ದುರಂತ: ಶಿಮ್ಲಾದಲ್ಲಿ ಕುಸಿದ ದೇವಾಲಯ; 9 ಮಂದಿ ಸಾವು - Mahanayaka
11:43 AM Thursday 18 - December 2025

ದುರಂತ: ಶಿಮ್ಲಾದಲ್ಲಿ ಕುಸಿದ ದೇವಾಲಯ; 9 ಮಂದಿ ಸಾವು

14/08/2023

ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ಸೋಮವಾರ ಭಾರೀ ಮಳೆಯಿಂದಾಗಿ ಶಿವ ದೇವಾಲಯ ಕುಸಿದು ಒಂಬತ್ತು ಜನರು ಸಾವನ್ನಪ್ಪಿದ್ದಾರೆ ಎಂದು ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸಿಖು ತಿಳಿಸಿದ್ದಾರೆ. ಸಮ್ಮರ್ ಹಿಲ್ ಪ್ರದೇಶದ ದೇವಾಲಯದಲ್ಲಿ ಭೂಕುಸಿತದಲ್ಲಿ ಡಜನ್‌ಗಟ್ಟಲೆ ಜನರು ಸಿಲುಕಿರುವ ಶಂಕೆ ಇದ್ದು, ಪೊಲೀಸರು ಮತ್ತು ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆ (ಎಸ್ಡಿಆರ್ ಎಫ್) ಅಧಿಕಾರಿಗಳು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಸಾವನ್ ಸಂದರ್ಭದಲ್ಲಿ ಪ್ರಾರ್ಥನೆ ಸಲ್ಲಿಸಲು ಭಕ್ತರು ಜಮಾಯಿಸಿದ್ದರು. ಘಟನೆ ನಡೆದಾಗ ಸುಮಾರು 50 ಜನರು ಜಮಾಯಿಸಿದ್ದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇನ್ನೂ ಅವಶೇಷಗಳಡಿ ಸಿಲುಕಿರುವ ವ್ಯಕ್ತಿಗಳನ್ನು ಸ್ಥಳೀಯ ಆಡಳಿತ ಕಾರ್ಯಾಚರಣೆ ಮಾಡುತ್ತಿದೆ.

ದೇವಾಲಯ ಕುಸಿದ ಸ್ಥಳಕ್ಕೆ ಮುಖ್ಯಮಂತ್ರಿ ಇಂದು ಭೇಟಿ ನೀಡಲಿದ್ದಾರೆ. ಹಿಮಾಚಲ ಪ್ರದೇಶದಲ್ಲಿ ಕಳೆದ 48 ಗಂಟೆಗಳಿಂದ ನಿರಂತರವಾಗಿ ಮಳೆಯಾಗುತ್ತಿದೆ. ಬಿಯಾಸ್ ನದಿಯ ನೀರಿನ ಮಟ್ಟ ಹೆಚ್ಚಾಗಿದೆ. ಹೀಗಾಗಿ ಮಳೆಯಿಂದ ಆದ ಅವಘಡದಲ್ಲು ಕೆಲವರು ಸಾವನ್ನಪ್ಪಿದ್ದಾರೆ. ಶಿವ ದೇವಾಲಯ ಕುಸಿದ ನಂತರ ಒಂಬತ್ತು ಶವಗಳನ್ನು ಹೊರತೆಗೆಯಲಾಗಿದೆ. ನಾನು ಸ್ಥಳಕ್ಕೆ ಭೇಟಿ ನೀಡಲಿದ್ದೇನೆ. ಎಲ್ಲಾ ಅಧಿಕಾರಿಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ ಎಂದು ಹಿಮಾಚಲಪ್ರದೇಶದ ಸಿಎಂ ಇಂಡಿಯಾ ಟುಡೇಗೆ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ