ಹಿಂದೂ ಹುಡುಗರಿಗೂ ಗಂಡಸ್ತನ, ಮೀಸೆ ಇದೆ ಎಂದ ಸ್ವಾಮೀಜಿ! - Mahanayaka
12:16 AM Thursday 30 - October 2025

ಹಿಂದೂ ಹುಡುಗರಿಗೂ ಗಂಡಸ್ತನ, ಮೀಸೆ ಇದೆ ಎಂದ ಸ್ವಾಮೀಜಿ!

bharati swamiji
14/08/2023

ಬೆಂಗಳೂರು: ಹಿಂದೂ ಹುಡುಗರಿಗೂ ಗಂಡಸ್ತನ ಮೀಸೆ ಇದೆ. ಹಿಂದೂ ಹುಡುಗರು ಕೂಡ ಮುಸ್ಲಿಂ ಹುಡುಗಿಯರನ್ನು ಲವ್ ಮಾಡಿ ಮತಾಂತರ ಮಾಡಬೇಕಾಗುತ್ತದೆ ಎಂದು ಸಿದ್ದರೂಢ ಇಂಟರ್ ನ್ಯಾಷನಲ್ ಗುರುಕುಲಂನ ಆರೂಢ ಭಾರತೀ ಸ್ವಾಮೀಜಿಗಳು ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.

ಮಲ್ಲೇಶ್ವರಂನಲ್ಲಿ ಸಂತರ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಸ್ವಪ್ರೇರಣೆಯಿಂದ ಮತಾಂತರ ಆಗುವುದರಲ್ಲಿ ತಪ್ಪಿಲ್ಲ. ಬಲವಂತವಾಗಿ ಮತಾಂತರ ಮಾಡುವುದು ಅಪರಾಧ. ಹಿಂದೂಗಳು ಸಂಕುಚಿತರಲ್ಲ, ನಾನು ಸಹ ಬೈಬಲ್ ಹಾಗೂ ಕುರಾನ್ ಓದಿದ್ದೇನೆ ಎಂದರು.

ಹಿಂದೂಗಳ ದೇವಸ್ಥಾನ ಹಾಗೂ ಮಂದಿರಗಳನ್ನು ಒಡೆದು ಹಾಕಿ ಆ ಧರ್ಮದ ಅನುಯಾಯಿಗಳು ನೆಲೆನಿಲ್ಲದಂತೆ ನಾಶ ಮಾಡಬೇಕು ಎಂದು ಸ್ಪಷ್ಟವಾಗಿ ಬೈಬಲ್‍ನಲ್ಲಿ ಹೇಳಿದ್ದಾರೆ. ಇದಕ್ಕೆ ಮುಸ್ಲಿಮರು ಹೊರತಾಗಿಲ್ಲ.ಭಾರತದ ಸ್ವಾತಂತ್ರ್ಯ ನಂತರ ಹಿಂದೂ, ಜೈನ, ಸಿಖ್, ಬೌದ್ಧರ ಜನಸಂಖ್ಯೆ ಇಳಿಕೆ ಆಗುತ್ತಿದೆ. ಮುಸ್ಲಿಂ ಹಾಗೂ ಕ್ರೈಸ್ತರ ಸಂಖ್ಯೆ ಹೆಚ್ಚಾಗುತ್ತಿದೆ. ಇದು ಬಲವಂತದ ಮತಾಂತರದ ಪರಿಣಾಮವನ್ನು ಸೂಚಿಸುತ್ತದೆ. ಇವರ ಸಂಖ್ಯೆ ಹೆಚ್ಚಾಗಿದ್ದೆ ಹಿಂದೂಗಳಿಂದ. ಲವ್ ಜಿಹಾದ್ ಹಾಗೂ ಮತಾಂತರದ ಮೂಲಕ ಜನಸಂಖ್ಯೆ ಹೆಚ್ಚು ಮಾಡಿಕೊಳ್ಳುತ್ತಿದ್ದಾರೆ ಎಂದಿದ್ದಾರೆ.

ಇತ್ತೀಚಿನ ಸುದ್ದಿ