ಪಾಕಿಸ್ತಾನದಲ್ಲಿ ನೆಲಬಾಂಬ್ ಸ್ಫೋಟ: ಏಳು ಮಂದಿ ದುರ್ಮರಣ - Mahanayaka
12:08 PM Wednesday 22 - October 2025

ಪಾಕಿಸ್ತಾನದಲ್ಲಿ ನೆಲಬಾಂಬ್ ಸ್ಫೋಟ: ಏಳು ಮಂದಿ ದುರ್ಮರಣ

fire
08/08/2023

ಪಾಕಿಸ್ತಾನದ ಬಲೂಚಿಸ್ತಾನದ ಪಂಜ್‌ಗುರ್ ಜಿಲ್ಲೆಯಲ್ಲಿ ನೆಲಬಾಂಬ್ ಸ್ಫೋಟಗೊಂಡು ಏಳು ಮಂದಿ ಮೃತಪಟ್ಟಿದ್ದಾರೆ.

ಪಂಜ್‌ಗುರ್ ಡೆಪ್ಯೂಟಿ ಕಮಿಷನರ್ ಅಮ್ಜದ್ ಸೊಮ್ರೊ ಪ್ರಕಾರ, ಅಪರಿಚಿತ ವ್ಯಕ್ತಿಗಳು ಬಲ್ಗತಾರ್ ಯೂನಿಯನ್ ಕೌನ್ಸಿಲ್ (ಯುಸಿ) ಅಧ್ಯಕ್ಷ ಇಶ್ತಿಯಾಕ್ ಯಾಕೂಬ್ ಅವರನ್ನು ಗುರಿಯಾಗಿಸಿಕೊಂಡು ಈ ಸ್ಫೋಟ ನಡೆಸಿದ್ದಾರೆ ಎಂದು ಹೇಳಿದ್ದಾರೆ.

ಮದುವೆ ಸಮಾರಂಭದಲ್ಲಿ ಭಾಗವಹಿಸಿ ಹಿಂದಿರುಗುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಬಲ್ಗತಾರ್ ಪ್ರದೇಶದ ಚಕರ್ ಬಜಾರ್‌ಗೆ ತಲುಪಿದಾಗ ಸ್ಫೋಟ ಸಂಭವಿಸಿದೆ. ಪರಿಣಾಮ ಕಾಲಿನಲ್ಲಿದ್ದ ಬಲ್ಗತಾರ್ ಯುಸಿ ಅಧ್ಯಕ್ಷ ಇಶ್ತಿಯಾಕ್ ಯಾಕೂಬ್ ಮತ್ತು ಕುಟುಂಬಸ್ಥರು ಹಾಗೂ ಭದ್ರತಾ ಸಿಬ್ಬಂದಿ ಸೇರಿ ಏಳು ಮಂದಿ ಮೃತಪಟ್ಟಿದ್ದಾರೆ.
ಮೃತರನ್ನು ಸರ್ಫರಾಜ್ ಮತ್ತು ಹೈದರ್, ಮೊಹಮ್ಮದ್ ಯಾಕೂಬ್, ಇಬ್ರಾಹಿಂ, ವಾಜಿದ್, ಫಿದಾ ಹುಸೇನ್ ಎಂದು ಗುರುತಿಸಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ74835 51849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/BnbLYSQaXK1Hate4P0Bt3B

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ