ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ ಹಿನ್ನೆಲೆ ವಿವಿಧ ಪ್ರದೇಶಗಳ ಶಾಲೆಗಳಿಗೆ ರಜೆ - Mahanayaka

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ ಹಿನ್ನೆಲೆ ವಿವಿಧ ಪ್ರದೇಶಗಳ ಶಾಲೆಗಳಿಗೆ ರಜೆ

rain
24/07/2023


Provided by

ಶಾಲೆಯ ರಸ್ತೆಯಲ್ಲಿ ಮರ ಬಿದ್ದ ಹಾಗೂ ನದಿಯಲ್ಲಿ ನೀರಿನ ಮಟ್ಟ ಏರಿ ಸಂಚಾರ ಅಸಾಧ್ಯವಾದ ಕಾರಣ ಮಕ್ಕಳ ಸುರಕ್ಷತೆಯ ಹಿನ್ನೆಲೆಯಲ್ಲಿ ಮಂಗಳೂರು ತಹಶೀಲ್ದಾರ್ ಅವರ ಅನುಮತಿ ಮೇರೆಗೆ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ (ಮಂಗಳೂರು ಉತ್ತರ) ಜುಲೈ 24ರಂದು ರಜೆ ಸಾರಲಾಗಿದೆ.

ಅಳಿಯೂರು ಪ್ರಾಥಮಿಕ ಶಾಲೆ ಮತ್ತು ಅಳಿಯೂರು ಪ್ರೌಢ ಶಾಲೆಗಳಿಗೂ ಇಂದು (ಜು.24ರಂದು) ಮಳೆ ಕಾರಣ ರಜೆ ಘೋಷಿಸಲಾಗಿದೆ. ಈ ದಿನದ ರಜೆಯನ್ನು ಮುಂದಿನ 2 ಶನಿವಾರಗಳಂದು ತರಗತಿ ನಡೆಸಿ ಮರುಹೊಂದಿಸಲು ಸೂಚಿಸಲಾಗಿದೆ.

ಇನ್ನು‌ ಕಳೆದೆರಡು ದಿನಗಳಿಂದ ರಾಜ್ಯದಂತ ಹೆಚ್ಚಿನ ಮಳೆಯಾಗುತ್ತಿದ್ಸು, ಬಂಟ್ವಾಳ ತಾಲೂಕಿನ ನೇತ್ರಾವತಿ ನದಿಯಲ್ಲಿ ನೀರು ಉಕ್ಕಿ ಹರಿಯುತ್ತಿದೆ. ಈ ಹಿನ್ನೆಲೆಯಲ್ಲಿ ಶಾಲಾ ಮಕ್ಕಳಿಗೆ ತೊಂದರೆಯಾಗುವ ನದಿ ತೀರದ ಆಯ್ದ ಕೆಲವು ಶಾಲೆಗಳಿಗೆ ರಜೆ ಘೋಷಿಸಲಾಗಿದೆ ಎಂದು ಬಂಟ್ವಾಳ ತಹಶಿಲ್ದಾರ್ ಪ್ರಕಟನೆ ತಿಳಿಸಿದೆ.

ಹಯತುಲ್ ಶಾಲೆ ಗೂಡಿನಬಳಿ, ಕಿರಿಯ ಪ್ರಾಥಮಿಕ ಶಾಲೆ ವಳವೂರು, ಶಾರದಾ ಮತ್ತು ಎಸ್.ಎಲ್.ಎನ್.ಪಿ. ಪಾಣೆಮಂಗಳೂರು, ಎಲ್.ಸಿ.ಆರ್. ಕಕ್ಕೆಪದವು, ಕೆ.ಪಿ.ಎಸ್. ಮೊಂಟೆಪದವು, ಕುನಿಲ್ ಶಾಲೆ ತುಂಬೆ. ಬಿ.ಎ. ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮ ಶಾಲೆ, ಪೆರ್ಲ ಬಿಯಪಾದ ಶಾಲೆ, ಸರಪಾಡಿ ಪ್ರೈಮರಿ ಶಾಲೆ, ಹೆಗಡೆ ಶಾಲೆ, ಪೂಪಾಡಿ ಕಟ್ಟಿ ಶಾಲೆ, ದಡ್ಡಲಕಾಡು ಶಾಲೆ, ಎರ್ಮಲಪದವು, ಮಜ್ಲಿಸ್ ಶಾಲೆಗಳಿಗೆ ರಜೆ ಸಾರಲಾಗಿದ್ದು, ಉಳಿದಂತೆ ಇತರ ಎಲ್ಲ ಶಾಲೆಗಳು ಎಂದಿನಂತೆ ಕಾರ್ಯಾಚರಿಸಲಿವೆ ಎಂದು ತಹಶೀಲ್ದಾರ್ ಮಾಹಿತಿ ನೀಡಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 7483551849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ