ಉಪೇಂದ್ರನನ್ನ ಬುದ್ದಿವಂತ ಅನ್ಕೊಂಡಿದ್ದೆ, ಈಡಿಯಟ್ಸ್ ಅನ್ಸುತ್ತೆ: ಮಾಜಿ ಸಚಿವ  ಎನ್.ಮಹೇಶ್ ಗುಡುಗು - Mahanayaka

ಉಪೇಂದ್ರನನ್ನ ಬುದ್ದಿವಂತ ಅನ್ಕೊಂಡಿದ್ದೆ, ಈಡಿಯಟ್ಸ್ ಅನ್ಸುತ್ತೆ: ಮಾಜಿ ಸಚಿವ  ಎನ್.ಮಹೇಶ್ ಗುಡುಗು

n mahesh
14/08/2023


Provided by

ಚಾಮರಾಜನಗರ: ಗಾದೆ ಮಾತಿನ ನೆಪದಲ್ಲಿ ಜಾತಿ ನಿಂದನೆ ಮಾಡಿದ ಚಿತ್ರ ನಟ ಉಪೇಂದ್ರ ವಿರುದ್ಧ ಮಾಜಿ ಸಚಿವ ಎನ್.ಮಹೇಶ್ ಆಕ್ರೋಶ ವ್ಯಕ್ತಪಡಿಸಿದ್ದು, ಉಪೇಂದ್ರ ಈಡಿಯಟ್ಸ್ ಅನ್ಸುತ್ತೆ ಎಂದಿದ್ದಾರೆ.

ಯಾವ ಸಂದರ್ಭದಲ್ಲಿ ಏನು ಮಾತಾಡ್ಬೇಕು ಅಂತ ಗೊತ್ತಿರಬೇಕು. ಉಪೇಂದ್ರನನ್ನ ಬುದ್ದಿವಂತ ಅನ್ಕೊಂಡಿದ್ದೆ, ಆದ್ರೆ ಈಗ ತಿಳಿಯಿತು ಆತ ಬುದ್ದಿ ಇಲ್ಲದ ಮನುಷ್ಯ ಅಂತ ಎಂದು ಎನ್.ಮಹೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಉಪ್ಪು ತಿಂದವರು ನೀರು ಕುಡಿಯಲೇಬೇಕು,  ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಷಮೆ ಕೇಳಿದ್ರೆ ಆಗಲ್ಲ, ತಪ್ಪಿಗೆ ಶಿಕ್ಷೆ ಆಗಲೇಬೇಕು, ನ್ಯಾಯಾಲಯದ ಮುಂದೆ ನಿಲ್ಲೋದು ನಟನೆ ಮಾಡಿದಷ್ಟು ಸುಲಭವಲ್ಲ, ಜಾತಿ ನಿಂದನೆ ಮಾಡಿರೋದ್ರಿಂದ ಶಿಕ್ಷೆ ಆಗಲೇ ಬೇಕು ಎಂದು ಮಾಜಿ ಸಚಿವ ಎನ್. ಮಹೇಶ್ ಉಪೇಂದ್ರ ವಿರುದ್ಧ ಕಿಡಿಕಾರಿದ್ದಾರೆ.

ಇತ್ತೀಚಿನ ಸುದ್ದಿ