'ಲೈಲಾಸ್ ಬ್ರದರ್ಸ್' ಚಿತ್ರದ ಮೇಲೆ ನಿಷೇಧದ ತೂಗುಕತ್ತಿ: ಇರಾನ್ ನಲ್ಲಿ ಚಿತ್ರ ನಿರ್ದೇಶಕ, ನಿರ್ಮಾಪಕನಿಗೆ ಶಿಕ್ಷೆ ಪ್ರಕಟ - Mahanayaka
11:58 PM Thursday 21 - August 2025

‘ಲೈಲಾಸ್ ಬ್ರದರ್ಸ್’ ಚಿತ್ರದ ಮೇಲೆ ನಿಷೇಧದ ತೂಗುಕತ್ತಿ: ಇರಾನ್ ನಲ್ಲಿ ಚಿತ್ರ ನಿರ್ದೇಶಕ, ನಿರ್ಮಾಪಕನಿಗೆ ಶಿಕ್ಷೆ ಪ್ರಕಟ

16/08/2023


Provided by

ಕಳೆದ ವರ್ಷ ಕ್ಯಾನೆಸ್ ಚಲನಚಿತ್ರೋತ್ಸವದಲ್ಲಿ ನಿಷೇಧಿತ ‘ಲೈಲಾಸ್ ಬ್ರದರ್ಸ್’ ಎಂಬ ಸಿನಿಮಾವನ್ನು ಪ್ರದರ್ಶಿಸಿದ್ದಕ್ಕಾಗಿ ಇರಾನ್ ನ ನ್ಯಾಯಾಲಯವು ಖ್ಯಾತ ಚಲನಚಿತ್ರ ನಿರ್ದೇಶಕ ಸಯೀದ್ ರೌಸ್ತಾಯಿಗೆ ಆರು ತಿಂಗಳ ಜೈಲು ಶಿಕ್ಷೆ ವಿಧಿಸಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಟೆಹ್ರಾನ್ ನಲ್ಲಿ ಆರ್ಥಿಕ ಸಂಕಷ್ಟಗಳೊಂದಿಗೆ ಹೋರಾಡುತ್ತಿರುವ ಕುಟುಂಬದ ಶ್ರೀಮಂತ ಮತ್ತು ಸಂಕೀರ್ಣ ಕಥೆಯಾದ ಲೈಲಾಸ್ ಬ್ರದರ್ಸ್ “ಲೈಲಾಸ್ ಬ್ರದರ್ಸ್” ಕಳೆದ ವರ್ಷ ಬಿಡುಗಡೆಯಾದಾಗಿನಿಂದ ಇರಾನ್ ನಲ್ಲಿ ನಿಷೇಧಿಸಲಾಗಿದೆ. ಈ ಚಿತ್ರವು ಕಳೆದ ವರ್ಷದ ಕ್ಯಾನೆಸ್ ಉತ್ಸವದಲ್ಲಿ ಪಾಮ್ ಡಿಓರ್ ಗಾಗಿ ಸ್ಪರ್ಧೆಯಲ್ಲಿತ್ತು. ಇದು ಅಗ್ರ ಬಹುಮಾನವನ್ನು ಕಳೆದುಕೊಂಡಿತ್ತು. ಆದರೆ ಇಂಟರ್ ನ್ಯಾಷನಲ್ ಫೆಡರೇಶನ್ ಆಫ್ ಫಿಲ್ಮ್ ಕ್ರಿಟಿಕ್ಸ್ (ಫಿಪ್ರೆಸ್ಸಿ) ಪ್ರಶಸ್ತಿಯನ್ನು ಗೆದ್ದಿತು.

ಕ್ಯಾನೆಸ್ ಚಲನಚಿತ್ರೋತ್ಸವದಲ್ಲಿ ಚಲನಚಿತ್ರವನ್ನು ಪ್ರದರ್ಶಿಸಿದ್ದಕ್ಕಾಗಿ ರೌಸ್ತಾಯಿ ಮತ್ತು ಚಿತ್ರದ ನಿರ್ಮಾಪಕ ಜಾವೇದ್ ನೊರುಜ್ಬೆಗಿ ಅವರಿಗೆ ಆರು ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ರೌಸ್ತಾಯಿ ಮತ್ತು ನೊರುಜ್ಬೆಗಿ “ಇಸ್ಲಾಮಿಕ್ ವ್ಯವಸ್ಥೆಯ ವಿರುದ್ಧ ವಿರೋಧದ ಪ್ರಚಾರಕ್ಕೆ ಕೊಡುಗೆ ನೀಡಿದ್ದಾರೆ” ಎಂದು ಸಾಬೀತಾಗಿದೆ.

ಅನುಮತಿ ಇಲ್ಲದೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರವೇಶಿಸುವ ಮೂಲಕ ನಿಯಮಗಳನ್ನು ಉಲ್ಲಂಘಿಸಿದ ನಂತರ “ಲೈಲಾಸ್ ಬ್ರದರ್ಸ್” ಅನ್ನು ನಿಷೇಧಿಸಲಾಯಿತು. ಸಂಸ್ಕೃತಿ ಸಚಿವಾಲಯದ ಕೋರಿಕೆಯಂತೆ ಸಿನಿಮಾದಲ್ಲಿನ ಅಂಶಗಳನ್ನು ಸರಿಪಡಿಸಲು ನಿರ್ದೇಶಕರು ನಿರಾಕರಿಸಿದ್ದರು ಎಂದು ಅಧಿಕೃತ ಮಾಧ್ಯಮಗಳು ಆ ಸಮಯದಲ್ಲಿ ತಿಳಿಸಿತ್ತು‌.

ಇತ್ತೀಚಿನ ಸುದ್ದಿ