ಬಯಲು ಶೌಚದ ವಿರುದ್ಧದ ಹೋರಾಟಗಾರ ಇನ್ನೂ ನೆನಪು ಮಾತ್ರ: ಬಾರದ ಲೋಕಕ್ಕೆ ಪಯಣಿಸಿದ 'ಸುಲಭ್' ಸಂಸ್ಥಾಪಕ - Mahanayaka

ಬಯಲು ಶೌಚದ ವಿರುದ್ಧದ ಹೋರಾಟಗಾರ ಇನ್ನೂ ನೆನಪು ಮಾತ್ರ: ಬಾರದ ಲೋಕಕ್ಕೆ ಪಯಣಿಸಿದ ‘ಸುಲಭ್’ ಸಂಸ್ಥಾಪಕ

15/08/2023


Provided by

ದೇಶದಲ್ಲಿ ಬಯಲು ಶೌಚದ ವಿರುದ್ಧ ಸಮರದಲ್ಲಿ ಸಮುದಾಯ ಶೌಚಾಲಯಗಳನ್ನು ನಿರ್ಮಿಸಿ ಸುದ್ದಿಯಾಗಿದ್ದ ಸುಲಭ್ ಇಂಟರ್‌ನ್ಯಾಶನಲ್ ಸಂಸ್ಥಾಪಕ ಬಿಂದೇಶ್ವರ್ ಪಾಠಕ್ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಪಾಠಕ್ ಅವರು ಮಾನವ ಹಕ್ಕುಗಳು, ಪರಿಸರ ನೈರ್ಮಲ್ಯ, ತ್ಯಾಜ್ಯ ನಿರ್ವಹಣೆ ಮತ್ತು ಶಿಕ್ಷಣದ ಮೂಲಕ ಸುಧಾರಣೆಗಳನ್ನು ಉತ್ತೇಜಿಸಲು ಕೆಲಸ ಮಾಡುವ ಸಾಮಾಜಿಕ ಸಂಸ್ಥೆಯಾದ ಸುಲಭ್ ಇಂಟರ್‌ನ್ಯಾಷನಲ್‌ನ ಸಂಸ್ಥಾಪಕರಾಗಿದ್ದರು.

ಪಾಠಕ್ ಅವರು ಸ್ವಾತಂತ್ರ್ಯ ದಿನಾಚರಣೆಯಂದು ಬೆಳಗ್ಗೆ ರಾಷ್ಟ್ರಧ್ವಜಾರೋಹಣ ಮಾಡಿದ್ದು ಆನಂತರ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಅವರನ್ನು ದೆಹಲಿಯ ಏಮ್ಸ್‌ಗೆ ರವಾನಿಸಲಾಯಿತು. ಆದರೆ ಅಷ್ಟರಲ್ಲಿ ಪಾಠಕ್ ಮೃತಪಟ್ಟಿದ್ದರು.

ಪಾಠಕ್ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ಡಾ. ಬಿಂದೇಶ್ವರ್ ಪಾಠಕ್ ಜಿ ಅವರ ನಿಧನವು ನಮ್ಮ ದೇಶಕ್ಕೆ ತುಂಬಲಾರದ ನಷ್ಟ. ಅವರು ಸಾಮಾಜಿಕ ಪ್ರಗತಿಗಾಗಿ ಮತ್ತು ದೀನದಲಿತರ ಸಬಲೀಕರಣಕ್ಕಾಗಿ ವ್ಯಾಪಕವಾಗಿ ಕೆಲಸ ಮಾಡಿದ ದಾರ್ಶನಿಕರಾಗಿದ್ದರು. ಬಿಂದೇಶ್ವರ್ ಜಿ ಅವರು ಸ್ವಚ್ಛ ಭಾರತವನ್ನು ನಿರ್ಮಿಸಲು ತಮ್ಮ ಧ್ಯೇಯವನ್ನು ಮಾಡಿದರು. ಅವರು ಸ್ವಚ್ಛ ಭಾರತ್ ಮಿಷನ್‌ಗೆ ಬೆಂಬಲವನ್ನು ನೀಡಿದರು.

ನಮ್ಮ ವಿವಿಧ ಸಂಭಾಷಣೆಗಳ ಸಮಯದಲ್ಲಿ, ಸ್ವಚ್ಛತೆಯ ಕಡೆಗೆ ಅವರ ಉತ್ಸಾಹವು ಯಾವಾಗಲೂ ಗೋಚರಿಸುತ್ತದೆ. ಅವರ ಕೆಲಸವು ಹಲವಾರು ಜನರಿಗೆ ಸ್ಫೂರ್ತಿ ನೀಡುತ್ತದೆ. ಈ ಕಷ್ಟದ ಸಮಯದಲ್ಲಿ ಅವರ ಕುಟುಂಬ ಮತ್ತು ಪ್ರೀತಿಪಾತ್ರರಿಗೆ ನನ್ನ ಸಂತಾಪಗಳು. ಓಂ ಶಾಂತಿ ಎಂದು ಮೋದಿ ಟ್ವೀಟ್ ಮಾಡಿದ್ದಾರೆ. ಹಾಗೆಯೇ ರಾಷ್ಟ್ರಪತಿ ದ್ರೌಪದಿ ಮುರ್ಮು, ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಇತ್ತೀಚಿನ ಸುದ್ದಿ