ಕೋವಿಡ್ ಕುರಿತಂತೆ ಆರ್ ಟಿಐ ನಲ್ಲಿ ಮಾಹಿತಿ ಕೇಳಿದ ವ್ಯಕ್ತಿ: ಎಸ್ ಯುವಿ ಕಾರಲ್ಲಿ 40,000 ಪುಟಗಳ ಉತ್ತರದ ಪ್ರತಿ ಇಟ್ಕೊಂಡು ಹೋದ ವ್ಯಕ್ತಿ..! - Mahanayaka

ಕೋವಿಡ್ ಕುರಿತಂತೆ ಆರ್ ಟಿಐ ನಲ್ಲಿ ಮಾಹಿತಿ ಕೇಳಿದ ವ್ಯಕ್ತಿ: ಎಸ್ ಯುವಿ ಕಾರಲ್ಲಿ 40,000 ಪುಟಗಳ ಉತ್ತರದ ಪ್ರತಿ ಇಟ್ಕೊಂಡು ಹೋದ ವ್ಯಕ್ತಿ..!

29/07/2023


Provided by

ಮಧ್ಯಪ್ರದೇಶದ ಇಂದೋರ್‌ನಲ್ಲಿ ವ್ಯಕ್ತಿಯೊಬ್ಬರು ಕೋವಿಡ್-19 ಸಾಂಕ್ರಾಮಿಕಕ್ಕೆ ಸಂಬಂಧಿಸಿದಂತೆ ಆರ್ ಟಿಐ ಅಡಿ ಕೇಳಲಾದ ಮಾಹಿತಿಗೆ ಬರೋಬ್ಬರಿ 40,000 ಪುಟಗಳ ಉತ್ತರ ಪಡೆದಿದ್ದಾರೆ. ನಂತರ ಆ ದಾಖಲೆಗಳನ್ನು ಎಸ್ ಯುವಿ ಕಾರಿನಲ್ಲಿ ಮನೆಗೆ ಕೊಂಡೊಯ್ದಿದ್ದಾರೆ.

ಕೋವಿಡ್-19 ಸಾಂಕ್ರಾಮಿಕ ಅವಧಿಯಲ್ಲಿ ಔಷಧಗಳು, ಉಪಕರಣಗಳು ಮತ್ತು ಸಂಬಂಧಿತ ಸಾಮಗ್ರಿಗಳ ಖರೀದಿಗೆ ಸಂಬಂಧಿಸಿದ ಟೆಂಡರ್‌ಗಳು ಮತ್ತು ಬಿಲ್ ಪಾವತಿಗಳ ವಿವರಗಳನ್ನು ಕೋರಿ ಇಂದೋರ್‌ನ ಮುಖ್ಯ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿಗೆ ಆರ್ ಟಿಐ ಅರ್ಜಿ ಹಾಕಿದ್ದಾಗಿ ಧರ್ಮೇಂದ್ರ ಶುಕ್ಲಾ ಹೇಳಿದರು.

ಒಂದು ತಿಂಗಳೊಳಗೆ ಮಾಹಿತಿ ನೀಡದ ಕಾರಣ ಮೊದಲ ಮೇಲ್ಮನವಿ ಅಧಿಕಾರಿ ಶರದ್ ಗುಪ್ತಾ ಅವರನ್ನು ಸಂಪರ್ಕಿಸಿದಾಗ ಅವರು ಮನವಿ ಸ್ವೀಕರಿಸಿದಲ್ಲದೇ ಉಚಿತವಾಗಿ ಮಾಹಿತಿ ನೀಡುವಂತೆ ಸೂಚಿಸಿದರು. ನಂತರ ತಮ್ಮ ಕಾರಿನ ಡ್ರೈವರ್ ಸೀಟು ಹೊರತುಪಡಿಸಿ ಉಳಿದೆಲ್ಲಾ ಕಡೆ ದಾಖಲೆಗಳೇ ತುಂಬಿತು ಎಂದು ಅವರು ತಿಳಿಸಿದರು.

ಈ ಕುರಿತು ಡಾ.ಶರದ್ ಗುಪ್ತಾ ಅವರನ್ನು ಸಂಪರ್ಕಿಸಿದಾಗ, ಸಕಾಲದಲ್ಲಿ ಮಾಹಿತಿ ನೀಡದ ಕಾರಣ ರಾಜ್ಯದ ಬೊಕ್ಕಸಕ್ಕೆ 80,000 ರೂಪಾಯಿ ನಷ್ಟ ಮಾಡಿರುವ ಸಿಬ್ಬಂದಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸಿಎಂಎಚ್‌ಒಗೆ ಸೂಚಿಸಿರುವುದಾಗಿ ಹೇಳಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ74835 51849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/BnbLYSQaXK1Hate4P0Bt3B

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ