ಬೆಳ್ತಂಗಡಿ: ಮಣಿಪುರ ಗಲಭೆ, ಮಹಿಳೆಯರ ಮೇಲೆ ಅತ್ಯಾಚಾರ ಖಂಡಿಸಿ ಕ್ರೈಸ್ತರಿಂದ ಪ್ರತಿಭಟನೆ - Mahanayaka

ಬೆಳ್ತಂಗಡಿ: ಮಣಿಪುರ ಗಲಭೆ, ಮಹಿಳೆಯರ ಮೇಲೆ ಅತ್ಯಾಚಾರ ಖಂಡಿಸಿ ಕ್ರೈಸ್ತರಿಂದ ಪ್ರತಿಭಟನೆ

belthangady protest
24/07/2023


Provided by

ಬೆಳ್ತಂಗಡಿ:  ಮಣಿಪುರದಲ್ಲಿ ಗಲಭೆ ಹಾಗೂ ಮಹಿಳೆಯರನ್ನು ವಿವಸ್ತ್ರಗೊಳಿಸಿ ದೌರ್ಜನ್ಯ ನಡೆಸಿರುವುದು, ಗಲಭೆ ನಿಯಂತ್ರಣಕ್ಕೆ ರಾಜ್ಯ ಮತ್ತು ಕೇಂದ್ರ ಸರ್ಕಾರ ವಿಫಲವಾಗಿರುವುದನ್ನು ವಿರೋಧಿಸಿ ಇಂದು ಬೆಳ್ತಂಗಡಿಯಲ್ಲಿ ಕ್ರೈಸ್ತ ಸಂಘಟನೆಗಳ ಒಕ್ಕೂಟ ಹಾಗೂ ಸಮಾನ ಮನಸ್ಕರಿಂದ ಪ್ರತಿಭಟನೆ ನಡೆಯಿತು.

ಮಣಿಪುರದಲ್ಲಿ ಮೇ 4ರಿಂದ ಗಲಭೆ ಆರಂಭವಾಗಿತ್ತು. ಗಲಭೆ ಆರಂಭವಾಗಿ ಎಂಬತ್ತು ದಿನಗಳು ಕಳೆದರೂ ಅಲ್ಲಿನ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಗಲಭೆ ನಿಯಂತ್ರಿಸಲು ವಿಫಲವಾಯಿತು. ದೇಶದ ಮಹಿಳೆಯರ ಮಾನವನ್ನು ಹರಾಜು ಹಾಕಿದರೂ ಎಫ್ ಐ ಆರ್ ದಾಖಲಿಸಿ ಸಂತಸ್ತರಿಗೆ ಪರಿಹಾರ ಒದಗಿಸಲು ಸರ್ಕಾರ ವಿಫಲವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಎರಡು ಮಹಿಳೆಯರನ್ನು ಬೆತ್ತಲೆ ಮೆರವಣಿಗೆ ನಡೆಸಿದ ಬಳಿಕ ನಾವೆಲ್ಲರೂ ಎಚ್ಚೆತ್ತುಕೊಂಡಿದ್ದೇವೆ. ದೇಶದ ಚಿತ್ರಣ ಕೊಡುವ ಮಾಧ್ಯಮಗಳು ಸುಮ್ಮನಿದ್ದಾರೆ ಎಂದು ಪ್ರತಿಭಟನಾಕಾರರು ನಿರಾಶೆ ವ್ಯಕ್ತಪಡಿಸಿದರು.

ಬೆಳ್ತಂಗಡಿ ಅಂಬೇಡ್ಕರ್ ಭವನದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ  ಮಿನಿ ವಿಧಾನಸೌಧದವರೆಗೂ ತೆರಳಿ ತಹಶೀಲ್ದಾರ್ ಮೂಲಕ ರಾಷ್ಟ್ರಪತಿ ಹಾಗೂ ಪ್ರಧಾನಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಬಿಷಪ್ ಲಾರೆನ್ಸ್ ಮುಕ್ಕುಯಿ  ಬೆಳ್ತಂಗಡಿ ಹೊಲಿ ರೆಡೀಮರ್ ಚರ್ಚ್ ನ ಪ್ರಧಾನ ಧರ್ಮಗುರು ಫಾ.ವಾಲ್ಟರ್ ಡಿಮೆಲ್ಲೋ, ಮಾನ್ಸಿಂಜರ್ ಫಾ.ವಲಿಯಂ ಪರಂಬಿಲ್, ವಿಧಾನ ಪರಿಷತ್ ಸದಸ್ಯರಾದ ಹರೀಶ್ ಕುಮಾರ್, ಮಾಜಿ ಶಾಸಕರಾದ ಕೆ.ವಸಂತ ಬಂಗೇರ,  ಶಾಲೆಟ್ ಪಿಂಟೋ, ಸುಪ್ರಿಯಾ, ಸೇವಿಯಾರ್ ಪಾಲೆಲಿ, ಸೆಬಾಸ್ಟಿಯನ್,  ಲಿಯೋ ರೋಡ್ರಿಗಸ್,  ಕೆಎಸ್ ಎಂಸಿ ನಿರ್ದೇಶಕ ಫಾ.ಶಾಜಿ, ವಿಜಯ ಸಿಕ್ವೇರಾ, ಅಲೋಶಿಯಸ್ ಲೋಬೋ, ಲಾನ್ಸಿ ಪಿರೇರಾ, ಜೆಸಿಂತಾ ಮೋನಿಸ್, ವಿನ್ಸೆಂಟ್ ಡಿಸೋಜಾ, ರಾಜೇಶ್, ಮೋಹನ್ ಕೆ.ಸಿ., ಬಿಟ್ಟಿ ನೆಡುನೀಲಂ, ರೆಜಿ, ಫಾ.ಸೆಬಾಸ್ಟಿಯನ್, ಫಾ. ಜೇಮ್ಸ್ ಡಿಸೋಜ, ಫಾ.ಎಲಿಯಾಸ್ ಡಿಸೋಜ, ಆಂಟೋನಿ ಪಿ.ಜೆ. ಅನಿಲ್ ಎ.ಜೆ., ಎಂ.ಜೆ. ಸೆಬಾಸ್ಟಿಯನ್, ಜೈಸನ್ ಪಟ್ಟೇರಿಲ್, ವಿನ್ಸೆಂಟ್ ಡಿಸೋಜ,  ವಾಲ್ಟರ್ ಮೋನಿಸ್, ಸೀರೋಮಲಬಾರ್ ಕೆಥೋಲಿಕ್ ಅಸೋಸಿಯೇಷನ್, ಮಾತೃ ವೇದಿಕೆ ಮಹಿಳಾ ಘಟಕ, ಕೆಥೋಲಿಕ್ ಸಭಾ ಬೆಳ್ತಂಗಡಿ ವಲಯ, ಸಿಎಸ್ ಐ ಚರ್ಚ್, ಪೆಂಟ ಕೊಸ್ಟಲ್ ಚರ್ಚ್ ಗಳು, ಬೆಳ್ತಂಗಡಿ ತಾಲೂಕು ಕ್ರೈಸ್ತರು ಹಾಗೂ ಇತರ ಸಮಾನಮನಸ್ಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ74835 51849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿhttps://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿhttps://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿhttps://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ