ಮತ್ತು ಚೀನಾಕ್ಕೆ ಸೇರಿದ್ದು ಎಂದು ತೋರಿಸಲಾಗಿದೆ. ಜನರು ಆಕ್ಷೇಪಿಸಿದಾಗ ಅವರು ಅದನ್ನು ಅವರು ಅಳಿಸಿ ಓಡಿಹೋಗಿದ್ದಾರೆ. ಮೋದಿ-ಜಿ ಮತ್ತು ನಡ್ಡಾ-ಜಿ ದೇಶದ ಕ್ಷಮೆಯಾಚಿಸಬೇಕು, ಏಕೆಂದರೆ ಇದು ಪ್ರಮಾದವಲ್ಲ, ಅಪರಾಧ’ ಎಂದು ಕಾಂಗ್ರೆಸ್‌ ಟ್ವೀಟ್‌ ಮಾಡಿದೆ.

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ