ಹೊಲಕ್ಕೆ ಕರೆದೊಯ್ದ ಬಳಿಕ ಒಬ್ಬರಾದ ಬಳಿಕ ಮತ್ತೊಬ್ಬರಂತೆ ಮೃಗಗಳಂತೆ ಮೇಲೆರಗಿದ್ದಾರೆ: ಸಂತ್ರಸ್ತೆಯ ಪತಿ ಹೇಳಿಕೆ - Mahanayaka
12:51 AM Wednesday 28 - January 2026

ಹೊಲಕ್ಕೆ ಕರೆದೊಯ್ದ ಬಳಿಕ ಒಬ್ಬರಾದ ಬಳಿಕ ಮತ್ತೊಬ್ಬರಂತೆ ಮೃಗಗಳಂತೆ ಮೇಲೆರಗಿದ್ದಾರೆ: ಸಂತ್ರಸ್ತೆಯ ಪತಿ ಹೇಳಿಕೆ

manipur
21/07/2023

ಇಂಫಾಲ: ಮಹಿಳೆಯರನ್ನು ಬೆತ್ತಲೆ ಮಾಡಿ ಮೆರವಣಿಗೆ ನಡೆಸಿ, ಗ್ಯಾಂಗ್ ರೇಪ್ ಮಾಡಿದ ಪ್ರಕರಣದಲ್ಲಿ ಓರ್ವ ಆರೋಪಿಯನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ. ಆದ್ರೆ, ಸ್ಥಳೀಯ ಪೊಲೀಸರು ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಕಾರಣವಾಗಿದ್ದಾರೆ ಎನ್ನುವ ಆಕ್ರೋಶ ಇದೀಗ ಕೇಳಿ ಬಂದಿದೆ.

ನಮ್ಮ ಮನೆಯ ಮಹಿಳೆಯರನ್ನು ಎಳೆದೊಯ್ಯುವಾಗ ಸ್ಥಳದಲ್ಲೇ ಪೊಲೀಸರು ಇದ್ದರು. ಅವರು ದುಷ್ಕರ್ಮಿಗಳಿಂದ ರಕ್ಷಿಸುವ ಬದಲಾಗಿ, ದುಷ್ಕರ್ಮಿಗಳ ಬಳಿಯೇ ಬಿಟ್ಟು ಹೋದರು. ಇದರಿಂದಾಗಿ ದುಷ್ಕರ್ಮಿಗಳಿಗೆ ನಮ್ಮ ಮನೆಯವರನ್ನು ವಿವಸ್ತ್ರಗೊಳಿಸಿ ಮೆರವಣಿಗೆ ನಡೆಸಲು ಧೈರ್ಯ ನೀಡಿತು ಎಂದು ಸಂತ್ರಸ್ತ ಮಹಿಳೆಯ ಪತಿ ಆರೋಪಿಸಿದ್ದಾರೆ.

ದೊಡ್ಡ ಗುಂಪೊಂದು ನಮ್ಮ ಮನೆಯ ಮಹಿಳೆಯರನ್ನು ಸುತ್ತುವರಿದು ಹಲ್ಲೆ ನಡೆಸಿ ವಿವಸ್ತ್ರಗೊಳಿಸಿದರು. ಬಳಿಕ ಅವರನ್ನು ರಸ್ತೆಯಲ್ಲಿ ಮೆರವಣಿಗೆ ನಡೆಸಿ ಹೊಲಕ್ಕೆ ಎಳೆದೊಯ್ದರು. ಅಲ್ಲಿ ಅವರೆಲ್ಲರೂ ಒಬ್ಬರಾದ ಬಳಿಕ ಮತ್ತೊಬ್ಬರು ಸಾಮೂಹಿಕ ಅತ್ಯಾಚಾರ ನಡೆಸಿದರು ದುಷ್ಕರ್ಮಿಗಳು ನನ್ನ ಪತ್ನಿಯ ಮೇಲೆ ಮೃಗಗಳಂತೆ ಮೇಲೆರಗಿದ್ದಾರೆ ಎಂದು ಸಂತ್ರಸ್ತೆಯ ಪತಿ ಹೇಳಿದ್ದಾರೆ.

ರಕ್ಷಿಸ ಬೇಕಾದ ಪೊಲೀಸರೇ ಈ  ಘಟನೆಗೆ ನೇರವಾಗಿ ಕಾರಣವಾಗಿದ್ದಾರೆ. ದುಷ್ಕರ್ಮಿಗಳ ಕೈಗೆ ಮಹಿಳೆಯರು ಸಿಕ್ಕಿದರೆ ಮುಂದಿನ ಪರಿಣಾಮ ಏನಾಗುತ್ತದೆ ಎನ್ನುವುದು ತಿಳಿದು ಕೂಡ ಅವರು ಬಿಟ್ಟಿ ಹೋಗಿರುವುದು ಇದೀಗ ಪೊಲೀಸ್ ವ್ಯವಸ್ಥೆಯ ಮೇಲಿನ ನಂಬಿಕೆಯ ಬಗ್ಗೆ ಮಾತನಾಡಲು ಕಾರಣವಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ74835 51849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿhttps://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿhttps://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿhttps://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ