ಅಪರೂಪದ ಮೀನು ಪತ್ತೆ: ವಿಚಿತ್ರವಾಗಿ ಕಾಣುವ ಈ ಮೀನಿನ ಹೆಸರೇನು ಗೊತ್ತಾ?

ಸಮುದ್ರದ ಆಳದಲ್ಲಿ ವಾಸಿಸುವ ಲಿಯೊಪೋರ್ಡ್ ಹನಿಕೋಂಬ್ ಈಲ್ (ಕನ್ನಡದಲ್ಲಿ ಅರೋಳಿ ಮೀನು) ಎಂದು ಕರೆಯಲ್ಪಡುವ ಅಪರೂಪದ ಮೀನು ಮಂಗಳೂರಿನ ಸುರತ್ಕಲ್ ಸಮೀಪದ ಗುಡ್ಡೆಕೊಪ್ಲ ಸಮುದ್ರ ತೀರದಲ್ಲಿ ಪತ್ತೆಯಾಗಿದೆ.
ತುಳು ಭಾಷೆಯಲ್ಲಿ ಮರಞ್ಞ ಮೀನು ಎಂದು ಕರೆಯಲಾಗುತ್ತದೆ. ಮೇಲ್ನೋಟಕ್ಕೆ ಅಕ್ವೇರಿಯಂನಲ್ಲಿ ಸಾಕುವ ಮೀನಿನಂತೆ ಕಂಡರೂ ಹಾವಿನಂತೆ ಉದ್ದಕ್ಕೆ ಬೆಳೆಯುತ್ತದೆ. ಸ್ವಲ್ಪ ಮಟ್ಟಿಗೆ ವಿಷಪೂರಿತವಾಗಿರುವುದರಿಂದ ಸ್ಥಳೀಯರು ಇದನ್ನು ತಿನ್ನುವುದಿಲ್ಲ. ಹೆಚ್ಚಾಗಿ ಕಲ್ಲು ಪ್ರದೇಶದ ಎಡೆಯಲ್ಲಿ ಇದ್ದುಕೊಂಡು ಸಣ್ಣಮೀನುಗಳನ್ನು ಭಕ್ಷಿಸುತ್ತಾ ಬದುಕುತ್ತದೆ.
ಗುಡ್ಡಕೊಪ್ಲ ಬಳಿಯ ಸಮುದ್ರ ತೀರದಲ್ಲಿ ಮೂರ್ನಾಲ್ಕು ಅಡಿ ಉದ್ದದ ಮೀನು ಪತ್ತೆಯಾಗಿದ್ದು, ಸ್ಥಳೀಯರಾದ ಅನುಪಮ ಶಿವರಾಂ ಅವರು ಗಮನಿಸಿ ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.
ಮಲ್ಪೆ ಬಳಿ ಇದು ಅಪರೂಪಕ್ಕೆ ಗಾಳಕ್ಕೆ ಬೀಳುತ್ತದೆ. ಕಲ್ಲುಗಳು ಇರುವಲ್ಲಿ ಮಾತ್ರ ಇರುತ್ತದೆ. ಹಲ್ಲುಗಳು ಹರಿತವಾಗಿರುತ್ತವೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 74835 51849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/D73015iu7jn2glm2MECosd
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw