ಉಡುಪಿ: ವಸಂತ ಬನ್ನಾಡಿಯವರ ಕವನ ಸಂಕಲನಗಳ ಬಿಡುಗಡೆ - Mahanayaka

ಉಡುಪಿ: ವಸಂತ ಬನ್ನಾಡಿಯವರ ಕವನ ಸಂಕಲನಗಳ ಬಿಡುಗಡೆ

vasantha bannadi
23/07/2023


Provided by

ಉಡುಪಿ: ವಸಂತ ಬನ್ನಾಡಿಯವರ ‘ಬೆಳದಿಂಗಳ ಮರ’ ಮತ್ತು ‘ಊರು ಮನೆ ಉಪ್ಪು ಕಡಲು’ ಕವನ ಸಂಕಲನಗಳನ್ನು ನಿನ್ನೆ ಉಡುಪಿಯ ಎಂಜಿಎಂ ಕಾಲೇಜಿನ ರವೀಂದ್ರ ಮಂಟಪದ ಆವರಣದಲ್ಲಿ ಶಬ್ದಗುಣ,ಕುಂದಾಪುರ ಮತ್ತು ಭೂಮಿಗೀತ,ಪಟ್ಲ ಆಶ್ರಯದಲ್ಲಿ ಬಿಡುಗಡೆಗೊಳಿಸಲಾಯಿತು.

ಈ ಸಂದರ್ಭದಲ್ಲಿ ಶಶಿಧರ ಹೆಮ್ಮಾಡಿ,ಪ್ರಕಾಶ್ ನರೋನ್ನಾ,ಲಕ್ಷ್ಮೀನಾರಾಯಣ ಕಾರಂತ, ಪ್ರಸನ್ನ ಪಿ.ಬಿ, ಉದ್ಯಾವರ ನಾಗೇಶ್ ಕುಮಾರ್, ಕೆ.ಫಣಿರಾಜ್ ಡಾ.ಮಹಾಬಲೇಶ್ವರ ರಾವ್,ಬಾಲಕೃಷ್ಣ ಶೆಟ್ಟಿ,ಹರಿಯಪ್ಪ ಪೇಜಾವರ,ವರದೇಶ ಹಿರೇಗಂಗೆ,ರಾಮಕೃಷ್ಣ ಹೇಳೆ೯,ಸುಧೀರ್ ಕುಮಾರ್ ಪಟ್ಲ, ಸುಧಾಕರ್ ಸೇರಿಗಾರ .ಜಿ.ವಿಷ್ಣು ಉಪಸ್ಥಿತರಿದ್ದರು.

‘ಸಾಮಾಜಿಕ ಹೊಣೆಗಾರಿಕೆ ಮತ್ತು ಕಾವ್ಯ’ ಎಂಬ ವಿಷಯದ ಕುರಿತು ಡಾ.ಮಹಾಬಲೇಶ್ವರ ರಾವ್ ಮತ್ತು ಕೆ.ಫಣಿರಾಜ್ ಮಾತನಾಡಿದರು.ಕವನ ಸಂಕಲನಗಳಿಂದ ಆಯ್ದ ಕೆಲವು ಕವಿತೆಗಳನ್ನು ಡಾ.ಮಹಾಬಲೇಶ್ವರ ರಾವ್,ಪ್ರಸನ್ನ ಪಿ.ಬಿ, ಶಶಿಧರ ಹೆಮ್ಮಾಡಿ ಮತ್ತು ಹರಿಯಪ್ಪ ಪೇಜಾವರ ಓದಿದರು.

ಪ್ರಾರಂಭದಲ್ಲಿ ಲೇಖಕ ವಸಂತ ಬನ್ನಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು . ರಂಗನಿರ್ದೇಶಕ ಸಂತೋಷ ನಾಯಕ್ ಪಟ್ಲ ಕಾರ್ಯಕ್ರಮ ನಿರ್ವಹಿಸಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 7483551849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ