ಮಣಿಪಾಲ: ಮೂತ್ರಶಾಸ್ತ್ರ ವಿಭಾಗದ ಸಂಸ್ಥಾಪಕ ಡಾ.ವೇಣೋಗೋಪಾಲ್ ನಿಧನ - Mahanayaka

ಮಣಿಪಾಲ: ಮೂತ್ರಶಾಸ್ತ್ರ ವಿಭಾಗದ ಸಂಸ್ಥಾಪಕ ಡಾ.ವೇಣೋಗೋಪಾಲ್ ನಿಧನ

venugopal
31/07/2023


Provided by

ಖ್ಯಾತ ಮೂತ್ರಶಾಸ್ತ್ರಜ್ಞ ಮತ್ತು ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮೂತ್ರಶಾಸ್ತ್ರ ವಿಭಾಗದ ಸಂಸ್ಥಾಪಕ ಡಾ.ವೇಣೋಗೋಪಾಲ್ ಇಂದು ನಿಧನರಾದರು.

ಅವರಿಗೆ 83 ವರ್ಷ ವಯಸ್ಸಾಗಿತ್ತು. ಇವರು ಪ್ರಸ್ತುತ ಮಾಹೆ  ಮಣಿಪಾಲದ  ಬೋಧನಾ ಆಸ್ಪತ್ರೆಗಳ   ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿರುವ  ಡಾ.ಆನಂದ್ ವೇಣುಗೋಪಾಲ್ ಅವರ ತಂದೆ.

ಕಸ್ತೂರ್ಬಾ ಆಸ್ಪತ್ರೆ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿನ ಮೂತ್ರಶಾಸ್ತ್ರ ವಿಭಾಗಕ್ಕೆ ಸುಧೀರ್ಘ ಸೇವೆಯು ಮತ್ತು ಅವರು ವಿಭಾಗಕ್ಕೆ ನೀಡಿದ  ಕೊಡುಗೆ ಮರೆಯಲಾಗದು.  ಅವರ  ಜ್ಞಾನವು ಈಗ ದೇಶ ಮತ್ತು ವಿದೇಶಗಳ ವಿವಿಧ ಭಾಗಗಳಲ್ಲಿ  ಕಾರ್ಯನಿರ್ವಹಿಸುತ್ತಿರುವ  ಮೂತ್ರಶಾಸ್ತ್ರಜ್ಞರ ಮೂಲಕ ಪಸರಿಸಿದೆ .

ಅವರ ಕುಟುಂಬಕ್ಕೆ ಆದ  ನಷ್ಟವನ್ನು ಭರಿಸುವ ಶಕ್ತಿಯನ್ನು  ದೇವರು ಕರುಣಿಸಲಿ ಎಂದು  ಕಸ್ತೂರ್ಬಾ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಪ್ರಾರ್ಥಿಸುತ್ತದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ74835 51849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿhttps://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿhttps://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿhttps://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ