ಎನ್ ಡಿಎ ವಿರುದ್ಧ 26 ವಿರೋಧ ಪಕ್ಷಗಳ ಸಮರ: 'ಇಂಡಿಯಾ' ಎಂದು ಹೆಸರಿಟ್ಟಿದ್ದಕ್ಕೆ ಚುನಾವಣಾ ಆಯೋಗಕ್ಕೆ ದೂರು - Mahanayaka

ಎನ್ ಡಿಎ ವಿರುದ್ಧ 26 ವಿರೋಧ ಪಕ್ಷಗಳ ಸಮರ: ‘ಇಂಡಿಯಾ’ ಎಂದು ಹೆಸರಿಟ್ಟಿದ್ದಕ್ಕೆ ಚುನಾವಣಾ ಆಯೋಗಕ್ಕೆ ದೂರು

19/07/2023


Provided by

ಮೊನ್ನೆ, ನಿನ್ನೆ 26 ವಿರೋಧ ಪಕ್ಷಗಳ ನಾಯಕರು ಬೆಂಗಳೂರಲ್ಲಿ ಸಭೆ ನಡೆಸಿ ಮುಂಬರುವ ಲೋಕಸಭೆ ಚುನಾವಣೆಗಾಗಿ ತಮ್ಮ ಮೈತ್ರಿಗೆ I.N.D.I.A. ಎಂಬ ಹೆಸರನ್ನು ಫೈನಲ್​​ ಮಾಡಿದ್ದಾರೆ. ಆದರೆ ನೂತನ ಮೈತ್ರಿಕೂಟಕ್ಕೆ I.N.D.I.A ಎಂದು ಹೆಸರಿಟ್ಟಿರುವುದರ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿದೆ.

ಅಡ್ವೊಕೇಟ್ ಶಶಾಂಕ್ ಶೇಖರ್ ಝಾ ಎಂಬುವವರು ಭಾರತೀಯ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ. ಲಾಂಛನಗಳು ಮತ್ತು ಹೆಸರುಗಳು (ಅನುಚಿತ ನಿಯಂತ್ರಣ) ಕಾಯ್ದೆ-1950ರ ಪ್ರಕಾರ ಪ್ರತಿಪಕ್ಷಗಳು ಇಂಡಿಯಾ ಹೆಸರನ್ನು ತಮ್ಮ ಮೈತ್ರಿಯ ಹೆಸರಾಗಿ ಬಳಸುವುದನ್ನು ನಿಷೇಧಿಸುತ್ತದೆ. ಹೀಗಾಗಿ ವಿಪಕ್ಷಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ದೂರಿದ್ದಾರೆ.

ಮಹಾರಾಷ್ಟ್ರ ಬಿಜೆಪಿಯ ಸಾಮಾಜಿಕ ಮಾಧ್ಯಮ-ಕಾನೂನು ಮತ್ತು ಸಲಹಾ ವಿಭಾಗದ ಮುಖ್ಯಸ್ಥ ಹಾಗೂ ಬಾಂಬೆ ಹೈಕೋರ್ಟ್ ವಕೀಲರಾದ ಅಶುತೋಷ್ ಜೆ ದುಬೆ ಅವರು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದು, ಮೈತ್ರಿಯ ಹೆಸರಿನ ಬಗ್ಗೆ ತಮ್ಮ ಆಕ್ಷೇಪಣೆ ದಾಖಲಿಸಿದ್ದಾರೆ.

ದಿ ಎಂಬ್ಲೆಮ್‌ ಆಂಡ್‌ ನೇಮ್ಸ್‌ (ಪ್ರಿವೆಂಷನ್‌ ಆಫ್‌ ಇಂಪ್ರಾಪರ್‌ ಯೂಸ್) ಕಾಯ್ದೆ-1950 ಪ್ರಕಾರ ದೇಶದ ಹೆಸರನ್ನು ಇತರೆ ಉದ್ದೇಶಗಳಿಗೆ ಬಳಸಿಕೊಳ್ಳುವಂತಿಲ್ಲ, ಇದು ಕಾನೂನು ರೀತಿಯ ಅಪರಾಧ ಎಂದು ಉಲ್ಲೇಖಿಸಿ ದೂರು ಸಲ್ಲಿಸಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ74835 51849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/BnbLYSQaXK1Hate4P0Bt3B

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ