ಕನ್ನಡಮ್ಮನ ಕಂಗಳ ಮೂಲಕ ಭಾರತಾಂಬೆಯನ್ನು ಕಣ್ತುಂಬಿಕೊಳ್ಳೋಣ: ಹೆಚ್.ಡಿ.ಕುಮಾರಸ್ವಾಮಿ - Mahanayaka

ಕನ್ನಡಮ್ಮನ ಕಂಗಳ ಮೂಲಕ ಭಾರತಾಂಬೆಯನ್ನು ಕಣ್ತುಂಬಿಕೊಳ್ಳೋಣ: ಹೆಚ್.ಡಿ.ಕುಮಾರಸ್ವಾಮಿ

h d kumaraswamy
15/08/2023


Provided by

ಬೆಂಗಳೂರು: ಕರ್ನಾಟಕದ ಮೂಲಕ ಭಾರತವನ್ನು ನೋಡೋಣ ಎಂದು ನಾಡಿನ ಜನರಿಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಕರೆ ನೀಡಿದ್ದಾರೆ.

ಸ್ವಾತಂತ್ರ್ಯ ದಿನಾಚರಣೆ ಶುಭ ಕೋರಿದ ಸಂದೇಶದ ಭಾರತ ಹಾಗೂ ಕರ್ನಾಟಕದ ಹಿರಿಮೆಯ ಬಗ್ಗೆ ಹೇಳಿರುವ ಅವರು, ಪಂಚಭೂತಗಳ ಸಮತತ್ತ್ವ ಎಷ್ಟು ಆದರ್ಶಪ್ರಾಯವೋ ಭಾರತೀಯ ಸ್ವಾತಂತ್ರ್ಯದ ಪರಿಕಲ್ಪನೆ ಅಷ್ಟೇ ಶ್ರೇಷ್ಠ. ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರು, ಮತ್ತಿತರೆ ಅನೇಕ ಮಹಾಪುರುಷರ ತ್ಯಾಗ, ಬಲಿದಾನದ ಮಹಾಫಲವನ್ನು ಜತನದಿಂದ ಕಾಪಾಡಿಕೊಳ್ಳೋಣ ಎಂದು ತಿಳಿಸಿದ್ದಾರೆ.

ರಾಷ್ಟ್ರಕವಿ ಕುವೆಂಪು ಅವರ “ಭಾರತ ಜನನಿಯ ತನುಜಾತೆ ಜಯ ಹೇ ಕರ್ನಾಟಕ ಮಾತೆ” ಎನ್ನುವ ಮಹಾನ್ ಆಶಯದಂತೆ ಕನ್ನಡಮ್ಮನ ಕಂಗಳ ಮೂಲಕ ಭಾರತಾಂಬೆಯನ್ನು ಕಣ್ತುಂಬಿಕೊಂಡು ಆರಾಧಿಸೋಣ. ಆರಾಧನೆ, ಸಾಧನೆ ಒಟ್ಟೊಟ್ಟಿಗೆ ನಡೆದಾಗಲೇ ಗಳಿಸಿದ ಸ್ವಾತಂತ್ರ್ಯಕ್ಕೆ ಅರ್ಥ, ಪರಮಾರ್ಥ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.

ಇತ್ತೀಚಿನ ಸುದ್ದಿ