ಇದೇನಿದು ಹೊಸ ಚಳುವಳಿಯೋ?: ರಸ್ತೆ ತಡೆ ನಡೆಸ್ತಾ ಇರೋ ಬಿಡಾಡಿ ದನಗಳು! - Mahanayaka

ಇದೇನಿದು ಹೊಸ ಚಳುವಳಿಯೋ?: ರಸ್ತೆ ತಡೆ ನಡೆಸ್ತಾ ಇರೋ ಬಿಡಾಡಿ ದನಗಳು!

08/08/2023


Provided by

ಕೊಟ್ಟಿಗೆಹಾರ:   ಕೊಟ್ಟಿಗೆಹಾರ ಪಟ್ಟಣದಲ್ಲಿ ಬಿಡಾಡಿ ದನಗಳ ಹಾವಳಿ ಹೆಚ್ಚಾಗಿದ್ದು, ವಾಹನ ಸವಾರರು ವರ್ತಕರು ಕಿರಿಕಿರಿ ಅನುಭವಿಸುವಂತಾಗಿದೆ.

ಪೇಟೆಯಲ್ಲಿ ಹಗಲು ರಾತ್ರಿ ಎನ್ನದೇ ಇಪ್ಪತ್ತಕ್ಕೂ ಹೆಚ್ಚು ದನಗಳು  ರಸ್ತೆ, ರಾಜ್ಯ ಸಾರಿಗೆ ಬಸ್ ನಿಲ್ದಾಣಗಳಲ್ಲಿ ಬೇಕಾಬಿಟ್ಟಿ ಓಡಾಡುತ್ತಿರುತ್ತವೆ.ಹಗಲಿನಲ್ಲಿ ರಸ್ತೆಯಲ್ಲಿಯೇ ಮಧ್ಯೆ ನಿಲ್ಲುವ ದನಗಳು ರಾತ್ರಿಯಾದರೆ ಬಸ್ ನಿಲ್ದಾಣದಲ್ಲಿ ಗುಂಪುಗಟ್ಟಿ ಮಲಗಿ ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿವೆ.

ಬಸ್ ನಿಲ್ದಾಣವೂ ಗಂಜಲ ಮತ್ತು ಸಗಣಿಯಿಂದ ಇಡಿ ಪ್ರದೇಶವನ್ನೇ ಕಲುಷಿತಗೊಳಿಸುತ್ತವೆ. ಕೆಲವು ದನಗಳು ದ್ವಿಚಕ್ರ , ಕಾರು ಸವಾರರ ಚಾಲನೆಗೆ ತೊಂದರೆಯಾಗುತ್ತಿದ್ದು ದನಗಳ ಗುದ್ದಾಟದಿಂದ ರಸ್ತೆಗೆ ಎಗರಿ ವಾಹನ  ಸವಾರರು ರಸ್ತೆಗೆ ಬಿದ್ದು ಮಾರಣಾಂತಿಕವಾಗಿ ಗಾಯವಾಗುವಂತೆ ಮಾಡುತ್ತವೆ. ಬಿಡಾಡಿ ದನಗಳನ್ನು ಕೇಳುವವರೇ ಇಲ್ಲದಂತಾಗಿದೆ.

ದನಗಳ ನಿಗಾ ವಹಿಸದೇ ಇರುವುದರಿಂದ ದನಗಳು ಬಿಡಾಡಿ ದನಗಳಾಗಿ ಪರಿವರ್ತನೆಯಾಗಿವೆ.  ದನಗಳ ಕಿವಿಗಳಿಗೆ ಪಶು ವೈದ್ಯ ಇಲಾಖೆಯಲ್ಲಿ  ವಿಮೆ ಮಾಡಿಸಿ ಕಿವಿಗೆ ದನದ ಗುರುತಿನ ಕಿವಿ ಪಟ್ಟಿ ಹಾಕಲಾಗುತ್ತಿದ್ದು, ಇದರಿಂದ ದನಗಳ ಮಾಲೀಕರನ್ನು ಪತ್ತೆ ಮಾಡಿ ದನಗಳ ನಿಗಾ ವಹಿಸುವಂತೆ ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

‘ಬಿಡಾಡಿ ದನಗಳ ಹಾವಳಿಯಿಂದ ಜನರಿಗೆ ವಾಹನ ಸವಾರರಿಗೆ ಕಿರಿಕಿರಿಯಾಗುತ್ತಿದ್ದು ಗ್ರಾಮ ಪಂಚಾಯಿತಿ ವತಿಯಿಂದ ಬಿಡಾಡಿ ದನಗಳ ಸ್ಥಳಾಂತರ ಅಥವಾ ದನಗಳ ಮಾಲೀಕರಿಗೆ ದನಗಳು ನಿಗಾ ವಹಿಸುವಂತೆ  ಸೂಚಿಸಬೇಕು’ ಎಂದು ವರ್ತಕ ವಿಕ್ರಂ ಗೌಡ ಮನವಿ ಮಾಡಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 7483551849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ