ಅಪ್ಪ–ಅಮ್ಮನ ಜೊತೆಗೆ ಅಮರನಾಥ ಯಾತ್ರೆಗೆ ಹೋದ ನಟಿ ಸಾಯಿ ಪಲ್ಲವಿ: ‘ಪದಗಳಲ್ಲಿ ವರ್ಣಿಸಲು’ ಸಾಧ್ಯವಿಲ್ಲ ಎಂದ ಸಾಯಿ

ಭಾರತದ ಜಮ್ಮು ಕಾಶ್ಮೀರದಲ್ಲಿರುವ ಅಮರನಾಥ ದೇಗುಲಕ್ಕೆ ವಾರ್ಷಿಕ ಯಾತ್ರೆಯು ಆರಂಭವಾಗಿದ್ದು, ಈ ವರ್ಷ 62 ದಿನಗಳ ಕಾಲ ಯಾತ್ರೆ ನಡೆಯಲಿದೆ. ಆಗಸ್ಟ್ 31 ರಂದು ಮುಕ್ತಾಯಗೊಳ್ಳಲಿದೆ.
ನಟಿ ಸಾಯಿ ಪಲ್ಲವಿ ಕೂಡ ತಮ್ಮ ತಂದೆ ತಾಯಿ ಜೊತೆಗೆ ಅಮರನಾಥ ಯಾತ್ರೆ ಕೈಗೊಂಡಿದ್ದು, ಶ್ರೀದೇವರ ದರ್ಶನ ಪಡೆದು ಆ ಫೋಟೋ ವಿಡಿಯೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
‘ಅಮ್ಮ ಅಪ್ಪನೊಂದಿಗೆ ಅಮರನಾಥ ಯಾತ್ರೆ ಕೈಗೊಂಡಿದ್ದು ಎಂದಿಗೂ ಮರೆಯದ ಕ್ಷಣವಾಗಿದ್ದು, ಸುಂದರ ಅನುಭವ ನೀಡಿದೆ. ಅದನ್ನು ಪದಗಳಲ್ಲಿ ವರ್ಣಿಸುವುದಕ್ಕೆ ಆಗುವುದಿಲ್ಲ. ಇಂತಹ ಯಾತ್ರೆಯು ಸಾಧ್ಯವಾಗಿದ್ದು ತಂದೆ ತಾಯಿಗಳ ಆಶೀರ್ವಾದದಿಂದ’ ಎಂದು ಅವರು ತಮ್ಮ ಸೋಷಿಯಲ್ ಮೀಡಿಯಾದ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಯಾತ್ರೆಯ ಕೆಲವು ಅನುಭವಗಳನ್ನೂ ಅವರು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದು, ಈ ಸ್ಥಳ ತುಂಬಾ ಪವರ್ಫುಲ್. ಇದು ನಿಸ್ವಾರ್ಥ ಸೇವೆಗೆ ಸಾಕ್ಷಿಯಾಗಿ ನಿಲ್ಲುತ್ತದೆ. ನಮ್ಮ ಸಂಪತ್ತು, ಸೌಂದರ್ಯ, ಶಕ್ತಿಯನ್ನು ಹೊರತುಪಡಿಸಿ ಒಬ್ಬ ವ್ಯಕ್ತಿಯ ಆರೋಗ್ಯಕರ ದೇಹ, ಗಟ್ಟಿ ಮನಸ್ಸು, ಇತರರಿಗೆ ನೆರವಾಗುವ ಗುಣ ನಮ್ಮ ಪ್ರಯಾಣಕ್ಕೆ ಸಂಪೂರ್ಣ ಅರ್ಥ ನೀಡುತ್ತದೆ ಎಂದಿದ್ದಾರೆ.
ಇನ್ನು ವೈಯಕ್ತಿಕವಾಗಿ ಸಾಯಿ ಪಲ್ಲವಿ ದೈವಭಕ್ತೆಯಾಗಿದ್ದು, ಬಿಡುವಿನ ಸಮಯದಲ್ಲಿ ಅವರು ದೇವಸ್ಥಾನಗಳನ್ನು ಸುತ್ತುತ್ತಲೇ ಇರುತ್ತಾರೆ. ಸಾಯಿಬಾಬಾ ಅವರ ಪರಮ ಭಕ್ತೆಯೂ ಆಗಿರುವ ಸಾಯಿ ಪಲ್ಲವಿ ಇದೀಗ ತಂದೆ-ತಾಯಿ ಜೊತೆ ಅಮರನಾಥ ಯಾತ್ರೆಗೆ ಹೋಗಿ ಯಶಸ್ವಿಯಾಗಿ ಹಿಂದಿರುಗಿದ್ದಾರೆ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw