ಬಿಬಿಎಂಪಿ ‌ಬೆಂಕಿ ಪ್ರಕರಣ: ಮೂವರು ಪೊಲೀಸರ ವಶಕ್ಕೆ: ಸೃಷ್ಟಿಯಾಗಿರೋ ಅನುಮಾನ ಏನ್ ಗೊತ್ತಾ? - Mahanayaka
1:08 AM Thursday 18 - December 2025

ಬಿಬಿಎಂಪಿ ‌ಬೆಂಕಿ ಪ್ರಕರಣ: ಮೂವರು ಪೊಲೀಸರ ವಶಕ್ಕೆ: ಸೃಷ್ಟಿಯಾಗಿರೋ ಅನುಮಾನ ಏನ್ ಗೊತ್ತಾ?

bbmp fire
12/08/2023

ಬೆಂಗಳೂರು: ಕಳೆದ ಶುಕ್ರವಾರ ಬಿಬಿಎಂಪಿಯ ಗುಣನಿಯಂತ್ರಣ ವಿಭಾಗದ ಪ್ರಯೋಗಾಲಯ ಮತ್ತು ಕಚೇರಿ ಕಟ್ಟಡದಲ್ಲಿ ಬೆಂಕಿ ಹೊತ್ತಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಶುಕ್ರವಾರ ತಡರಾತ್ರಿಯ ವರೆಗೂ ಪೊಲೀಸರು ತೀವ್ರ ವಿಚಾರಣೆ ನಡೆಸಿದ್ದಾರೆ. ವಶಕ್ಕೆ ಪಡೆದ ಮೂವರು ಡಿ ಗ್ರೂಪ್ ನೌಕರರಾಗಿದ್ದಾರೆ. ಲ್ಯಾಬ್‌ ನಲ್ಲಿ ಅಗ್ನಿ ಅವಘಡ ಆದಾಗ ಮೂವರು ಸ್ಥಳದಲ್ಲೇ ಇದ್ದರು. ಅಗ್ನಿ ಅವಘಡ ಸಂಭವಿಸಿದಾಗ ಮೊದಲಿಗೆ ಆಚೆಗೆ ಓಡಿ ಬಂದಿದ್ದಾರೆ. ಸದ್ಯ ಡಿ ಗ್ರೂಪ್ ನೌಕರರು ಗುಣನಿಯಂತ್ರಣ ಪ್ರಯೋಗಾಲಯಕ್ಕೆ ಹೋಗಿದ್ದೇಕೆ? ಎಂಬ ಪ್ರಶ್ನೆ ಮೂಡಿದೆ. ಆದ್ರೆ ಗುಣಮಟ್ಟ ಪರಿಶೀಲನೆ ಮಾಡಬೇಕಾದ ಹಿರಿಯ ಅಧಿಕಾರಿಗಳು ಡಿ ಗ್ರೂಪ್ ನೌಕರರಿಂದ ಕೆಲಸ ಮಾಡಿಸುತ್ತಿದ್ದರು. ಆದ್ದರಿಂದಲೇ ಈ ಮೂವರು ಅಲ್ಲಿಗೆ ಹೋಗಿದ್ದರೆನ್ನಲಾಗಿದೆ.

ಇಬ್ಬರು ಎಂಜಿನಿಯರ್ ಹಾಗೂ ಒಬ್ಬ ಗುಮಾಸ್ತನನ್ನು ವಶಕ್ಕೆ ಪಡೆದಿದ್ದಾರೆ. ಇವರು ಘಟನಾ ಸ್ಥಳದಲ್ಲಿದ್ದರೂ ಗಾಯಗೊಂಡಿಲ್ಲ. ಇದರಿಂದ ಅನುಮಾನಗೊಂಡಿರುವ ಪೊಲೀಸರು ಮೂವರನ್ನ ವಶಕ್ಕೆ ಪಡೆದು ಡಿಸಿಪಿ ಶ್ರೀನಿವಾಸ್ ಗೌಡ ನೇತೃತ್ವದಲ್ಲಿ ವಿಚಾರಣೆ ನಡೆಸುತ್ತಿದ್ದಾರೆ.

ಇತ್ತೀಚಿನ ಸುದ್ದಿ