ಅವಳಿ ಮಕ್ಕಳ ಪೈಕಿ ಮೂರು ತಿಂಗಳ ಹೆಣ್ಣು ಮಗು ಏಕಾಏಕಿ ಸಾವು!

12/08/2023
ಬ್ರಹ್ಮಾವರ: ಹೆಗ್ಗುಂಜೆ ಗ್ರಾಮದ ಹೊರ್ಲಿ ಜೆಡ್ಡುವಿನ ಜಾನುವಾರು ಕಟ್ಟೆ ಎಂಬಲ್ಲಿ ಆ.11ರಂದು ತಡರಾತ್ರಿ ವೇಳೆ ಮನೆಯಲ್ಲಿ ಮಲಗಿದ್ದ ಅವಳಿ ಮಕ್ಕಳ ಪೈಕಿ ಮೂರು ತಿಂಗಳ ಹೆಣ್ಣು ಮಗುವೊಂದು ಮೃತಪಟ್ಟ ಬಗ್ಗೆ ವರದಿಯಾಗಿದೆ.
ಜಾನುವಾರುಕಟ್ಟೆಯ ವಾಣಿ ಎಂಬವರ ಪುತ್ರಿ ರಿಷಿಕಾ ಮೃತ ದುದೈರ್ವಿ. ಅವಳಿ ಜವಳಿ ಮಕ್ಕಳ ಪೈಕಿ ಮೊದಲು ಗಂಡು ಮಗುವಿಗೆ ಹಾಲು ಕುಡಿಸಿ ಮಲಗಿಸಿ, ನಂತರ ಹೆಣ್ಣು ಮಗುವಿಗೆ ಹಾಲು ಕುಡಿಸಲು ಹೋದಾಗ ಮಗು ಮೃತಪಟ್ಟಿರುವುದು ಕಂಡುಬಂತು.
ಮಗು ರಿಷಿಕಾ ಯಾವುದೋ ಖಾಯಿಲೆ ಯಿಂದ ಮೃತಪಟ್ಟಿರಬಹುದು ಎಂದು ತಿಳಿದುಬಂದಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.