ಮಣಿಪುರದಲ್ಲಿ ಮಹಿಳೆಯನ್ನು ಬೆತ್ತಲೆ ಮಾಡಿದ ಪೈಶಾಚಿಕ ಕೃತ್ಯದ ಹಿಂದೆ ಇದೆ ಭಯಾನಕ ಕಾರಣ: ಅಮಾನವೀಯ ಕೃತ್ಯಕ್ಕೆ ಕಾರಣವಾಯ್ತೇ ಸುಳ್ಳು ಮಾಹಿತಿ..? - Mahanayaka

ಮಣಿಪುರದಲ್ಲಿ ಮಹಿಳೆಯನ್ನು ಬೆತ್ತಲೆ ಮಾಡಿದ ಪೈಶಾಚಿಕ ಕೃತ್ಯದ ಹಿಂದೆ ಇದೆ ಭಯಾನಕ ಕಾರಣ: ಅಮಾನವೀಯ ಕೃತ್ಯಕ್ಕೆ ಕಾರಣವಾಯ್ತೇ ಸುಳ್ಳು ಮಾಹಿತಿ..?

20/07/2023


Provided by

ಮಣಿಪುರದಲ್ಲಿ ಕುಕಿ ಬುಡಕಟ್ಟಿನ ಇಬ್ಬರು ಮಹಿಳೆಯರನ್ನು ಬೆತ್ತಲೆ ಮೆರವಣಿಗೆ ಮಾಡಿ ಸಾಮೂಹಿಕ ಅತ್ಯಾಚಾರ ಮಾಡಿದ ಘಟನೆ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಇತ್ತ ಕುಕಿ ಸಮುದಾಯದ ಮಹಿಳೆಯರ ಮೇಲಿನ ದೌರ್ಜನ್ಯಗಳಿಗೆ ‘ಸುಳ್ಳು ಸುದ್ದಿಯೇ ಕಾರಣ’ ಎಂಬ ಮಾಹಿತಿ ಈಗ ಹೊರಬಿದ್ದಿದೆ.

ಮೈತೇಯಿ ಗುಂಪಿನಿಂದ ಕುಕಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಯುವ ಮುನ್ನ ವ್ಯಾಪಕವಾಗಿ ಸುಳ್ಳು ಸುದ್ದಿ ಹರಿದಾಡಿತ್ತು. ಮೈತೇಯಿ ಜನಾಂಗದ ಯುವತಿಯೊಬ್ಬಳನ್ನು ಕುಕಿ ಬುಡಕಟ್ಟಿನ ಗಂಡಸರು ಅತ್ಯಾಚಾರ ಮಾಡಿ, ಕೊಲೆ ಮಾಡಿದ್ದಾರೆ ಎಂಬುದೇ ಈ ಸುಳ್ಳು ಸುದ್ದಿಯಾಗಿತ್ತು.

ಪ್ಲಾಸ್ಟಿಕ್‌ ಚೀಲದಲ್ಲಿ ಸುತ್ತಿದ್ದ ಮಹಿಳೆಯೊಬ್ಬರ ಫೋಟೋವೊಂದನ್ನು ಶೇರ್ ಮಾಡಿ ಮೈತೇಯಿ ನರ್ಸಿಂಗ್ ವಿದ್ಯಾರ್ಥಿನಿಯನ್ನು ಕುಕಿ ಪುರುಷರು ರೇಪ್‌ ಮಾಡಿ ಕ್ರೂರವಾಗಿ ಕೊಂದಿದ್ದಾರೆ ಎಂದು ಬರೆಯಲಾಗಿತ್ತು.

ಆದರೆ ವೈರಲ್‌ ಚಿತ್ರದಲ್ಲಿದ್ದ ಮಹಿಳೆ ಮಣಿಪುರದ ನರ್ಸಿಂಗ್ ವಿದ್ಯಾರ್ಥಿನಿಯಾಗಿರಲಿಲ್ಲ. ಬದಲಾಗಿ ದೆಹಲಿ ಮೂಲದ ಆಯುಷಿ ಚೌಧರಿ ಎಂದು ಗುರುತು ಪತ್ತೆಯಾಗಿತ್ತು. ಆಕೆ ನವೆಂಬರ್ 2022 ರಲ್ಲಿ ಆಕೆಯ ಪೋಷಕರಿಂದ ಹತ್ಯೆಗೀಡಾಗಿದ್ದಳು. ಮೇ 3 ರಂದು ಮಣಿಪುರದಲ್ಲಿ ಘರ್ಷಣೆಗಳು ಭುಗಿಲೆದ್ದ ಕೆಲವೇ ದಿನಗಳಲ್ಲಿ  ಈ ಫೋಟೋವನ್ನು ಮಣಿಪುರದಲ್ಲಾದ ರೇಪ್‌ ಫೋಟೋ ಎಂದು ಹಂಚಿಕೊಳ್ಳಲಾಗಿತ್ತು.

ಮೇ 5 ರಂದು ಮೈತೇಯಿ ಮಹಿಳೆಯ ರೇಪ್‌ & ಮರ್ಡರ್‌ ಸುದ್ದಿಯನ್ನು ಮಣಿಪುರ ಪೊಲೀಸರು ನಿರಾಕರಿ ಮೈತೇಯಿ ಮಹಿಳೆಯ ಮೇಲೆ ಯಾವುದೇ ರೀತಿಯ ಅತ್ಯಾಚಾರ ನಡೆದಿಲ್ಲ. ವೈರಲ್‌ ಆಗುತ್ತಿರುವ ಫೋಟೋದಲ್ಲಿರುವುದು ಮೈತೇಯಿ ಮಹಿಳೆ ಅಲ್ಲ ಎಂದು ಮಣಿಪುರ ಪೊಲೀಸರೇ ಸ್ಪಷ್ಟಪಡಿಸಿದ್ದರೂ ಅಷ್ಟು ಹೊತ್ತಿಗಾಗಲೇ ಕುಕಿ ಜನಾಂಗದ ಮೇಲೆ ದಾಳಿಗಳು ಆರಂಭವಾಗಿದ್ದವು. ಕುಕಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯದ ಭೀಬತ್ಸ ಕೃತ್ಯಗಳು ಶುರುವಾಗಿದ್ದವು. ಈ ಸುಳ್ಳು ಸುದ್ದಿಯಿಂದಲೇ ಕುಕಿ ಮಹಿಳೆಯರನ್ನು ಬೆತ್ತಲೆ ಮಾಡಿ ಮೆರವಣಿಗೆ ಮಾಡಿ ಅತ್ಯಾಚಾರ ಪ್ರಕರಣ ನಡೆದೇ ಹೋಗಿತ್ತು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ74835 51849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/BnbLYSQaXK1Hate4P0Bt3B

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ