ಗದ್ದೆಗೆ ನುಗ್ಗಿ ಮೆಕ್ಕೆಜೋಳ ತಿಂದ ಎಮ್ಮೆಯನ್ನು ಮುಳ್ಳುತಂತಿಯಲ್ಲಿ ಕಟ್ಟಿ ಹಾಕಿ ಥಳಿಸಿದ ರೈತ!

ಮೆಕ್ಕೆಜೋಳದ ಗದ್ದೆಗೆ ನುಗ್ಗಿ ಮೆಕ್ಕೆಜೋಳ ತಿಂದಿದ್ದಕ್ಕೆ ಗದ್ದೆಯ ಮಾಲಿಕ ಎಮ್ಮೆಯನ್ನು ಮುಳ್ಳು ತಂತಿಯಿಂದ ಕಟ್ಟಿಹಾಕಿದ ಅಮಾನವೀಯ ಘಟನೆ ಉತ್ತರ ಪ್ರದೇಶದ ತಿರ್ವಾ ಕೊತ್ವಾಲಿ ಪ್ರದೇಶದ ಅಹೆರ್ ಗ್ರಾಮದಲ್ಲಿ ನಡೆದಿದೆ.
ಸಂತೋಷ್ ಎಂಬ ವ್ಯಕ್ತಿಗೆ ಸೇರಿದ ಎಮ್ಮೆ ಗ್ರಾಮದ ರೈತರೊಬ್ಬರ ಮೆಕ್ಕೆಜೋಳದ ಗದ್ದೆಗೆ ಹೋಗಿ ಸ್ವಲ್ಪ ಮೆಕ್ಕೆಜೋಳವನ್ನು ತಿಂದಿತ್ತು. ಇದರಿಂದ ಕೋಪಗೊಂಡ ರೈತ ಎಮ್ಮೆಯನ್ನು ಹಿಡಿದು ಮುಳ್ಳುತಂತಿಯಲ್ಲಿ ಕಟ್ಟಿ ಹಾಕಿದ್ದಾನೆ.
ವಿಷಯ ತಿಳಿದ ಎಮ್ಮೆಯ ಮಾಲಿಕ ಸಂತೋಷ್ ಸ್ಥಳಕ್ಕೆ ಹೋಗಿ ಹೇಗೋ ಮುಳ್ಳು ತಂತಿಯಿಂದ ಎಮ್ಮೆಯನ್ನು ಬಿಡಿಸಿಕೊಂಡು ನೇರವಾಗಿ ಸ್ಥಳೀಯ ಪೊಲೀಸ್ ಠಾಣೆಗೆ ತೆರಳಿ ಕೃತ್ಯ ಎಸಗಿದ ವಿನಯ್ ಎಂಬ ರೈತನ ವಿರುದ್ಧ ದೂರು ನೀಡಿದ್ದಾರೆ.
ಎಮ್ಮೆ ಮೆಕ್ಕೆಜೋಳ ತಿಂದಿದ್ದರಿಂದಾಗಿ ವಿಪರೀತ ಕೋಪಗೊಂಡಿದ್ದ ವಿನಯ್ ಎಮ್ಮೆಯನ್ನು ಮುಳ್ಳು ತಂತಿಯಲ್ಲಿ ಕಟ್ಟಿ ಹಾಕಿ ಕಟ್ಟಿಗೆ ದೊಣ್ಣೆಯಿಂದ ಮನಬಂದಂತೆ ಥಳಿಸಿದ್ದ. ಇದರಿಂದಾಗಿ ಎಮ್ಮೆಗೆ ಗಂಭೀರವಾದ ಗಾಯಗಳಾಗಿವೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 74835 51849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/D73015iu7jn2glm2MECosd
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw