ಪರಿಸರ ಸ್ನೇಹಿ ಬೋಯಿಂಗ್‌ ಹೊಂದಿರುವ ವಿಮಾನವನ್ನು ಪರಿಚಯಿಸಿದ ಆಕಾಸ ಏರ್‌ ಲೈನ್‌ - Mahanayaka
12:41 AM Saturday 23 - August 2025

ಪರಿಸರ ಸ್ನೇಹಿ ಬೋಯಿಂಗ್‌ ಹೊಂದಿರುವ ವಿಮಾನವನ್ನು ಪರಿಚಯಿಸಿದ ಆಕಾಸ ಏರ್‌ ಲೈನ್‌

airline
01/08/2023


Provided by

ಬೆಂಗಳೂರು: ಕಡಿಮೆ ಇಂಧನ ಉಗುಳುವ, ದೇಶದಲ್ಲೇ ಮೊದಲ ಪರಿಸರ ಸ್ನೇಹಿ ಬೋಯಿಂಗ್‌ ಹೊಂದಿರುವ ೨೦ನೇ ವಿಮಾನವನ್ನು ಆಕಾಸ ಏರ್‌ಲೈನ್‌ ಇಂದು ಪರಿಚಯಿಸಿದೆ.

ಪರಿಸರ ಸ್ನೇಹಿ ಬೋಯಿಂಗ್ ಆದ 737 MAX , 737-8-200 ವಿಮಾನವು ಇಂದು ಬೆಳಗ್ಗೆ 9.31ಕ್ಕೆ ಬೆಂಗಳೂರಿಗೆ ಆಗಮಿಸಿತು. ಈ ನೂತನ ವಿಮಾನವನ್ನು ಯುಎಸ್‌ಎನ ಸಿಯಾಟಲ್‌ನಲ್ಲಿ ಈ ವಿಮಾನಯಾನವು ಹೊರಟು ಇಂದು ಬೆಂಗಳೂರಿಗೆ ಬಂದು ತಲುಪಿದೆ.

ಕಳೆದ ವರ್ಷದ ತನ್ನ ವಿಮಾನಯಾವನ್ನು ಪ್ರಾರಂಭಿಸಿದ ಆಕಾಸ ವಿಮಾನ ಸಂಸ್ಥೆಯು ಒಂದು ವರ್ಷದೊಳಗೆ ೨೦ ವಿಮಾನವನ್ನು ವಿವಿಧ ಮಾರ್ಗಗಳಿಗೆ ತೆರೆದಿದೆ. ಇನ್ನು, ವಿಮಾನನೌಕಾಪಡೆಗೆ ಸೇರ್ಪಡೆಗೊಳ್ಳಬೇಕೆಂದರೆ, ಕನಿಷ್ಠ ೨೦ ವಿಮಾನಗಳನ್ನು ಹೊಂದಿರಬೇಕು. ಇದೀಗ ತನ್ನ ೨೦ನೇ ವಿಮಾನವನ್ನು ಪರಿಚಯಿಸಿರುವ ಆಕಾಸ ವಿಮಾನ ಸಂಸ್ಥೆ ಇದೀಗ ವಿಮಾನನೌಕಾಪಡೆಗೂ ಸೇರ್ಪಡೆಗೊಂಡಿದೆ.

ಈ ಕುರಿತು ಮಾತನಾಡಿದ ಆಕಾಸ ಏರ್‌ನ ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿನಯ್ ದುಬೆ, ಆಕಾಸ ವಿಮಾನಯಾನ ಪ್ರಾರಂಭಗೊಂಡ ಒಂದೇ ವರ್ಷದಲ್ಲಿ ತನ್ನ ವಿಮಾನಗಳ ಸಂಖ್ಯೆಯನ್ನು ೨೦ಕ್ಕೆ ಹೆಚ್ಚಿಸಿಕೊಂಡಿರುವುದು ಹೆಮ್ಮೆ ಎನಿಸುತ್ತಿದೆ. ಅದೂ ಅಲ್ಲದೆ, ಮೊದಲ ಬಾರಿಗೆ ಬೋಯಿಂಗ್‌ 737 MAX ವಿಮಾನ ಪಡೆದ ಸಂಸ್ಥೆಯೂ ನಮ್ಮದಾಗಿದೆ. ಈ ಬೋಯಿಂಗ್‌ನ ವಿಶೇಷತೆ ಎಂದರೆ, ಇದು ಸಾಮಾನ್ಯ ಎಂಜಿನ್‌ಗಿಂತ ಶೇ.೨೦ರಷ್ಟು ಕಡಿಮೆ ಇಂಧನ ಉಗುಳಲಿದ್ದು, ಹೆಚ್ಚು ಪರಿಸರ ಸ್ನೇಹಿ ವಿಮಾನವಾಗಲಿದೆ.

ಇಂಧನ ದಕ್ಷತೆಯನ್ನು ಸಹ ಇದು ಕಾಪಾಡಿಕೊಳ್ಳಲು ಹೆಚ್ಚು ಸಹಕಾರಿಯಾಗಿದೆ. ಈ ಬೋಯಿಂಗ್‌ನಿಂದ ಗ್ರಾಹಕರಿಗೆ ಆರಾಮದಾಯಕ ಪ್ರಯಾಣ ದೊರೆಯಲಿದೆ. ಇದಷ್ಟೇ ಅಲ್ಲದೆ, ಬೇರೆ ವಿಮಾನಗಳಂತೆ ಇದು ಹೆಚ್ಚು ಶಬ್ಧ ಮಾಡುವುದಿಲ್ಲ. ಶೇ.೫೦ರಷ್ಟು ಕಡಿಮೆ ಶಬ್ಧ ಮಾಡಲಿದ್ದು, ಶಬ್ಧ ಮಾಲಿನ್ಯವನ್ನು ತಡೆಯಲಿದೆ ಎಂದು ವಿವರಿಸಿದರು.

ಆಗಸ್ಟ್ 2022ರಲ್ಲಿ ವಾಣಿಜ್ಯ ಕಾರ್ಯಾಚರಣೆಯನ್ನು ಪ್ರಾರಂಭಿಸಿದ ಆಕಾಸ ವಿಮಾನಸಂಸ್ಥೆಯು ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ವಿಮಾನಯಾನ ಸಂಸ್ಥೆಯಾಗಿದೆ. ಇಂದು ಇದು 20 ವಿಮಾನಗಳ ಸಮೂಹವನ್ನು ಹೊಂದಿದೆ ಮತ್ತು ಇದುವರೆಗೆ 4 ಮಿಲಿಯನ್ ಪ್ರಯಾಣಿಕರನ್ನು ಸಾಗಿಸಿದೆ, 16 ಭಾರತೀಯ ನಗರಗಳನ್ನು ಸಂಪರ್ಕಿಸುವ 35 ವಿವಿಧ ಮಾರ್ಗಗಳಲ್ಲಿ ಹಾರಾಟ ನಡೆಸುತ್ತಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 74835 51849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/D73015iu7jn2glm2MECosd

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ