ಪತ್ನಿಯ ಬೆರಳನ್ನೇ ಕಚ್ಚಿ ತಿಂದ ವಿಕೃತ ಗಂಡ - Mahanayaka

ಪತ್ನಿಯ ಬೆರಳನ್ನೇ ಕಚ್ಚಿ ತಿಂದ ವಿಕೃತ ಗಂಡ

crime
03/08/2023


Provided by

ಬೆಂಗಳೂರು ಗಂಡನೊಬ್ಬ ತನ್ನ ಹೆಂಡತಿಯ ಬೆರಳನ್ನೇ ಕಚ್ಚಿ ತಿಂದಿರುವ ವಿಕೃತ ಘಟನೆ ಕೋಣನಕುಂಟೆ ವ್ಯಾಪ್ತಿಯಲ್ಲಿ ನಡೆದಿದೆ.

ಹೆಂಡತಿ ಜೊತೆ ಜಗಳವಾಡುತ್ತಿದ್ದಾಗ ಆಕೆಯ ಎಡಗೈ ಬೆರಳನ್ನೇ ಕಚ್ಚಿ ತಿಂದಿದ್ದಾನೆ ಎನ್ನಲಾಗಿದೆ. ಪುಷ್ಪಾ (40) ಎಂಬ ಮಹಿಳೆಯ ಗಂಡ ವಿಜಯಕುಮಾರ್ ಬೆರಳನ್ನು ಕಚ್ಚಿ ತಿಂದ ಗಂಡನಾಗಿದ್ದಾನೆ.

23 ವರ್ಷಗಳ ಹಿಂದೆ ಪುಷ್ಪಾ ವಿಜಯ್ ಕುಮಾರ್ ಎಂಬಾತನನ್ನು ಮದುವೆಯಾಗಿದ್ದು ಈ ದಂಪತಿಗೆ ಒಬ್ಬ ಮಗನಿದ್ದಾನೆ. ಮದುವೆಯಾದ ಕೆಲ ವರ್ಷಗಳಿಂದ ವಿಜಯ್ಕುಮಾರ್ ಪತ್ನಿಗೆ ಕಿರುಕುಳ ನೀಡುತ್ತಿದ್ದ ಎಂದು ಪತ್ನಿ ಆರೋಪಿಸಿದ್ದಾರೆ.

ವಿವಾಹದ ಬಳಿಕ ಪತ್ನಿಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದ.ಪತಿಯ ಕಿರುಕುಳದಿಂದ ಬೇಸತ್ತ ಪತ್ನಿ ಬೇರೆಡೆ ಮನೆ ಮಾಡಿ ಪತಿಯಿಂದ ದೂರವಿದ್ದರು.ಆದರೆ ಜುಲೈ 28ನೇ ತಾರೀಕು ಪತಿ ವಿಜಯ್ಕುಮಾರ್ ಪತ್ನಿ ವಾಸಿಸುತ್ತಿದ್ದ ಮನೆಗೆ ತೆರಳಿ ಜಗಳವಾಡಿದ್ದ. ಈ ವೇಳೆ ಪತ್ನಿಯ ಬೆರಳನ್ನು ಪತಿ ಕಚ್ಚಿ ತಿಂದಿದ್ದು, ನಿನ್ನನ್ನು ಕೂಡಾ ಕೊಂದು ಇದೇ ರೀತಿ ತಿನ್ನುವುದಾಗಿ ಬೆದರಿಕೆ ಹಾಕಿದ್ದಾನೆ.

ಅಲ್ಲದೇ ರೌಡಿಶೀಟರ್‌ ಗಳನ್ನು ಬಿಟ್ಟು ಕೊಲೆ ಮಾಡಿಸುವುದಾಗಿ ಪತ್ನಿಗೆ ಹೆದರಿಸಿದ್ದಾನೆ ಎಂದು ಆರೋಪಿಸಲಾಗಿದೆ. ಈ ಕುರಿತು ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 74835 51849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/D73015iu7jn2glm2MECosd

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ