ಮಕ್ಕಳೊಂದಿಗೆ ಸಹಪಂಕ್ತಿ ಭೋಜನ ಮಾಡಿ ಅಂಬೇಡ್ಕರ್, ಡಿವಿಜಿ ಪುಸ್ತಕ ವಿತರಿಸಿದ ಮಾಜಿ ಶಾಸಕ ವೈ.ಎಸ್.ವಿ ದತ್ತ - Mahanayaka

ಮಕ್ಕಳೊಂದಿಗೆ ಸಹಪಂಕ್ತಿ ಭೋಜನ ಮಾಡಿ ಅಂಬೇಡ್ಕರ್, ಡಿವಿಜಿ ಪುಸ್ತಕ ವಿತರಿಸಿದ ಮಾಜಿ ಶಾಸಕ ವೈ.ಎಸ್.ವಿ ದತ್ತ

y s datta
18/07/2023


Provided by

ಚಿಕ್ಕಮಗಳೂರು : ಪ್ರಾಥಮಿಕ ಶಾಲಾ ಮಕ್ಕಳ ಜೊತೆ ಸರದಿ ಸಾಲಲ್ಲಿ ಊಟಕ್ಕೆ ಕೂತ ಕಡೂರು ಮಾಜಿ ಶಾಸಕ ವೈ.ಎಸ್.ವಿ ದತ್ತ ಪ್ರಾರ್ಥನೆ ಮಾಡಿ ಮಕ್ಕಳ ಜೊತೆಯೇ ಹೋಳಿಗೆ ಊಟ ಮಾಡಿದ್ದಾರೆ.

ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಮಾಜಿ ಶಾಸಕ ವೈ.ಎಸ್.ವಿ.ದತ್ತ, ಸ್ವಗ್ರಾಮ ಯಗಟಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಜೊತೆಯೇ ಊಟ ಮಾಡಿದ್ದಾರೆ.‌ ಅದೇ ಶಾಲೆಯಲ್ಲಿ ಓದಿ ಬೆಳೆದ ದತ್ತ ಅವರ ಸಹೋದರಿ ವೈ.ಎಸ್.ವಿಜಯಲಕ್ಷ್ಮಿಯವರ ಸ್ಮರಣಾರ್ಥ ಮಕ್ಕಳಿಗೆ ಬಸವಣ್ಣ, ಡಿವಿಜಿ ಹಾಗೂ ಅಂಬೇಡ್ಕರ್ ಅವರ ಪುಸ್ತಕಗಳ ಜೊತೆ ಓದಿನ ಸಾಮಗ್ರಿಗಳನ್ನ ನೀಡಿದ್ದಾರೆ.

y s datta

ಮನುಷ್ಯ ಎಷ್ಟೇ ಅತ್ಯುನ್ನತ ಸ್ಥಾನಕ್ಕೆ ಹೋದರೂ ತಮಗೆ ಪ್ರಾಥಮಿಕ ಶಿಕ್ಷಣ ನೀಡಿದ ಶಾಲೆಯೊಡನೆ ಸದಾ ಸಂಪರ್ಕವಿಟ್ಟುಕೊಂಡು ಆ ಶಾಲೆಯ ಅಭಿವೃದ್ಧಿಯಲ್ಲಿ ಕೈಜೋಡಿಸಬೇಕು ಎಂದಿದ್ದಾರೆ. 153 ವರ್ಷಗಳ ಹಿಂದಿನ ಈ ಶಾಲೆ ರಾಜ್ಯವ್ಯಾಪಿ ದೊಡ್ಡ ಕೊಡುಗೆ ನೀಡಿದೆ.‌ ಇಲ್ಲಿ ವ್ಯಾಸಂಗ ಪಡೆದ ಅನೇಕರು ಅತ್ಯುನ್ನತ ಹುದ್ದೆಗೇರಿದ್ದಾರೆ. ಅವರಲ್ಲಿ ವಿಜಯಲಕ್ಷ್ಮಿ ಕೂಡ ಒಬ್ಬರು. ಅವರು ಸಾಂಸ್ಕೃತಿಕ ಹಾಗೂ ಸಾಹಿತಿಕವಾಗಿ ಬಹು ದೊಡ್ಡ ಜ್ಞಾನ ಹೊಂದಿದ್ದರು.‌ ರಾಮಕೃಷ್ಣ ಹೆಗ್ಗಡೆಯವರು ಸಿಎಂ ಆಗಿದ್ದಾಗ ರೂಪಿಸಿದ ಹಲವು ಯೋಜನೆಗಳಿಗೆ ಹೆಸರು ಸೂಚಿಸುತ್ತಿದ್ದರು. ಅಂತಹ ದೊಡ್ಡ ಜ್ಞಾನ ಸಂಪಾದಿಸಿದ್ದ ವಿಜಯಲಕ್ಷ್ಮಿ ಶಿಕ್ಷಣ ಪ್ರೇಮಿಯಾಗಿದ್ದರು ಎಂದರು.

ಬಡ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆಂಬುದು ಅವರ‌ ಆಶಯ. 60 ವರ್ಷಗಳ ಹಿಂದೆ ನಾನೂ ಕೂಡ ಈ ಶಾಲೆಯ ವಿದ್ಯಾರ್ಥಿಯಾಗಿದ್ದ ನೆನಪು ಸದಾ ಜೀವಂತವಾಗಿರುತಗತದೆ ಎಂದಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ    👉74835 51849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿhttps://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿhttps://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿhttps://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ