ಆನೆ ತುಳಿತಕ್ಕೆ ಬಾಲಕ ಸಾವು: ಎಸಿಎಫ್, ಆರ್ ಎಫ್ ಒ ಬೆವರಿಳಿಸಿದ ಶಾಸಕ

ಚಾಮರಾಜನಗರ: ಆನೆ ತುಳಿತಕ್ಕೆ ಬಾಲಕ ಮೃತಪಟ್ಟರೂ ಮೊದಲ ಕಂತಿನ ಪರಿಹಾರ ನೀಡದ ಅರಣ್ಯಾಧಿಕಾರಿಗಳಿಗೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಬೆವರಿಳಿಸಿ ತರಾಟೆಗೆ ತೆಗೆದುಕೊಂಡರು.
ಚಾಮರಾಜನಗರ ತಾಲೂಕಿನ ಎತ್ತೆಗೌಡನದೊಡ್ಡಿ ಗ್ರಾಮದಲ್ಲಿ ಇತ್ತೀಚೆಗೆ ಆನೆ ತುಳಿತದಿಂದ ಗಾಯಗೊಂಡಿದ್ದ ಬಾಲಕ ಇಂದು ಅಸುನೀಗಿದ್ದನು. ಮೃತ ಬಾಲಕನ ಮನೆಗೆ ಶಾಸಕರು ಭೇಟಿ ನೀಡಿದ ವೇಳೆ, ಮೊದಲ ಕಂತಿನ ಹಣ ಬಾರದಿರುವುದು ತಿಳಿದು ಎಸಿಎಫ್ ಸುರೇಶ್ ಹಾಗೂ ಆರ್ ಎಫ್ ಒ ನಿಸಾರ್ ಅಹಮದ್ ಅವರನ್ನು ತರಾಟೆಗೆ ತೆಗೆದುಕೊಂಡರು.
ಸೋಲಿಗರನ್ನ ಕಂಡರೇ ಯಾಕೆ ನಿರ್ಲಕ್ಷ್ಯ, ಆತನ ಮೇಲೆ ಆನೆ ದಾಳಿ ತಿಂಗಳಾದರೂ ಮೊದಲ ಕಂತಿನ ಹಣ ಕೊಟ್ಟಿಲ್ಲ, ನಿಮ್ಮ ಡಿಸಿಎಫ್ ಅವರಿಗೆ ಈ ಘಟನೆನೇ ಗೊತ್ತಿಲ್ಲ, ಡಾಕ್ಯುಮೆಂಟ್ ಕೊಡಲು ಅವರಿಗೇನು ಗೊತ್ತು, ನೀವು ಕಲೆಕ್ಟ್ ಮಾಡಬೇಕು, ಎಂಎಲ್ಸಿ ಕೇಸ್ ಆಗಿಲ್ಲವೇ ಎಂದು ಬೆವರಿಳಿಸಿದರು. ಕೂಡಲೇ ಮೊದಲ ಕಂತಿನ ಹಣ ಹಾಗೂ ಉಳಿದ ಹಣವನ್ನು ಫಲಾನುಭವಿಗೆ ಕೊಡಿ ಎಂದು ಸೂಚಿಸಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 74835 51849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/D73015iu7jn2glm2MECosd
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw